More

    ಶುಶ್ರೂಷಕರು ಪ್ರತಿಯೊಬ್ಬ ರೋಗಿಗೆ ಮಾತೃ ಸಮಾನ : ಡಾ. ಶ್ರೀಧರ ಕುರಡಗಿ

    ವಿಜಯವಾಣಿ ಸುದ್ದಿಜಾಲ ಗದಗ
    ಶುಶ್ರೂಷಕರು ರೋಗಿಗೆ ಮಾತೃ ಸಮಾನ. ಶುಶ್ರೂಷಕರು ವೈದ್ಯರಷ್ಟೇ ಪ್ರಾಮುಖ್ಯತೆಯನ್ನು ಹೊಂದಿದ್ದಾರೆ ಎಂದು ವೈದ್ಯ ಶ್ರೀಧರ ಕುರಡಗಿ ಹೇಳಿದರು.
    ನಗರದ ಡಾ.ಎಸ್​. ವಿ. ತೋಟಗಂಟಿಮಠ ಕಾಲೇಜ ಆ್​ ನಸಿರ್ಂಗ್​ ವಿದ್ಯಾಲಯದಲ್ಲಿ ಜರುಗಿದ ಪ್ರಸಕ್ತ ಸಾಲಿನ ನೂತನ ಪ್ಯಾರಾ ಮೆಡಿಕಲ್​ ಹಾಗೂ ನಸಿರ್ಂಗ್​ ವಿದ್ಯಾಥಿರ್ಗಳ ಸ್ವಾಗತ ಹಾಗೂ ನಸಿರ್ಂಗ್​ ವಿದ್ಯಾಥಿರ್ಗಳ ದೀಪದಾನ ಮತ್ತು ಪ್ರತಿಜ್ಞಾವಿದಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅರೆ ವೈದ್ಯಕಿಯ ವಿದ್ಯಾಥಿರ್ಗಳು ತಮ್ಮ ಪಠ್ಯದ ಜೊತೆಗೆ ಇಂದಿನ ವೈದ್ಯಕಿಯ ಆವಿಷ್ಕಾರ ಹೊಂದಿದ ಚಿಕಿತ್ಸಾ ಕ್ರಮಗಳ ಬಗ್ಗೆ ಪ್ರಾಯೋಗಿಕವಾಗಿ ಕೌಶಲ್ಯ ತರಬೇತಿಯನ್ನು ಪಡೆದು ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುವಲ್ಲಿ ಶ್ರಮಿಸಬೇಕು ಎಂದರು.
    ಸ್ತ್ರೀ ರೋಗ ತಜ್ಞೆ ಡಾ. ಸ್ನೇಹಾ ಪಾಟೀಲ ಮಾತನಾಡಿ, ಜಾಗತಿಕವಾಗಿ ಭಾರತೀಯ ಶುಶ್ರೂಷಕರಿಗೆ ಒಳ್ಳೆಯ ಬೇಡಿಕೆ ಇದೆ. ಹೆಚ್ಚಿನ ವ್ಯಾಸಂಗ ಮಾಡುವ ಮೂಲಕ ವಿದ್ಯಾಥಿರ್ಗಳು ಉನ್ನತ ಸ್ಥಾನಮಾನವನ್ನು ಹೊಂದಬೇಕು. ಕಲಿತ ಸಂಸ್ಥೆಗೆ ಹಾಗೂ ಪಾಲಕರಿಗೆ ಶ್ರೇಯಸ್ಸನ್ನು ನೀಡಬೇಕು ಎಂದು ತಿಳಿಸಿದರು.
    ಜಿಮ್ಸ್​ ನಸಿರ್ಂಗ ಕಾಲೇಜಿನ ಪ್ರಾಚಾರ್ಯ ಶಿವನಗೌಡ ಮಲಗೌಡ್ರ ಮಾತನಾಡಿ, ವಿದ್ಯಾಥಿರ್ ಜೀವನ ಮೆಲಕು ಹಾಕುವುದರೊಂದಿಗೆ ನಸಿರ್ಂಗ್​ ವೃತ್ತಿಯ ಪ್ರಾಮುಖ್ಯತೆಯನ್ನು ಹಾಗೂ ನಸಿರ್ಂಗ್​ ೇತ್ರಕ್ಕೆ ತಮ್ಮದೆ ಆದಂತಹ ಕೊಡುಗೆಯನ್ನು ನೀಡಿದ ಮಹನೀಯರನ್ನು ಸ್ಮರಿಸಿ ಸೇವೆ ಸಲ್ಲಿಸಬೇಕು ಎಂದರು.
    ವಿ.ಬಿ. ಹುಬ್ಬಳ್ಳಿ, ವನಜಾ ತೋಟಗಂಟಿಮಠ, ಶಿವಕುಮಾರ ಕಾತರಕಿ, ವಿಜಯಕುಮಾರ ಹಿರೇಮಠ, ಅಂಬಿಕಾ ಬಳಗಾರ, ಕಿರಣಕುಮಾರ ಚಲವಾದಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts