More

    ಫ್ರೆಂಚ್ ಓಪನ್‌ಗೆ ಶೇ. 60 ಪ್ರೇಕ್ಷಕರ ಎಂಟ್ರಿ, ಮಾಸ್ಕ್ ಕಡ್ಡಾಯ!

    ಪ್ಯಾರಿಸ್: ಈ ವರ್ಷದ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಗೆ ಕರೊನಾ ಭೀತಿಯ ನಡುವೆಯೂ ಶೇ. 60ರಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲು ಸಂಘಟಕರು ನಿರ್ಧರಿಸಿದ್ದಾರೆ. ಸೆಪ್ಟೆಂಬರ್ 27ರಿಂದ ಅಕ್ಟೋಬರ್ 11ರವರೆಗೆ ಕ್ಲೇಕೋರ್ಟ್ ಟೂರ್ನಿ ನಡೆಯಲಿದ್ದು, ಜುಲೈ 16ರಂದು ಟಿಕೆಟ್ ಮಾರಾಟ ಆರಂಭಗೊಳ್ಳಲಿದೆ.

    ಮೂಲ ವೇಳಾಪಟ್ಟಿಯ ಪ್ರಕಾರ ಕಳೆದ ಮೇ 24ರಿಂದ ರೋಲ್ಯಾಂಡ್ ಗ್ಯಾರಸ್‌ನಲ್ಲಿ ನಡೆಯಬೇಕಾಗಿದ್ದ ಟೂರ್ನಿಯನ್ನು ಕರೊನಾ ಭೀತಿಯಿಂದಾಗಿ ಮುಂದೂಡಲಾಗಿತ್ತು. ಒಂದು ಸಾಲಿನಲ್ಲಿ ಗರಿಷ್ಠ ನಾಲ್ವರು ಪ್ರೇಕ್ಷಕರು ಮಾತ್ರ ಕುಳಿತುಕೊಳ್ಳಬಹುದಾಗಿದ್ದು, ಪ್ರತಿ ಪ್ರೇಕ್ಷಕರ ನಡುವಿನ ಸೀಟು ಖಾಲಿ ಬಿಟ್ಟಿರಬೇಕು. ಪ್ರತಿದಿನದ ಪಂದ್ಯಗಳನ್ನು ಗರಿಷ್ಠ 20 ಸಾವಿರ ಪ್ರೇಕ್ಷಕರಷ್ಟೇ ವೀಕ್ಷಿಸಲಿದ್ದಾರೆ. ಫೈನಲ್ ಪಂದ್ಯಕ್ಕೆ 10 ಸಾವಿರ ಪ್ರೇಕ್ಷಕರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಆದರೆ ಟೂರ್ನಿಯ ವೇಳೆಗೆ ಫ್ರಾನ್ಸ್‌ನಲ್ಲಿ ಪರಿಸ್ಥಿತಿ ಸುಧಾರಿಸಿದರೆ ಇನ್ನಷ್ಟು ಹೆಚ್ಚಿನ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲು ಫ್ರೆಂಚ್ ಟೆನಿಸ್ ಫೆಡರೇಷನ್ (ಎಫ್ಎಫ್​ಟಿ) ನಿರ್ಧರಿಸಿದೆ.

    ಇದನ್ನೂ ಓದಿ: ಲಾಕ್​ಡೌನ್​ನಲ್ಲಿ ಕನಸುಗಳ ಪಟ್ಟಿ ಸಿದ್ಧಪಡಿಸಿದ ಟೆನಿಸ್ ತಾರೆ ಬಿಯಾಂಕಾ ಆಂಡ್ರೆಸ್ಕು

    ಪ್ರೇಕ್ಷಕರು ಕ್ರೀಡಾಂಗಣಕ್ಕೆ ಮಾಸ್ಕ್ ತರುವುದು ಕಡ್ಡಾಯ. ಆದರೆ ಸೀಟಿನಲ್ಲಿ ಕುಳಿತುಕೊಂಡಿರುವಾಗ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ. ಕ್ರೀಡಾಂಗಣದಲ್ಲಿ ಓಡಾಡುವಾಗ ಮಾತ್ರ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಕ್ರೀಡಾಂಗಣದಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಲಭ್ಯವಿರುತ್ತದೆ. ಫ್ರೆಂಚ್ ಓಪನ್‌ಗೆ ಮುನ್ನ ಆಗಸ್ಟ್ 31ರಿಂದ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೂರ್ನಿಗೆ ಈಗಾಗಲೆ ಪ್ರೇಕ್ಷಕರನ್ನು ನಿರ್ಬಂಧಿಸಲಾಗಿದೆ. ಮಾರ್ಚ್‌ನಿಂದ ಸ್ತಬ್ಧಗೊಂಡಿರುವ ವೃತ್ತಿಪರ ಟೆನಿಸ್ ಚಟುವಟಿಕೆ ಆಗಸ್ಟ್‌ನಲ್ಲಿ ಪುನರಾರಂಭಗೊಳ್ಳುವ ನಿರೀಕ್ಷೆ ಇದೆ.

    ಸೆರೇನಾ ವಿಲಿಯಮ್ಸ್ ಟೆನಿಸ್ ಅಭ್ಯಾಸಕ್ಕೆ ಪುತ್ರಿಯೇ ಜತೆಗಾರ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts