More

    ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಮೊದಲ ಸಿನಿಮಾಗೆ ಶ್ರೀಲೀಲಾ ನಾಯಕಿ? ಚಿತ್ರದ ಮುಹೂರ್ತ ಸಮಾರಂಭಕ್ಕೆ ರಾಜಮೌಳಿ?

    ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ ಎಂಬ ಸುದ್ದಿ ತಿಳಿದೆ ಇದೆ. ಹೌದು, ತೆಲುಗಿನ ಪ್ರಸಿದ್ಧ ನಿರ್ಮಾಣ ಸಂಸ್ಥೆ ವಾರಾಹಿ ಪ್ರೊಡಕ್ಷನ್ ಅಡಿಯಲ್ಲಿ ಕಿರೀಟಿ ರೆಡ್ಡಿ ಮೊದಲ ಸಿನಿಮಾ ನಿರ್ಮಾಣವಾಗಲಿದೆ. ವಾರಾಹಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ 15ನೇ ಚಿತ್ರ ಕಿರೀಟಿಯವರದ್ದಾಗಿದೆ. ಅಂದಹಾಗೆ, ಈ ಹೆಸರಿಲ್ಲದ ಸಿನಿಮಾ ಕನ್ನಡ, ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಿದೆ. ಹೊಸಬರಾದ ರಾಧಾಕೃಷ್ಣ ಅವರು ಈ ಚಿತ್ರಕ್ಕೆ ನಿರ್ದೇಶಕರಾಗಿದ್ದು, ಈ ಸಿನಿಮಾ ಲವ್ ಕಮ್ ಫ್ಯಾಮಿಲಿ ಎಂಟರ್​ಟೈನ್​ಮೆಂಟ್ ಸಿನಿಮಾ ಆಗಿರಲಿದೆ. ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ದೇವಿಶ್ರೀಪ್ರಸಾದ್ ಈ ಸಿನಿಮಾಗೆ ಸಂಗೀತ ನೀಡಲಿದ್ದಾರಂತೆ. ಇದೀಗ, ನಟ ಕಿರೀಟ ರೆಡ್ಡಿ ಅವರ ಈ ಮೊದಲ ಸಿನಿಮಾಗೆ ನಾಯಕಿ ಶ್ರೀಲೀಲಾ ಎಂಬ ಸುದ್ದಿ ಹೊರಬಂದಿದೆ.
    ಈ ಹಿಂದೆ ಕಿರೀಟಿ ರೆಡ್ಡಿ ಅವರಿಗೆ ನಾಯಕಿ ಆಗುವ ಆ ಬೆಡಗಿ ಯಾರು ಎನ್ನುವ ಕುತೂಹಲ ಹಲವರಲ್ಲಿ ಇತ್ತು. ಅದಕ್ಕೀಗ ತೆರೆಬಿದ್ದಿದೆ. ಕನ್ನಡದ ಬೆಡಗಿಯಾದ ನಟಿ ಶ್ರೀಲೀಲಾ ಅವರೇ ಕಿರೀಟಿಗೆ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ ಎನ್ನಲಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿಯಿದೆ. ಕಿರೀಟಿ ರೆಡ್ಡಿ ನಟಿಸಲಿರುವ ಈ ಮೊದಲ ಸಿನಿಮಾದ ಟೈಟಲ್ ಅನ್ನು ಇನ್ನೂ ಚಿತ್ರತಂಡ ರಿವೀಲ್ ಮಾಡಿಲ್ಲ. ಆದರೆ, ಈ ಬಿಗ್ ಬಜೆಟ್‌ ಸಿನಿಮಾಗೆ ಮಾರ್ಚ್ 04 ರಂದು, ಅಂದರೆ ನಾಳೆ ಬೆಳಗ್ಗೆ 11:30ಕ್ಕೆ ಚಾಲನೆ ನೀಡಲಾಗುತ್ತಿದೆ. ಹೌದು, ಅಧಿಕೃತವಾಗಿ ಈ ಸಿನಿಮಾದ ಮುಹೂರ್ತ ಸಮಾರಂಭ ಬೆಂಗಳೂರಿನ ತಾಜ್ ವೆಸ್ಟ್ಎಂಡ್​ನಲ್ಲಿ ನಡೆಯಲಿದೆ. ಇನ್ನು, ಈ ಕಾರ್ಯಕ್ರಮಕ್ಕೆ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ, ನಟ ವಿ.ರವಿಚಂದ್ರನ್ ಮತ್ತು ಕನ್ನಡ ಚಿತ್ರರಂಗದ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರಂತೆ

    ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಮೊದಲ ಸಿನಿಮಾಗೆ ಶ್ರೀಲೀಲಾ ನಾಯಕಿ? ಚಿತ್ರದ ಮುಹೂರ್ತ ಸಮಾರಂಭಕ್ಕೆ ರಾಜಮೌಳಿ? ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಮೊದಲ ಸಿನಿಮಾಗೆ ಶ್ರೀಲೀಲಾ ನಾಯಕಿ? ಚಿತ್ರದ ಮುಹೂರ್ತ ಸಮಾರಂಭಕ್ಕೆ ರಾಜಮೌಳಿ?

    ಮತ್ತೋರ್ವ ಸ್ಟಾರ್ ನಟನ ಮಗಳನ್ನು ಲಾಂಚ್ ಮಾಡಲಿದ್ದಾರೆ ಕರಣ್ ಜೋಹರ್! ನಟಿಯ ಹಾಟ್ ಲುಕ್ ವೈರಲ್…

    ಹೊಸಬರ ಸಿನಿಮಾಗೆ ಸಾಥ್ ಕೊಟ್ಟ ಡಾಲಿ ಧನಂಜಯ್ ಹಾಗೂ ಲೂಸ್ ಮಾದ ಯೋಗಿ!


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts