More

    ಕಾಡಿನಲ್ಲಿ ಹಣ್ಣಿನ ಗಿಡ ನಾಟಿ, ಕೃಷಿಗೆ ಪ್ರಾಣಿ ಕಾಟ ತಡೆಯಲು ಅರಣ್ಯ ಇಲಾಖೆ ನಿರ್ಧಾರ

    ಉಡುಪಿ: ಕಾಡು ಪ್ರಾಣಿಗಳು ಆಹಾರ ಹುಡುಕಿಕೊಂಡು ನಾಡಿಗೆ ಆಗಮಿಸಿ ಕೃಷಿ ಹಾಳು ಮಾಡುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದು, ಈ ಸಮಸ್ಯೆಯನ್ನು ಬಗೆ ಹರಿಸುವ ನಿಟ್ಟಿನಲ್ಲಿ ಆರಣ್ಯ ಇಲಾಖೆ ಹೊಸ ಯೋಜನೆ ರೂಪಿಸಿದೆ. ಜಿಲ್ಲೆಯಲ್ಲಿ ಸುಮಾರು 241 ಹೆಕ್ಟೇರ್ ಪ್ರದೇಶದಲ್ಲಿ ಹಣ್ಣು ಹಂಪಲುಗಳ ಗಿಡಗಳನ್ನು ಬೆಳೆಸಲು ನಿರ್ಧರಿಸಲಾಗಿದೆ.

    ರೈತರು ಬೆಳೆದ ಬೆಳೆಗಳನ್ನು ಈ ಪ್ರಾಣಿಗಳು ಧ್ವಂಸ ಮಾಡುತ್ತಿರುವುದರಿಂದ ಅನೇಕ ಮಂದಿ ರೈತರೂ ತೋಟಗಾರಿಕಾ ಬೆಳೆ ಬೆಳೆಯುವುದನ್ನೇ ನಿಲ್ಲಿಸುತ್ತಿದ್ದಾರೆ. ಕಾಡುಪ್ರಾಾಣಿಗಳು ನಾಶ ಮಾಡಿದ ಬೆಳೆಗಳಿಗೆ ಪರಿಹಾರ ವಿತರಿಸಬೇಕಾಗಿರುವುದರಿಂದ ಕಾಡಿನಲ್ಲಿಯೇ ಪ್ರಾಣಿಗಳಿಗೆ ಅಹಾರ ಒದಗಿಸುವ ಪ್ರಯೋಗಕ್ಕೆ ಇಲಾಖೆ ಮುಂದಾಗಿದೆ. ಸ್ಥಳೀಯವಾಗಿ ಹೆಚ್ಚು ಲಭ್ಯವಿರುವ ಹಣ್ಣುಗಳ ಗಿಡಗಳನ್ನೆ ಹೆಚ್ಚಾಗಿ ಕಾಡಿನಲ್ಲೂ ಬೆಳೆಸಲಾಗುತ್ತದೆ.

    ಬೈಂದೂರು ವಲಯದ ಕಾಲ್ತೋಡು, ಶಂಕರನಾರಾಯಣ ವಲಯದ ಹೊಸಂಗಡಿ, ಕರ್ಕುಂಜೆ, ಹೆಬ್ರಿ ವಲಯದ ಪೆರ್ಡೂರು, ಹಳುವಳ್ಳಿ ಗ್ರಾಮಗಳನ್ನು ಪ್ರಥಮ ಹಂತದಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಪ್ರದೇಶಗಳಲ್ಲಿ ಹಲಸು, ಪೆಜ, ಪೇರಳೆ, ಮಾವು, ಪುನರ್ಪುಳಿ, ಸೀತಾಫಲ, ಜಾಮೂನು ಸಹಿತ ಹಲವಾರು ವಿಧದ ಹಣ್ಣುಗಳ ಗಿಡಗಳನ್ನು ಬೆಳೆಯಲಾಗುತ್ತದೆ. ಆದರೆ ಇದನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡದೆ ಸಂಪೂರ್ಣವಾಗಿ ಪ್ರಾಣಿ- ಪಕ್ಷಿಗಳಿಗಷ್ಟೇ ಮೀಸಲಿಡಲಾಗುತ್ತದೆ.

    ಗಿಡಗಳ ವಿತರಣೆ
    ಅರಣ್ಯದಲ್ಲಿ ಹಣ್ಣು ಹಂಪಲುಗಳ ಗಿಡಗಳನ್ನು ಬೆಳೆಯುವ ಜತೆಗೆ ಆಸಕ್ತ ಸಾರ್ವಜನಿಕರಿಗೂ ರಿಯಾಯಿತಿ ದರದಲ್ಲಿ ಗಿಡಗಳನ್ನು ವಿತರಿಸಲಾಗುತ್ತಿದೆ. ಗಿಡಗಳ ಪೋಷಣೆಗಾಗಿ 3 ವರ್ಷ 125 ರೂ. ಬೆಳೆಗಾರರಿಗೆ ನೀಡಲಾಗುತ್ತದೆ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ 2 ವರ್ಷಗಳಲ್ಲಿ ಬೈಂದೂರು ವಲಯದಲ್ಲಿ 77 ರೈತರಿಗೆ 14620, ಕುಂದಾಪುರ ವಲಯದಲ್ಲಿ 39 ಮಂದಿಗೆ 11582, ಶಂಕರನಾರಾಯಣ ವಲಯದಲ್ಲಿ 204 ಮಂದಿಗೆ 39815, ಉಡುಪಿ ವಲಯದಲ್ಲಿ 61 ಮಂದಿಗೆ 16337, ಹೆಬ್ರಿ ವಲಯದಲ್ಲಿ 141 ಮಂದಿಗೆ 29772, ಕಾರ್ಕಳ ವಲಯದಲ್ಲಿ 41 ಮಂದಿಗೆ 10555 ಗಿಡಗಳನ್ನು ವಿತರಿಸಲಾಗಿದೆ.

    ಕಾಡುಪ್ರಾಣಿಗಳು ರೈತರ ತೋಟಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕಾಡಿನಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಲು ನಿರ್ಧರಿಸಲಾಗಿದೆ. ಇದರಿಂದ ಪ್ರಾಾಣಿ- ಪಕ್ಷಿಗಳು ಕಾಡಿನಲ್ಲಿಯೇ ಆಹಾರ ಪಡೆದುಕೊಳ್ಳಲು ಸಾಧ್ಯವಾಗಲಿದೆ. 311 ಹೆಕ್ಟೆರ್ ಕಾಡಿನಲ್ಲಿ ಸುಮಾರು 241 ಹೆಕ್ಟೆರ್ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ಬೆಳೆಯಲಾಗುವುದು.
    -ಆಶೀಶ್ ರೆಡ್ಡಿ, ಡಿಎಫ್‌ಒ, ಕುಂದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts