More

    ಬಿಜೆಪಿಯಿಂದ ಹೊಸತೇನೂ ಘಟಿಸದು – ಸತೀಶ ಜಾರಕಿಹೊಳಿ

    ಬೆಳಗಾವಿ: ಇಡೀ ರಾಜ್ಯದಲ್ಲಿ ಡಿಸಿಸಿ ಬ್ಯಾಂಕ್, ಪ್ರಾಥಮಿಕ ಸಂಘಗಳನ್ನು ಎಲ್ಲ ಪಕ್ಷದವರು ಸೇರಿಕೊಂಡು ಆಡಳಿತ ನಡೆಸುತ್ತಾರೆ. ಆದರೆ, ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಗರು ಹೊಸದನ್ನು ಸೃಷ್ಟಿಸಲು ಹೊರಟಿದ್ದಾರೆ. ಆದರೆ, ಅವರಿಂದ ವಿಶೇಷ, ಹೊಸತೇನೂ ಸಾಧಿಸಲಾಗದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ.

    ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಚುನಾವಣೆ ವ್ಯಕ್ತಿಗತವಾಗಿ ಗೌರವ ಸ್ಥಾನದ ಮೇಲೆ ನಡೆಯುತ್ತದೆ. ಖಾನಾಪುರ ನಿರ್ದೇಶಕರ ಸ್ಥಾನ ಗೆಲ್ಲುವ ಎಲ್ಲ ಅವಕಾಶ ನಮ್ಮ ಅಭ್ಯರ್ಥಿಗೆ ಇತ್ತು. ಆದರೆ, ಕೊನೆ ಗಳಿಗೆಯಲ್ಲಿ ಸಮಸ್ಯೆಯಾಗಿ ಸೋತಿದ್ದೇವೆ. ಇದು ರೈತರ ಬ್ಯಾಂಕ್ ಆಗಿರುವುದರಿಂದ ಇಲ್ಲಿ ಕೈ, ಕಮಲ, ತೆನೆ ಎಂದು ರಾಜಕೀಯ ಪಕ್ಷಗಳು ಗಣನೆಗೆ ಬರುವುದಿಲ್ಲ ಎಂದರು.

    ವಿಧಾನಸಭೆ ಮುಂದಿನ ಟಾರ್ಗೆಟ್ ಎಂದು ಬಿಜೆಪಿ ಮುಖಂಡರು ನೀಡುತ್ತಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸತೀಶ, ಬಿಜೆಪಿಗೆ ಇನ್ನೂ ಎರಡೂವರೆ ವರ್ಷ ಅಧಿಕಾರವಿದೆ. ರಾಜ್ಯ, ದೇಶದಲ್ಲಿ ಮುಂದೆ ಬದಲಾವಣೆ ಆಗಲಿದೆ. ಆ ಸಂದರ್ಭದಲ್ಲಿ ಈಗ ಬಿಜೆಪಿ ಸೇರಿ ಸಚಿವರಾಗಿರುವವರು ಮತ್ತೆ ಯಾವ ಪಕ್ಷದಲ್ಲಿರುತ್ತಾರೋ ಗೊತ್ತಿಲ್ಲ. ಕಾದು ನೋಡೋಣ ಎಂದು ಪರೋಕ್ಷವಾಗಿ ರಮೇಶ ಜಾರಕಿಹೊಳಿಗೆ ಟಾಂಗ್ ನೀಡಿದರು.

    ಕೈ ಅಭ್ಯರ್ಥಿಗಳಿಗೆ ಗೆಲುವು: ಶಿರಾ ಮತ್ತು ಆರ್.ಆರ್.ನಗರ ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ. ಎಲ್ಲ ಪಕ್ಷಗಳಲ್ಲಿಯೂ ಗುಂಪುಗಾರಿಕೆ ಇದ್ದೇ ಇರುತ್ತದೆ. ಬಿಜೆಪಿಯಲ್ಲಿಯೂ ಸಹ ಮೂರು ಗುಂಪುಗಳಿವೆ. ದೆಹಲಿಯಲ್ಲಿ ಒಂದು ಗುಂಪಿದ್ದರೆ, ಕರ್ನಾಟಕದಲ್ಲಿ ಎರಡು ಗುಂಪಿವೆ. ಆದರೆ, ಪಕ್ಷ ಎಂದಾಗ ಮಾತ್ರ ನಮ್ಮ ಪಕ್ಷವಷ್ಟೇ ಎಂದು ಎಲ್ಲರೂ ಒಗ್ಗಟ್ಟಾಗಿ
    ಕೆಲಸ ಮಾಡುತ್ತಾರೆ ಎಂದು ಸತೀಶ ಅಭಿಪ್ರಾಯಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts