More

    ಮಾ.1ರಿಂದ ತೀರ್ಥಹಳ್ಳಿಯಲ್ಲಿ ನಾಟಕೋತ್ಸವ

    ತೀರ್ಥಹಳ್ಳಿ : ಮಲೆನಾಡಿನ ಹಿರಿಯ ರಂಗಕರ್ಮಿ ಮಾಲತಿ ಸಾಗರ ಹಾಗೂ ಯು.ಸೀತಾರಾಮಾಚಾರ್ ನೆನಪಿನಲ್ಲಿ ಮಾ.1ರಿಂದ 3ರವರೆಗೆ ಶಾಂತವೇರಿ ಗೋಪಾಲಗೌಡ ರಂಗಮAದಿರದಲ್ಲಿ ಮೂರು ದಿನಗಳ ಸಂಜೆ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ನಟಮಿತ್ರರು ಅಧ್ಯಕ್ಷ ಸಂದೇಶ ಜವಳಿ ತಿಳಿಸಿದರು.
    ಮಾ.1ರಂದು ಕೆಬಿಆರ್ ಡ್ರಾಮಾ ಕಂಪನಿ ಮಾಲೀಕ ಚಿಂದೋಡಿ ಎಲï. ಚಂದ್ರಧರ್ ನಾಟಕೋತ್ಸವ ಉದ್ಘಾಟಿಸಲಿz್ದÁರೆ. ಮುಖ್ಯ ಅತಿಥಿಯಾಗಿ ಪಪಂ ಅಧ್ಯಕ್ಷೆ ಗೀತಾ ರಮೇಶ್, ಶಿವಮೊಗ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ ಉಪಸ್ಥಿತರಿರುವರು. ಸಂಜೆ ಸಂತ ಶಿಶುನಾಳ ಷರೀ-À ಕಂಪನಿ ನಾಟಕ ಪ್ರದರ್ಶನ ನಡೆಯಲಿದೆ. ಮಾ.2ರಂದು ನಟಮಿತ್ರರು ಕಲಾವಿದರಿಂದ ರಂಗಗೀತೆ ಗಾಯನ, ಸಂಜೆ ಶಿವಮೊಗ್ಗ ರಂಗಾಯಣ ಕಲಾವಿದರಿಂದ ಡಾ. ಗೀತಾ ಪಿ. ಸಿದ್ಧಿ ಕಥೆ ಆಧಾರಿತ ಮಾರ್ನಮಿ ನಾಟಕ ಪ್ರದರ್ಶನ ನಡೆಯಲಿದೆ. ಶ್ರೀಕಾಂತ್ ಕುಮಟಾ ನಿರ್ದೇಶನ, ಶ್ರೀಪಾದ ತೀರ್ಥಹಳ್ಳಿ ಸಂಗೀತ ಸಂಯೋಜನೆ ಮಾಡಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಮಾ.3ರಂದು ಖ್ಯಾತ ರಂಗ ನಿರ್ದೇಶಕ, ರಂಗ ತಂತ್ರಜ್ಞ ಗಣೇಶ್ ಮಂದರ್ತಿ ಅವರಿಗೆ ಯು.ಸೀತಾರಾಮಾಚಾರ್ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 10 ಸಾವಿರ ರೂ. ನಗದು ಮತ್ತು -Àಲಕ ಒಳಗೊಂಡಿದೆ. ಶಾಸಕ ಆರಗ e್ಞÁನೇಂದ್ರ ಪ್ರಶಸ್ತಿ ವಿತರಿಸಲಿz್ದÁರೆ. ಪುರುಪೋತ್ತಮ ತಲವಾಟ ಮುಖ್ಯ ಅತಿಥಿಯಾಗಿದ್ದಾರೆ. ನಂತರ ದಾರಿಯೋ ಪೊ ರಚಿಸಿರುವ ಶಿವಕುಮಾರ್ ತೀರ್ಥಹಳ್ಳಿ ನಿರ್ದೇಶನದಲ್ಲಿ ಸಂಸಾರದಲ್ಲಿ ಸನಿದಪ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು. ಕಾರ್ಯದರ್ಶಿ ಪಿ.ವಿ.ಗುರುರಾಜ್, ಸದಸ್ಯರಾದ ಜಿ.ಚೇತನ್, ಶಿವಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts