More

    ಸೋಲಿನಿಂದ ಹೊಸತನ ಕಲಿಯುವ ಅವಕಾಶ

    ಬೆಳಗಾವಿ: ಜೀವನದ ಭಾಗವಾಗಿ ಎದುರಾಗುವ ಸೋಲುಗಳಿಗೆ ಯಾವುದೇ ಸಂದರ್ಭದಲ್ಲಿಯೂ ಧೃತಿಗೆಡುವ ಅಗತ್ಯತೆ ಇಲ್ಲ. ಸೋಲು ಮತ್ತಷ್ಟು ಹೊಸತನ ಕಲಿಯುವ ಅವಕಾಶ ಎಂಬ ಆಶಾಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಿಕ್ಷಣ ತಜ್ಞೆ ಲತಾ ಕಿತ್ತೂರ ಸಲಹೆ ನೀಡಿದರು.

    ನಗರದ ಜೆಡಿಎನ್‌ಡಿ ಭರತೇಶ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿದಿನ ಹೊಸತನ್ನು ಅರಿಯುವ ಹಂಬಲ ಹೊಂದಿರಬೇಕು. ಅಂದಾಗ ಮಾತ್ರ ಕಲಿಕೆ ಪರಿಪೂರ್ಣಗೊಂಡು ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು.

    ಮಹಿಳೆಯರು ಸ್ವಾವಲಂಬಿಗಳಾಗುವುದರ ಭಾಗವಾಗಿ ಆರ್ಥಿಕ ಸಮಸ್ಯೆ ಮೆಟ್ಟಿ ನಿಂತು ಹಣಕಾಸಿನ ವ್ಯವಹಾರಕ್ಕೆ ಪೂರಕವಾಗುವ ವೃತ್ತಿ ಕೌಶಲ ಅಳವಡಿಸಿಕೊಳ್ಳಬೇಕು. ಗೃಹಿಣಿ ಆರೋಗ್ಯವಾಗಿದ್ದರೆ ಇಡೀ ಕುಟುಂಬ ಆರೋಗ್ಯವಿದ್ದಂತೆ. ಹೀಗಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

    ಸಾಮಾಜಿಕ ಕಾರ್ಯಕರ್ತೆ ಲಲನ್ ಪ್ರಭು ಮಾತನಾಡಿ, ಮಹಿಳೆಯರು ವೃತ್ತಿ ನಿಭಾಯಿಸುವುದರ ಜತೆಗೆ ಕೌಟುಂಬಿಕ ಕರ್ತವ್ಯಗಳನ್ನು ನಿರ್ವಹಿಸಬೇಕು. ಜತೆಗೆ ಸಾಮಾಜಿಕ ಮೌಲ್ಯ ಎತ್ತಿ ಹಿಡಿದು ಇತರರಿಗೆ ಮಾದರಿಯಾಗಿರಬೇಕು ಎಂದು ಹೇಳಿದರು. ಆಡಳಿತ ಮಂಡಳಿ ಸದಸ್ಯೆ ಶಾಲಿನಿ ಚೌಗಲೆ, ಪ್ರಾಚಾರ್ಯೆ ಸುನೀತಾ ದೇಶಪಾಂಡೆ ಇದ್ದರು. ರೆಜಿನಾ ಡಿಸೋಜಾ ಹಾಗೂ ಸಂದೀಪ ಬೋರಡೆ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts