More

    ನಾಳೆಯಿಂದ ಸತೀಶ ಶುಗರ್ಸ್ ಅವಾರ್ಡ್ಸ್

    ಗೋಕಾಕ: ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಭವ್ಯ ವೇದಿಕೆಯಲ್ಲಿ ಜ.19ರಿಂದ 21ರ ವರೆಗೆ 20ನೇ ಸತೀಶ ಶುಗರ್ಸ್ ಅವಾರ್ಡ್ಸ್ ಸಾಂಸ್ಕೃತಿಕ ಕಾರ್ಯಕ್ರಮ ಪ್ರತಿದಿನ ಸಂಜೆ 5ರಿಂದ 10 ಗಂಟೆ ವರೆಗೆ ಜರುಗಲಿದೆ ಎಂದು ಸಂಘಟಕ ರಿಯಾಜ್ ಚೌಗಲಾ ಹೇಳಿದರು.

    ನಗರದ ಸತೀಶ ಶುಗರ್ಸ್ ಅಕಾಡೆಮಿ ಕಾಲೇಜು ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. 19ನೇ ಸತೀಶ ಅವಾರ್ಡ್ಸ್ ಭಾಷಣ ಸ್ಪರ್ಧೆ ವಿಜೇತರು ಉದ್ಘಾಟಿಸುವರು. ಅಂತಿಮವಾಗಿ 700 ವಿದ್ಯಾರ್ಥಿಗಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವರು. 19ರಂದು ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಗಾಯನ ಸ್ಪರ್ಧೆ, ಪ್ರೌಢಶಾಲೆ ವಿದ್ಯಾರ್ಥಿಗಳ ಜಾನಪದ ಗಾಯನ ಸ್ಪರ್ಧೆ, ಪ್ರೌಢಶಾಲೆ ವಿದ್ಯಾರ್ಥಿಗಳ ಜಾನಪದ ನತ್ಯ ಸ್ಪರ್ಧೆ ಹಾಗೂ ಮುಕ್ತ ವಿಭಾಗಕ್ಕೆ ಸಮೂಹ ನತ್ಯ ಸ್ಪರ್ಧೆ ಜರುಗಲಿದ್ದು, ಅದೇ ದಿನ ಶಾಲಾ- ಕಾಲೇಜು ವಿಭಾಗದ ಭಾಷಣ ಸ್ಪರ್ಧೆ ವಿಜೇತರು ಮತ್ತು ಅಂದಿನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರಿಂದ ಬಹುಮಾನ ವಿತರಣೆ ಏರ್ಪಡಿಸಲಾಗಿದೆ ಎಂದರು.

    20ರಂದು ಗಾಯನ ಸ್ಪರ್ಧೆ ಮುಕ್ತ ವಿಭಾಗ, ಜಾನಪದ ಗಾಯನ ಕಾಲೇಜು ವಿಭಾಗ, ಜಾನಪದ ನತ್ಯ ಪ್ರಾಥಮಿಕ ಶಾಲಾ ವಿಭಾಗ ಹಾಗೂ ಕಾಲೇಜು ವಿಭಾಗ ಸಮೂಹ ನತ್ಯ ಸ್ಪರ್ಧೆಗಳು ಜರುಗಲಿದ್ದು, ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಪ್ರತಿಭಾವಂತರಿಗೆ ಸನ್ಮಾನ ಹಾಗೂ ಸದರಿ ದಿನದ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಇರಲಿದೆ ಎಂದರು.

    21ರಂದು ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಗಾಯನ ಸ್ಪರ್ಧೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗಾಯನ ಸ್ಪರ್ಧೆ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮೂಹ ನತ್ಯ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಮೂಹ ನತ್ಯ ಸ್ಪರ್ಧೆ ನಡೆಯಲಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸದರಿ ದಿನದ ವಿಜೇತ ವಿದ್ಯಾರ್ಥಿಗಳಿಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮತ್ತು ಗಣ್ಯರು ಬಹುಮಾನ ವಿತರಿಸಲಿದ್ದಾರೆ. ಸಾರ್ವಜನಿಕರಿಗೆ ಕುಳಿತುಕೊಳ್ಳಲು 12 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಜನರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದರು.

    ಪತ್ರಕರ್ತ ಸಾಧಿಕ್ ಹಲ್ಯಾಳ, ಪ್ರಾಚಾರ್ಯ ಪಿ.ಎಂ ಲಕ್ಕಶೆಟ್ಟಿ, ೌಂಡೇಷನ್ ಸದಸ್ಯ ಸುರೇಶ ಜೋರಾಪುರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts