More

    ಯುವಕರಿಗೆ ರಾಹುಲ್ ಜಾರಕಿಹೊಳಿ ಮಾದರಿ

    ಬೆಳಗಾವಿ: ನಿರಂತರ ಸಮಾಜ ಸೇವೆ ಸಲ್ಲಿಸುವ ಮೂಲಕ ಹೆಸರುವಾಸಿಯಾದ ಸತೀಶ ಶುಗರ್ಸ್ ನಿರ್ದೇಶಕ, ಯುವ ನಾಯಕ ರಾಹುಲ್ ಜಾರಕಿಹೊಳಿ ಯುವಕರಿಗೆ ಮಾದರಿಯಾಗಿ ಬೆಳೆದು ನಿಂತಿದ್ದು, ಸಮಾಜದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹತ್ತರಗಿಯ ಕಾರಿ ಮಠದ ಗುರುಸಿದ್ದೇಶ್ವರ ಸ್ವಾಮೀಜಿ ಹಾರೈಸಿದರು.

    ಸಮೀಪದ ಕಾಕತಿ ಸಿದ್ದೇಶ್ವರ ದೇವಸ್ಥಾನದಲ್ಲಿ ಅಭಿಮಾನಿಗಳು ಸೋಮವಾರ ಹಮ್ಮಿಕೊಂಡಿದ್ದ ರಾಹುಲ್ ಜಾರಕಿಹೊಳಿ ಅವರ 24ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ, ತಂದೆ ಸತೀಶ ಜಾರಕಿಹೊಳಿ ಅವರ ಮಾರ್ಗದರ್ಶನಲ್ಲಿ ಬೆಳೆಯುತ್ತಿರುವ ರಾಹುಲ್ ಜಾರಕಿಹೊಳಿ ಅವರ ಅಭಿಮಾನಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

    ಕಡೋಲಿಯ ದುರದುಂಡೇಶ್ವರ ವಿರಕ್ತಮಠದ ಗುರುಬಸವಲಿಂಗ ಸ್ವಾಮೀಜಿ ಮಾತನಾಡಿ, ನಮ್ಮ ಕಾರ್ಯವನ್ನು ಸಮಾಜ ಮೆಚ್ಚಬೇಕು. ಸಮಾಜ ಮೆಚ್ಚಿ, ಗುರುತಿಸಿದರೆ ಮಾಡಿದ ಕಾರ್ಯಕ್ಕೊಂದು ಅರ್ಥ ಬರುತ್ತದೆ. ಅಂತಹ ಕಾರ್ಯವನ್ನು ರಾಹುಲ್ ಮಾಡುತ್ತಿದ್ದಾರೆ. ಸಮಾಜಮುಖಿ ಕೆಲಸಗಳ ಮೂಲಕ ಗುರುತಿಸಿಕೊಳ್ಳುತ್ತಿರುವ ರಾಹುಲ್ ಮುಂದೊಂದು ದಿನ ಹೆಮ್ಮರವಾಗಿ ಬೆಳೆಯಲಿದ್ದಾರೆ ಎಂದರು.

    ಯುವ ನಾಯಕ, ಸತೀಶ ಶುಗರ್ಸ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಜನ್ಮದಿನದ ಅಂಗವಾಗಿ ಉಚಿತ ಕಣ್ಣಿನ ತಪಾಸಣೆ ಹಮ್ಮಿಕೊಳ್ಳಲಾಗಿತ್ತು. ಇನ್ನೂ ಅಪಾರ ಸಂಖ್ಯೆಯ ಅಭಿಮಾನಿಗಳು ರಕ್ತದಾನ ಮಾಡಿದರು. ಹುಣಸಿಕೊಳ್ಳ ಮಠದ ರಾಚೋಟಿ ಸ್ವಾಮೀಜಿ, ಭೂತರಾಮನಟ್ಟಿಯ ಮುಕ್ತಿಮಠದ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು, ಕಾಕತಿಯ ರಾಚಯ್ಯ ಶಿವಮೂರ್ತಿ ಸ್ವಾಮೀಜಿ, ಜಿಪಂ ಮಾಜಿ ಸದಸ್ಯರಾದ ಸಿದ್ದು ಸುಣಗಾರ,ಅರುಣ ಕಟಾಂಬಳೆ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ರಾಮಣ್ಣ ಗುಳ್ಳಿ, ತಾಪಂನ ಮಾಜಿ ಸದಸ್ಯ ಯಲ್ಲಪ್ಪ ಕೊಳೆಕರ್, ಕಾಕತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಗರ ಪಿಂಗಟ, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ, ಸಿದ್ದಿಕಿ ಅಂಕಲಗಿ, ಮಹಾಂತೇಶ ಮಗದುಮ್ ಇತರರಿದ್ದರು.

    ಯಮಕನಮರಡಿ ಕ್ಷೇತ್ರದ ಅಭಿವೃದ್ಧಿಗೆ ಸದಾ ಬದ್ಧ

    ಯಮಕನಮರಡಿ ಮತಕ್ಷೇತ್ರದ ಜನರು ತಂದೆ ಸತೀಶ ಜಾರಕಿಹೊಳಿ ಅವರನ್ನು ವಿಧಾನಸಭೆ ಚುನಾವಣೆಯಲ್ಲಿ 4ನೇ ಬಾರಿಗೆ 57 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದು ಸಂತಸದ ವಿಚಾರ. ಆದ್ದರಿಂದ ನಿಮ್ಮ ಸಮಸ್ಯೆಗಳಿಗೆ, ಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಸಿದ್ದರಿದ್ದೇವೆ. ವಿಶ್ವದಲ್ಲಿಯೇ ಮೋಡ ಬಿತ್ತನೆ ಮಾಡುವ ಮೂರು ಕಂಪನಿಗಳಿದ್ದು, ಅದರಲ್ಲಿಯೇ ಒಂದು ಕಂಪನಿಯಿಂದ ನಮ್ಮ ತಂದೆಯವರು ಬೆಳಗಾಂ ಶುಗರ್ಸ್ ನಿಂದ ಜಿಲ್ಲೆಯಲ್ಲಿ ಸ್ವಂತ ದುಡ್ಡಿನಲ್ಲಿ ಮೋಡ ಬಿತ್ತನೆ ಮಾಡಿಸಿದ್ದಾರೆ. ಈ ಬಾರಿ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಮೋಡ ಬಿತ್ತನೆಯಿಂದ ಜಿಲ್ಲೆಯ ಆಯಾ ಭಾಗದಲ್ಲಿ ಮಳೆಯೂ ಆಗಿದೆ. ಇದರಿಂದ ರೈತರಿಗೆ ಅನುಕೂಲವಾಯಿತು ಎಂದು ಯುವ ನಾಯಕ, ಸತೀಶ್ ಶುಗರ್ಸ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಸ್ಮರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts