More

    ಗಡಿಭಾಗದ ಏಳಿಗೆಗೆ ಅನುದಾನ ನೀಡಲಿ

    ಚಿಕ್ಕೋಡಿ: ಗಡಿಭಾಗದಲ್ಲಿ ಭಾಷೆ ಮುಂದಿಟ್ಟುಕೊಂಡು ದ್ವೇಷ ಮಾಡದೆ ಕನ್ನಡದ ಜತಗೆ ಅನ್ಯ ಭಾಷೆಗಳನ್ನೂ ಪ್ರೀತಿಸಬೇಕು ಎಂದು ಚಿಂಚಣಿ ಸಿದ್ದ ಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.

    ತಾಲೂಕಿನ ಮಲಿಕವಾಡ ಗ್ರಾಮದಲ್ಲಿ ಸಾಫಲ್ಯ ಸಮಾಜ ಸೇವಾ ಕಲಾ ಸಂಸ್ಥೆ , ಗ್ರಾಪಂ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಕಾರದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಗಡಿ ಕನ್ನಡ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಎಲ್ಲ ಭಾಷಿಕರು ಒಂದಾದರೆ ಸಮುದಾಯಿಕ ಸಾಮರಸ್ಯ ಮೂಡಿ ಅನೋನ್ಯವಾಗಿ ಬದುಕಲು ಸಾಧ್ಯವಾಗುತ್ತದೆ. ನೆರೆಹೊರೆ ರಾಜ್ಯಗಳಲ್ಲಿರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಕಾರ ಕರ್ನಾಟಕ ಸರ್ಕಾರ ರಚಿಸಿರುವುದು ಶ್ಲಾಘನೀಯ. ಗಡಿಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವ ಜತೆಗೆ ಕನ್ನಡ ಶಿಕ್ಷಣಕ್ಕೂ ಆದ್ಯತೆ ನೀಡಬೇಕು ಎಂದರು.

    ಸದಲಗಾ ಗೀತಾ ಆಶ್ರಮದ ಡಾ.ಶ್ರದ್ದಾನಂದ ಸ್ವಾಮೀಜಿ ಮಾತನಾಡಿ, ಹೊಸಬರು ಆಡುಭಾಷೆಯ ಕನ್ನಡ ಕಲಿಯಲು ಮುಂದಾಗಬೇಕು. ಕನ್ನಡ ಭಾಷೆ ಹೃದಯದ ಭಾಷೆಯಾಗಬೇಕು ಎಂದರು.

    ಉಪತಹಸೀಲ್ದಾರ್ ಪಿ.ಬಿ ಸಿರಿವಂತ ಮಾತನಾಡಿ, ಮಕ್ಕಳಿಗೆ ಕನ್ನಡದ ಜತಗೆ ಅನ್ಯಭಾಷೆಗಳನ್ನು ಕಲಿಸಲು ಪಾಲಕರು ಮುಂದಾಗಬೇಕು ಎಂದರು. ಗ್ರಾಪಂ ಅಧ್ಯಕ್ಷೆ ಅನಿತಾ ಇಂಗಳೆ ಅಧ್ಯಕ್ಷತೆ ವಹಿಸಿದ್ಧರು. ಉಪಾಧ್ಯಕ್ಷ ಸಂಭಾಜಿ ಪಾಟೀಲ, ಕಂದಾಯ ನಿರೀಕ್ಷಕ ಸಿ.ಬಿ ಹೊಂಕ್ಕಳಿ, ಎಸ್.ಎಂ.ಕುರಿ, ಅಣ್ಣಾಸಾಹೇಬ ಇಂಗಳೆ, ಭರತ ಕಲಾಚಂದ್ರ, ಲಕ್ಷ್ಮೀಬಾಯಿ ನೀಲಪ್ಪನವರ, ನಾಗರಾಜ ಮಾಲಗತ್ತೆ, ರಾಜೇಂದ್ರ ಕೋಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts