More

    ಕರೊನಾ ಲಾಕ್​ಡೌನ್​ ಎಫೆಕ್ಟ್​: ಇಂಧನ ಮಾರಾಟದಲ್ಲಿ ಭಾರಿ ಕುಸಿತ, ಎಲ್​ಪಿಜಿ ಬಳಕೆಯಲ್ಲಿ ಏರಿಕೆ

    ನವದೆಹಲಿ: ಕರೊನಾ ವೈರಸ್​ ನಿರ್ಮೂಲನೆಗಾಗಿ ರಾಷ್ಟ್ರವ್ಯಾಪಿ ಲಾಕ್​ಡೌನ್​ ಹೇರಿರುವುದರಿಂದ ವಾಹನ ಸಂಚಾರ ಸೇರಿದಂತೆ ಬಹುತೇಕ ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿರುವುದರಿಂದ ರಾಷ್ಟ್ರದಲ್ಲಿ ಇಂಧನ ಬಳಕೆ ಹಾಗೂ ಮಾರಾಟದಲ್ಲಿ ಭಾರಿ ಪ್ರಮಾಣದ ಕುಸಿತ ಕಂಡಿದೆ.

    ಎಲ್​ಪಿಜಿ ಹೊರತುಪಡಿಸಿ ಪೆಟ್ರೋಲಿಯಂ ಉತ್ಪನ್ನದಲ್ಲಿ ಏಪ್ರಿಲ್​ ಮೊದಲಾರ್ಧದಲ್ಲಿ ಶೇ 50 ರಷ್ಟು ದಾಖಲೆ ಕುಸಿತಕಂಡಿದೆ. ಪ್ರಾವಿಸನಲ್​ ಇಂಡಸ್ಟ್ರಿ ಡಾಟಾ ಪ್ರಕಾರ ಏಪ್ರಿಲ್​ ಮೊದಲಾರ್ಧದಲ್ಲಿ ಪೆಟ್ರೋಲ್​ ಬಳಕೆಯಲ್ಲಿ ಶೇ. 64 ಹಾಗೂ ಡೀಸೆಲ್​ನಲ್ಲಿ 61 ರಷ್ಟು ಇಳಿಕೆಯಾಗಿದೆ.

    ಅವಿಯೇಶನ್ ಟರ್ಬೈನ್​ ಫ್ಯುಯೆಲ್​(ಎಟಿಎಫ್​)​ ಅಥವಾ ವಿಮಾನಯಾನ ಇಂಧನ ಬಳಕೆಯಲ್ಲಿ ಬರೋಬ್ಬರಿ 94 ರಷ್ಟು ದಾಖಲೆ ಕುಸಿತ ಕಂಡಿದೆ. ವಿದೇಶಗಳಿಂದಲೇ ಕರೊನಾ ಜಾಗತಿಕವಾಗಿ ಹರಡಿರುವುದರಿಂದ ಲಾಕ್​ಡೌನ್​ಗೂ ಮುಂಚಿತವಾಗಿಯೇ ಎಲ್ಲ ವಾಯಯಾನಗಳನ್ನು ಸ್ಥಗಿತಗೊಳಿಸಿರುವುದರ ಪರಿಣಾಮ ದಾಖಲೆ ಪ್ರಮಾಣದಲ್ಲಿ ಇಂಧನ ಬಳಕೆ ಕಡಿಮೆಯಾಗಿದೆ.

    ಇವುಗಳಿಗೆ ಎಲ್​ಪಿಜಿ ಬಳಕೆ ಪ್ರಮಾಣ ತದ್ವಿರುದ್ಧವಾಗಿದ್ದು, ಎಲ್​ಪಿಜಿ ಬಳಕೆಯ ಪ್ರಮಾಣ ಹೆಚ್ಚಾಗಿದೆ. ಲಾಕ್​ಡೌನ್​ನಿಂದ ಎಲ್ಲರೂ ಮನೆಯಲ್ಲೇ ಉಳಿದಿರುವುದರಿಂದ ಬಡವರಿಗಾಗಿ ಉಚಿತ ಸಿಲಿಂಡರ್​ ಸೌಲಭ್ಯವನ್ನು ಸರ್ಕಾರ ಒದಗಿಸಿದ್ದು, ಏಪ್ರಿಲ್​ 1 ರಿಂದ 15ರವರೆಗೆ ಎಲ್​ಪಿಜಿ ಬಳಕೆಯಲ್ಲಿ 21 ರಷ್ಟು ಏರಿಕೆಯಾಗಿದೆ.

    ಒಟ್ಟಾರೆ ಪೆಟ್ರೋಲಿಯಂ ಉತ್ಪನ್ನ ಮಾರಾಟ 50 ರಷ್ಟು ಕುಸಿದಿದೆ ಎಂದು ಪ್ರಾವಿಸನಲ್​ ಇಂಡಸ್ಟ್ರಿ ಡಾಟಾ ತಿಳಿಸಿದೆ. ಡಾಟಾವೂ ಮೂರು ಸಾರ್ವಜನಿಕ ವಲಯದ ಇಂಧನ ಮಾರುಕಟ್ಟೆ ಕಂಪನಿಗಳಿಗೆ ಸಂಬಂಧಿಸಿದ್ದಾಗಿದೆ.

    ಕಳೆದ ವರ್ಷದ ಏಪ್ರಿಲ್​ ತಿಂಗಳಲ್ಲಿ ಭಾರತವು 2.4 ಮಿಲಿಯನ್​ ಟನ್​ ಪೆಟ್ರೋಲ್​ ಮತ್ತು 7.3 ಮಿಲಿಯನ್​ ಟನ್​ ಡೀಸೆಲ್​ ಹಾಗೂ 6,45,000 ಟನ್​ ಎಟಿಎಫ್​ ಅನ್ನು ಬಳಕೆ ಮಾಡಿತ್ತು. ಕಳೆದ ಮಾರ್ಚ್(2020)​ ತಿಂಗಳಲ್ಲಿ ಶೇ. 17.79 ರೊಂದಿಗೆ 16.08 ಮಿಲಿಯನ್ಸ್​ ಟನ್​ ಪೆಟ್ರೋಲಿಯಂ ಉತ್ಪನ್ನ ಬಳಕೆ ಮಾಡಿತ್ತು. (ಏಜೆನ್ಸೀಸ್​)

    ಕೋವಿಡ್​ ಭೀಕರತೆಗೆ ಸಾಕ್ಷಿಯಾದ ಆಸ್ಪತ್ರೆ: ಕರೊನಾ ಮೃತದೇಹಗಳ ಎದುರೇ ರೋಗಿಗಳಿಗೆ ಚಿಕಿತ್ಸೆ

    ಪೊಲೀಸ್‌ ವ್ಯಾನ್‌ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ: ಗರ್ಭಿಣಿಯರಿಗೆ ಲಾಕ್‌ಡೌನ್‌ ತಂದಿಟ್ಟಿದೆ ಸಂಕಷ್ಟ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts