More

    32 ಸಿನಿಮಾ ಯೂನಿಯನ್​ಗಳಿಂದ ಬಹಿಷ್ಕಾರಕ್ಕೊಳಗಾದ ರಾಮ್​ ಗೋಪಾಲ್ ವರ್ಮಾ!

    ಹೈದರಾಬಾದ್​: ಲಾಕ್​ಡೌನ್ ಅವಧಿಯಲ್ಲಿ ಒಂದಾದ ನಂತರ ಒಂದು ಸಿನಿಮಾ ಮಾಡಿ, ಆ್ಯಪ್​ ಮೂಲಕವೂ ಸಿನಿಮಾ ಬಿಡುಗಡೆ ಮಾಡಿ ಸಾಕಷ್ಟು ಸದ್ದು ಜತೆಗೆ ಸುದ್ದಿ ಮಾಡಿದ್ದರು ರಾಮ್​ ಗೋಪಾಲ್ ವರ್ಮಾ. ಇದೀಗ ಇದೇ ನಿರ್ದೇಶಕರಿಗೆ ಆತಂಕ ಎದುರಾಗಿದೆ. ವೆಸ್ಟರ್ನ್ ಇಂಡಿಯಾ ಸಿನಿ ನೌಕರರ ಒಕ್ಕೂಟದಿಂದಲೇ ಆರ್​ಜಿವಿಯನ್ನು ಬ್ಯಾನ್​ ಮಾಡಲಾಗಿದೆ!

    ಇದನ್ನೂ ಓದಿ: ಮನುರಂಜನ್ ಮನದಾಳ: ಸೋಲಿನ ಪರಾಮರ್ಶೆಯೋ? ಅವಲೋಕನವೋ?

    ಹಾಗೆ ಬ್ಯಾನ್ ಆಗಲು ಕಾರಣ ಸಿನಿಮಾ ಸಲುವಾಗಿ ದುಡಿದ ಕಾರ್ಮಿಕರಿಗೆ ಸಂಬಳ ನೀಡದ ಹಿನ್ನೆಲೆಯಲ್ಲಿ. ಹೌದು, ಆರ್​ಜಿವಿ ಅವರ ಬ್ಯಾನರ್​ನಲ್ಲಿ ಕೆಲಸ ಮಾಡಿದ ಕಲಾವಿದರಿಗೆ, ತಂತ್ರಜ್ಞರಿಗೆ ಸೇರಿ ಸಾಕಷ್ಟು ಮಂದಿಗೆ ಆರ್​ಜಿವಿ ಇನ್ನೂ ಸಂಬಳವನ್ನೇ ನೀಡಿಲ್ಲ. ಅದರ ಮೊತ್ತವೇ ಬರೋಬ್ಬರಿ 1ಕೋಟಿ 25 ಲಕ್ಷ ಮೀರಿದೆ. ಆ ಒಂದು ಕಾರಣಕ್ಕೆ ವೆಸ್ಟರ್ನ್ ಇಂಡಿಯಾ ಸಿನಿ ನೌಕರರ ಒಕ್ಕೂಟ ಸಾಕಷ್ಟು ಬಾರಿ ಈ ಬಗ್ಗೆ ಮನವಿ ಮಾಡಿದರೂ, ಯಾವುದೇ ಪ್ರತಿಕ್ರಿಯೆ ಅವರಿಂದ ಬಂದಿರಲಿಲ್ಲ. ಹಾಗಾಗಿ ಇದೀಗ ಅವರನ್ನು ನಿಷೇಧಿಸಿದೆ.

    ಇದನ್ನೂ ಓದಿ: ವಿರಾಟ್​ ಕೊಹ್ಲಿ- ಅನುಷ್ಕಾ ಶರ್ಮಾ ಪಾಪುವಿನ ಪಾದ ಅದಲುಬದಲು- ಈ ಕಾಲು ಅದಲ್ಲ… ಅದು ಇದಲ್ಲ!

    ಈ ಮೂಲಕ ಒಟ್ಟಾರೆ 32 ಸಿನಿಮಾ ಯೂನಿಯನ್​ಗಳು ಇವರೊಂದಿಗೆ ಮುಂದಿನ ದಿನಗಳಲ್ಲಿ ಕೆಲಸ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದು, ಒಕ್ಕೂಟದಿಂದ ಆರ್​ಜಿವಿಗೆ ಕಳೆದ ವರ್ಷದ ಸೆಪ್ಟಂಬರ್ 17ರಂದೇ ನೋಟಿಸ್​ ಸಹ ನೀಡಲಾಗಿತ್ತು. ಆದರೆ, ಯಾವುದಕ್ಕೂ ಪ್ರತಿಕ್ರಿಯಿಸದೇ ಅವರು ಕಣ್ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಬಿ.ಎನ್ ತಿವಾರಿ ಆರೋಪಿಸಿದ್ದಾರೆ. (ಏಜೆನ್ಸೀಸ್​)

    VIDEO| ಅರಣ್ಯದಲ್ಲಿ ದರ್ಶನ್​ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕ ಪ್ರಾಣಿ ಇದು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts