More

    ಆಗಸ್ಟ್​ 15ಕ್ಕೆ ಕೋವಿಡ್​-19 ಮಹಾಮಾರಿಯಿಂದ ಬಿಡುಗಡೆ ನಿಶ್ಚಿತ!

    ನವದೆಹಲಿ: ಜಾಗತಿಕವಾಗಿ ಬಾಧಿಸುತ್ತಿರುವ ಕೋವಿಡ್​-19 ರೋಗನಿರೋಧಕ ಚುಚ್ಚುಮದ್ದ ಅಭಿವೃದ್ಧಿಪಡಿಸಲು ಭಾರತದ ಒಂದೆರಡು ಕಂಪನಿಗಳು ತುರುಸಿನ ಸ್ಪರ್ಧೆಗೆ ಇಳಿದಿವೆ. ಇದೇ ವೇಳೆ 2020ರ ಸ್ವಾತಂತ್ರ್ಯೋತ್ಸವದ ವೇಳೆಗೆ ಭಾರತದ ಮೊದಲ ದೇಶಿಯ ಕೋವಿಡ್​-19 ರೋಗನಿರೋಧಕ ಚುಚ್ಚುಮದ್ದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಗುರಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯದ್ದಾಗಿದೆ (ಐಸಿಎಂಆರ್​). ತನ್ಮೂಲಕ ಆದಷ್ಟು ಬೇಗ ಕೋವಿಡ್​-19 ಮುಕ್ತ ಭಾರತ ನಿರ್ಮಾಣದ ಕನಸಿಗೆ ಕಿಚ್ಚುಹೊತ್ತಿಸಿದೆ.

    ಕೆಲದಿನಗಳ ಹಿಂದಷ್ಟೇ ಕೊವ್ಯಾಕ್ಸಿನ್​ ಎಂಬ ಚುಚ್ಚುಮದ್ದು ಸಿದ್ಧಪಡಿಸಿದ್ದು, ಮಾನವರ ಮೇಲೆ ಪ್ರಯೋಗಿಸಲು ಅಗತ್ಯ ಅನುಮತಿ ದೊರೆತಿರುವುದಾಗಿ ಭಾರತ್​ ಬಯೋಟೆಕ್​ ಇಂಟರ್​ನ್ಯಾಷನಲ್​ ಲಿಮಿಟೆಡ್​ ಘೋಷಿಸಿತ್ತು. ಇದೀಗ ಆದ್ಯತೆಯ ಮೇರೆಗೆ ಈ ಚುಚ್ಚುಮದ್ದನ್ನು ಮಾನವರ ಮೇಲೆ ಪರೀಕ್ಷೆ ಮಾಡಲಾಗುತ್ತಿದೆ.

    ಇದನ್ನೂ ಓದಿ: ದೇಶಿಯವಾಗಿ ಸಿದ್ಧವಾಗಿರುವ ಮತ್ತೊಂದು ಕೋವಿಡ್​ ಚುಚ್ಚುಮದ್ದು ಕ್ಲಿನಿಕಲ್​ ಟ್ರಯಲ್​ಗೆ ಅನುಮತಿ

    ಅಹಮದಾಬಾದ್​ ಮೂಲದ ಝೈಡಸ್​ ಕ್ಯಾಡಿಲಾ ಹೆಲ್ತ್​ಕೇರ್​ ಸಂಸ್ಥೆ ಕೂಡ ತಾನು ಸಿದ್ಧಪಡಿಸಿರುವ ಕೋವಿಡ್​-19 ರೋಗನಿರೋಧಕ ಚುಚ್ಚುಮದ್ದಿನ ಪ್ರಾಣಿಗಳ ಮೇಲಿನ ಪ್ರಯೋಗ ಯಶಸ್ವಿಯಾಗಿದೆ. ಮನುಷ್ಯರ ಮೇಲೆ ಅದರ ಪ್ರಯೋಗಕ್ಕೆ ಅಗತ್ಯ ಅನುಮತಿಗಳನ್ನು ಪಡೆದುಕೊಂಡಿರುವುದಾಗಿ ಶುಕ್ರವಾರ ಹೇಳಿತ್ತು. ಇದರ ಪರೀಕ್ಷೆ ಕೂಡ ಈ ತಿಂಗಳಲ್ಲೇ ಆರಂಭವಾಗುವ ಸಾಧ್ಯತೆ ಇದೆಯಾದರೂ, ದಿನಾಂಕ ನಿಗದಿಯಾಗಿಲ್ಲ.

    ಐಸಿಎಂಆರ್​ ಪ್ರಕಾರ ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿರುವ ಕೊವ್ಯಾಕ್ಸಿನ್​ ಎಂಬ ಕೋವಿಡ್​-19 ರೋಗನಿರೋಧಕ ಚುಚ್ಚುಮದ್ದುಗಳ ಮಾನವರ ಮೇಲಿನ ಪ್ರಯೋಗಕ್ಕೆ 12 ಸ್ಥಳಗಳನ್ನು ನಿರ್ಧರಿಸಲಾಗಿದೆ. ಈ ಪರೀಕ್ಷೆಗಾಗಿ ಜುಲೈ 7ರೊಳಗೆ ಕರೊನಾ ಪೀಡಿತರ ಹೆಸರುಗಳನ್ನು ನೋಂದಾಯಿಸಿಕೊಳ್ಳುವಂತೆ ಆ 12 ವೈದ್ಯಕೀಯ ಸಂಸ್ಥೆಗಳು ಮತ್ತು ಪ್ರಮುಖ ಪರೀಕ್ಷಣಾಧಿಕಾರಿಗಳಿಗೆ ಐಸಿಎಂಆರ್​ ಸೂಚಿಸಿದೆ.

    ಕೊವ್ಯಾಕ್ಸಿನ್​ ಪರೀಕ್ಷೆಗೆ ಆದ್ಯತೆ: ದೇಶಿಯವಾಗಿ ಮೊದಲು ಅಭಿವೃದ್ಧಿಪಡಿಸಲಾದ ಕೋವಿಡ್​-19 ರೋಗನಿರೋಧಕ ಎಂಬ ಹೆಗ್ಗಳಿಕೆಯ ಭಾರತ್​ ಬಯೋಟೆಕ್​ನ ಕೊವ್ಯಾಕ್ಸಿನ್​ ಚುಚ್ಚುಮದ್ದಿನ ಪರೀಕ್ಷೆಗೆ ಆದ್ಯತೆ ನೀಡಲಾಗಿದೆ.

    ಇದನ್ನೂ ಓದಿ: ಲಡಾಖ್​ನ ಮುಂಚೂಣಿ ನೆಲೆಗಳಿಗೆ ಪ್ರಧಾನಿ ಮೋದಿ ಭೇಟಿ

    ಕೊವ್ಯಾಕ್ಸಿನ್​ ಚುಚ್ಚುಮದ್ದನ್ನು ಆಗಸ್ಟ್​ 15ರೊಳಗೆ ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ. ಆದ್ದರಿಂದ, ಆ ವೇಳೆಗೆ ಇದರ ಕ್ಲಿನಿಕಲ್​ ಟ್ರಯಲ್​ಗಳನ್ನು ಮುಗಿಸಬೇಕಿದೆ. ಈ ಗುರಿ ಸಾಧನೆಗಾಗಿ ಬಿಬಿಐಎಲ್​ ಕೂಡ ಶ್ರಮಿಸುತ್ತಿದೆ. ಮಾನವರ ಮೇಲಿನ ಪ್ರಯೋಗದ ಯಶಸ್ಸಿಗೆ ಟ್ರಯಲ್​ಗಾಗಿ ಆಯ್ಕೆ ಮಾಡಿರುವ ಸ್ಥಳಗಳ ಸಹಕಾರವೂ ಅಗತ್ಯವಾಗಿದೆ. ಹಾಗಾಗಿ ಇದಕ್ಕೆ ಎಲ್ಲ ರೀತಿಯಲ್ಲೂ ಸಹಕಾರ ನೀಡಬೇಕು ಎಂದು ಟ್ರಯಲ್​ಗಾಗಿ ಆಯ್ಕೆ ಮಾಡಿರುವ ತಾಣಗಳ ಮುಖ್ಯಸ್ಥರಿಗೆ ಐಸಿಎಂಆರ್​ನ ಮಹಾಪ್ರಧಾನ ನಿರ್ದೇಶಕ ಡಾ. ಬಲರಾಂ ಭಾರ್ಗವ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

    ಕೊವ್ಯಾಕ್ಸಿನ್​ನ ಪರೀಕ್ಷೆಗೆ ಅಗತ್ಯ ಸಹಕಾರ ಕೊಡದಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಹಾಗಾಗಿ ಈ ಪರೀಕ್ಷೆಗಳಿಗೆ ಹೆಚ್ಚಿನ ಆದ್ಯತೆ ನೀಡಿ, ನಿಗದಿತ ಸಮಯದೊಳಗೆ ಪೂರೈಸಲು ಅವಕಾಶ ಮಾಡಿಕೊಡಬೇಕು ಎಂದು ಸೂಚಿಸಿದ್ದಾರೆ.

    ಆಂಬುಲೆನ್ಸ್​ನಲ್ಲೇ ಹೆರಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts