More

    ಮೋದಿಗೆ ಪೈಪೋಟಿ ಕೊಡಲು ಯಾರೂ ಇರಲಿಲ್ಲ; ಸತೀಶ್ ಜಾರಕಿಹೊಳಿ ವಿಶ್ಲೇಷಣೆ

    ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ೋಷಿಸಿದರೆ ಸೂಕ್ತವಾಗಲಿದೆ. ‘ಮೋದಿ ವರ್ಸಸ್ ಖರ್ಗೆ’ ಎಂದು ಕರೆಯಲು ಸೂಕ್ತ ಆಗಲಿದೆ. ಮೋದಿಗೆ ಪೈಪೋಟಿ ಕೊಡಲು ಯಾರು ಇರಲಿಲ್ಲ, ಈಗ ಖರ್ಗೆ ಹಿರಿತನ ಆಧಾರದಲ್ಲಿ ಮೋದಿ ಎದುರು ಇದ್ದಾರೆ. ಇದು ಕಾಂಗ್ರೆಸ್ಸಿಗೆ ಒಳ್ಳೆಯದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಟ್ಟಿದ್ದಾರೆ.
    ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಖರ್ಗೆ ದಲಿತ ನಾಯಕ ಎಂದೇನಲ್ಲ. ಅವರ ಅನುಭವದ ಆಧಾರದ ಮೇಲೆ ಈ ಪ್ರಸ್ತಾಪ ಬಂದಿದೆ. ಖರ್ಗೆ ಒಳ್ಳೆಯ ರಾಜಕಾರಣಿ, ಸಂಸದೀಯ ಪಟು. ಪ್ರಬುದ್ಧ ರಾಜಕಾರಣಿ, ಅವರಿಗೆ ಕೊಟ್ಟರೆ ಒಳ್ಳೆಯದು ಎಂದರು.
    ಇನ್ನೊಂದು ಬಾರಿ ಖರ್ಗೆ ಎಂಪಿ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ, ಇನ್ನೊಂದು ಬಾರಿ ಸ್ಪರ್ಧಿಸಬೇಕೆಂಬುದು ನಮ್ಮ ಅಭಿಲಾಷೆ. ಈ ಹಿಂದೆ ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಹಾಗಾಗಿ ಸ್ಪರ್ಧೆ ಮಾಡಿದರೆ ಒಳ್ಳೆಯದು. ರಾಜಕೀಯವಾಗಿ ಒಳ್ಳೆಯ ಪರಿಣಾಮ ಬೀರಲಿದೆ. ನಮಗೂ ಕೂಡ ಅನುಕೂಲ ಅಗುತ್ತದೆ ಎಂದು ಹೇಳಿದರು.
    ವರದಿಗೆ ವಿರೋಧವಿಲ್ಲ
    ಜಾತಿಗಣತಿ ವಿರೋಧಿಸಿ ಸಚಿವರು ಸಹಿ ಹಾಕಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸಚಿವರು ಸಹಿ ಹಾಕಿದ್ದರಲ್ಲಿ ಯಾವುದೇ ತಪ್ಪಿಲ್ಲ. ಅವರ ಸಮುದಾಯದ ಪರವಾಗಿ ಸಚಿವರು ನಿಲ್ಲಬೇಕಾಗುತ್ತದೆ. ಪ್ರಮಾಣ ವಚನ ಸ್ವೀಕಾರ ಮಾಡಿದ್ದನ್ನು ಪಾಲನೆ ಮಾಡುವುದು ಕಷ್ಟ. ರಾಜಕೀಯ ಮಾಡುವುದು ಕಷ್ಟ ಆಗುತ್ತದೆ, ಯಾವ ಸಚಿವರು ಕೂಡ ಜಾತಿಗಣತಿ ವಿರೋಧ ಮಾಡುತ್ತಿಲ್ಲ, ಈಗಿನ ವರದಿಯಲ್ಲಿ ಲೋಪ ಇದೆ ಅನ್ನುತ್ತಿದ್ದಾರೆ. ವರದಿ ಸ್ವೀಕರಿಸಿದ ಬಳಿಕ ಚರ್ಚೆಯಾಗಲಿ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts