More

    ಇದೊಂದು ಫೋಟೋ ನೋಡಿ ಕರಗಿದ ನೆಟ್ಟಿಗರು; ಹರಿದು ಬಂತು ಒಂದು ಕೋಟಿ ರೂ. ಗೂ ಹೆಚ್ಚು ನೆರವು

    ಕ್ಯಾಲಿಫೋರ್ನಿಯಾ: ಫಾಸ್ಟ್​ ಮಳಿಗೆಯೊಂದರ ಹೊರಗೆ ಕುಳಿತು ಫ್ರೀ ವೈ-ಫೈ ಕನೆಕ್ಷನ್​ ಬಳಸುತ್ತಿದ್ದ ಇಬ್ಬರು ಬಾಲಕಿಯರಿಗೆ ನೆರವಿನ ಮಹಾಪೂರವೇ ಹರಿದು ಬಂದಿದೆ.

    ಇಲ್ಲಿನ ಸಾಲಿನಾಸ್​ ಪ್ರದೇಶದಲ್ಲಿದ್ದ ಟಾಕೋ ಬೆಲ್ಸ್​ ಮಳಿಗೆ ಹೊರಗೆ ಇಬ್ಬರು ಬಾಲಕಿಯರು ಕುಳಿತಿದ್ದರು. ವಿಚಾರಿಸಿದಾಗ ಶಾಲೆಯಲ್ಲಿ ನೀಡಲಾಗಿರುವ ಹೋಮ್​ ವರ್ಕ್​ ಮಾಡಲು ಇಂಟರ್​ನೆಟ್​ಗಾಗಿ ಮಳಿಗೆಯ ಫ್ರೀ ವೈ-ಫೈ ಕನೆಕ್ಷನ್​ ಬಳಸುತ್ತಿರುವುದಾಗಿ ಹೇಳಿದ್ದಾರೆ.

    ಇದನ್ನೂ ಓದಿ; ಹಣ ಕಟ್ಟೋವರೆಗೆ ರೋಗಿಯನ್ನು ನೋಡಲು ಬಿಡಲಿಲ್ಲ; ದುಡ್ಡು ಕೊಟ್ಟ ಮೇಲೆ ಪೇಷೆಂಟ್​ ಈಸ್​ ಡೆಡ್​ ಎಂದ್ರು….! 

    ವರ್ಕ್​ ಫ್ರಾಮ್​ ಹೋಮ್​ ಎಂದು ಎಲ್ಲೆಂದರಲ್ಲಿ ಕುಳಿತು ಕೆಲಸ ಮಾಡುತ್ತೇವೆ. ಉತ್ತಮ ವೈ-ಫೈ ಕನೆಕ್ಷನ್​ ಇರುವುದರಿಂದ ಅಂಥದ್ದೊಂದು ಸ್ವಾತಂತ್ರ್ಯ ನಮಗಿದೆ. ಆದರೆ, ಶಾಲಾ ಮಕ್ಕಳಿಗೂ ಇದರ ಅವಶ್ಯಕತೆ ಇದೆ ಎನ್ನುವುದನ್ನು ಮರೆತಿದ್ದೇವೆ. ಎಲ್ಲರಿಗೂ ಉತ್ತಮ ಸಂಪರ್ಕ ಸಾಧ್ಯವಾಗಬೇಕು. ಈ ಮಕ್ಕಳಿಗೆ ನೆರವೂ ಬೇಕು ಎಂದು ಮಹಿಳೆಯೊಬ್ಬರು ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದರು.

    ಇಷ್ಟಾಗುತ್ತಿದ್ದಂತೆ, ಇವರು ನಮ್ಮ ಶಾಲೆ ಮಕ್ಕಳು ಎಂದು ಗುರುತಿಸಿದ ಶಾಲೆಯವರು ಅವರಿಗಾಗಿ ಹಾಟ್​ಸ್ಪಾಟ್​ ವ್ಯವಸ್ಥೆ ಮಾಡಿದ್ದಾರೆ. ಈ ಮಕ್ಕಳ ತಾಯಿ ಒಬ್ಬ ವಲಸೆ ಕಾರ್ಮಿಕಳಾಗಿದ್ದಾಳೆ. ಜತೆಗೆ, ತಾವಿರುವ ಬಾಡಿಗೆ ಕೊಠಡಿಯನ್ನು ಬಿಡಬೇಕಾದ ಪರಿಸ್ಥಿತಿ ಎದುರಾಗಿರುವುದು ಗೊತ್ತಾಗಿದೆ. ಹೀಗಾಗಿ ಸ್ಥಳೀಯ ಉದಾರ ಹೃದಯಿಗಳು ಆನ್​ಲೈನ್​ನಲ್ಲಿ ನಿಧಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಈವರೆಗೆ ಒಂದು ಕೋಟಿ ರೂ. (1.40 ಲಕ್ಷ ಡಾಲರ್​) ಗೂ ಹೆಚ್ಚು ನೆರವು ಹರಿದು ಬಂದಿದೆ. ಹಲವರು ಅಗತ್ಯ ನೆರವು ನೀಡುವುದಾಗಿಯೂ ಹೇಳಿದ್ದಾರೆ.

    ಗ್ರಾಹಕರ ಬ್ಯಾಂಕ್​ ಖಾತೆಗೆ ಬರಲ್ಲ ಎಲ್​ಪಿಜಿ ಸಬ್ಸಿಡಿ ಹಣ; ಕಾರಣವೇನು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts