More

    ಕೋಮುವಾದಿಗಳನ್ನು ಅಧಿಕಾರದಿಂದ ಕಿತ್ತು ಹಾಕಲು ಒಂದಾಗಿ

    ಚಿತ್ರದುರ್ಗ: ಸಾಮಾಜಿಕವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಸಾಮಾಜಿಕ ಬದಲಾವಣೆ ಬಯಸುವುದಾದರೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಗಳನ್ನು ತೊರೆದು ಒಂದಾಗಬೇಕು. ಆಗ ಕೋಮುವಾದಿಗಳನ್ನು ಅಧಿಕಾರದಿಂದ ಕಿತ್ತೊಗೆದು ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಸಾಧ್ಯವಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.

    ಎಸ್‌ಸಿ, ಎಸ್‌ಟಿ ಸಮಾವೇಶ ಯಶಸ್ಸಿಗಾಗಿ ಕಾಂಗ್ರೆಸ್ ಕಾರ‌್ಯಕರ್ತರು, ಮುಖಂಡರಿಗೆ ಕೃತಜ್ಞತೆ ಸಲ್ಲಿಸಲು ನಗರದ ಗಾಯತ್ರಿ ಕಲ್ಯಾಣ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ‌್ಯಕ್ರಮದಲ್ಲಿ ಮಾತನಾಡಿದ ಅವರು, ಏಕತಾ ಸಮಾವೇಶದ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಸೂಕ್ತ ಸಂದೇಶ ಮುಟ್ಟಿಸಿದ್ದೇವೆ. ನಮ್ಮ ಸಮುದಾಯದವರು ಶಾಸಕ, ಮಂತ್ರಿ, ಸಂಸದ, ಉಪ ಮುಖ್ಯಮಂತ್ರಿಯಾಗಿರ ಬಹುದು. ಆದರೆ ದಲಿತರು ಎನ್ನುವ ಭಾವನೆ ಮೇಲ್ಜಾತಿಯವರ ಮನಸ್ಸಿನಿಂದ ಹೋಗಿಲ್ಲ ಎಂದರು.

    ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿ ಆರೂ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿದೆ ಎಂದರು. ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕೆಪಿಸಿಸಿ ಎಸ್‌ಟಿ ವಿಭಾಗದ ಅಧ್ಯಕ್ಷ ಪಾಲಯ್ಯ ಮಾತನಾಡಿದರು.

    ಮಾಜಿ ಸಚಿವ ಕೆ.ಶಿವಮೂರ್ತಿ ನಾಯ್ಕ, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಮಾಜಿ ಎಂಎಲ್‌ಸಿ ಜಯಮ್ಮ ಬಾಲರಾಜ್, ಮುರಳೀಧರ ಹಾಲಪ್ಪ, ಹನುಮಲಿ ಷಣ್ಮುಖಪ್ಪ, ಜೆ.ಜೆ.ಹಟ್ಟಿ ಡಾ.ಬಿ.ತಿಪ್ಪೇಸ್ವಾಮಿ, ಬಿ.ಯೋಗೇಶ್ ಬಾಬು, ಓ.ಶಂಕರ್, ಫಾತ್ಯರಾಜನ್, ಚಂದ್ರಶೇಖರಗೌಡ, ಮೋಕ್ಷಾ ರುದ್ರಸ್ವಾಮಿ, ಮುನಿರಾ ಮಕಾಂದಾರ್, ರುದ್ರಾಣಿ ಗಂಗಾಧರ್, ಎಚ್.ಅಂಜಿನಪ್ಪ, ಡಿ.ಟಿ. ವೆಂಕಟೇಶ್, ಇಂದಿರಾ, ನಾಗರಾಜ್ ಜಾನ್ಹವಿ ಇತರರು ಇದ್ದರು.
    ಬಿಜೆಪಿ ತೊರೆದ ಎಂ.ಎ.ಸೇತೂರಾಂ ಹಾಗೂ ಸಮಾಜ ಸೇವಕ ಆರ್.ಶೇಷಣ್ಣಕುಮಾರ್ ಇತರರು ಕಾಂಗ್ರೆಸ್ ಸೇರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts