More

    ಹೆಲಿಕಾಪ್ಟರ್ ಅಪಘಾತದಲ್ಲಿ ಫ್ರೆಂಚ್​ ಬಿಲಿಯನೇರ್​ ರಾಜಕಾರಣಿ ಆಲಿವಿಯರ್ ಡಸಾಲ್ಟ್​ ನಿಧನ

    ಪ್ಯಾರಿಸ್: ಫ್ರೆಂಚ್​ ಬಿಲಿಯನೇರ್​ ಮತ್ತು ರಾಜಕಾರಣಿ ಆಲಿವಿಯರ್ ಡಸಾಲ್ಟ್​ ಅವರು ಭಾನುವಾರ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾಗಿದ್ದಾರೆ. ಡಸಾಲ್ಟ್​ ಅವರ ಹಾಲಿಡೇ ಹೋಮ್​ ಇರುವ ನಾರ್ಮಾಂಡಿಯಲ್ಲಿ ಅವರ ಖಾಸಗಿ ಹೆಲಿಕಾಪ್ಟರ್ ಕ್ರ್ಯಾಶ್ ಆಗಿ, ಡಸಾಲ್ಟ್​ ಮತ್ತು ಹೆಲಿಕಾಪ್ಟರ್​ನ ಪೈಲಟ್​ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

    ಸುಮಾರು 6 ಬಿಲಿಯನ್ ಯುರೋಗಳಷ್ಟು (52 ಸಾವಿರ ಕೋಟಿ ರೂ.) ಸಂಪತ್ತನ್ನು ಹೊಂದಿದ್ದ ಡಸಾಲ್ಟ್​, ಫೋರ್ಬ್ಸ್ 2020 ರ ವರದಿಯ ಪ್ರಕಾರ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ, 361 ನೇ ಸ್ಥಾನವನ್ನು ಅಲಂಕರಿಸಿದ್ದರು. ಅರವತ್ತೊಂಭತ್ತು ವರ್ಷ ವಯಸ್ಸಾಗಿದ್ದ ಅವರು, 2002 ರಿಂದ ಕನ್ಸರ್ವೇಟಿವ್ ಲೆಸ್ ರಿಪಬ್ಲಿಕನ್ಸ್ ಪಕ್ಷದ ಶಾಸಕರಾಗಿ, ಫ್ರಾನ್ಸ್ ರಾಜಕಾರಣದಲ್ಲಿ ಪ್ರಭಾವೀ ವ್ಯಕ್ತಿಯಾಗಿದ್ದರು.

    ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕಳೆಗಟ್ಟಿದ ಮಹಿಳೆಯರ ಸಮಾನತೆಗಾಗಿ ನಡಿಗೆ: ವಿಆರ್​ಎಲ್​ ಮೀಡಿಯಾ ಆಯೋಜನೆ

    ರಾಫೆಲ್ ಯುದ್ಧ ವಿಮಾನಗಳನ್ನು ನಿರ್ಮಿಸುವುದರೊಂದಿಗೆ ಲೆ ಫಿಗರೊ ಪತ್ರಿಕೆ ನಡೆಸುವ ‘ಡಸಾಲ್ಟ್ ಏವಿಯೇಷನ್’ ಕಂಪೆನಿಯ ಮಾಲೀಕರಾಗಿದ್ದ ಕೈಗಾರಿಕೋದ್ಯಮಿ ದಿವಂಗತ ಸೆರ್ಜ್ ಡಸಾಲ್ಟ್ ಅವರ ಹಿರಿಯ ಮಗನಾಗಿದ್ದರು, ಆಲಿವಿಯರ್ ಡಸಾಲ್ಟ್. ಅವರ ಶ್ರೀಮಂತಿಕೆಯು ಹೆಚ್ಚಾಗಿ ತಂದೆಯಿಂದ ಆನುವಂಶಿಕವಾಗಿ ಬಂದಿದ್ದು, ಇಬ್ಬರು ಸೋದರರು ಮತ್ತು ಒಬ್ಬ ಸೋದರಿಯೊಂದಿಗೆ ಸಂಪತ್ತನ್ನು ಹಂಚಿಕೊಂಡಿದ್ದರು. ರಾಜಕೀಯದಲ್ಲಿ ಸಕ್ರಿಯರಾದ ನಂತರ ಡಸಾಲ್ಟ್​, ಕಂಪೆನಿಯ ವ್ಯವಸ್ಥಾಪಕ ಮಂಡಳಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

    ಫ್ರಾನ್ಸ್ ಅಧ್ಯಕ್ಷ ಎಮ್ಮಾನ್ಯುಲ್ ಮೆಕ್ರಾನ್ ಅವರು ಡಸಾಲ್ಟ್​ ಸಾವಿಗೆ ಸಂತಾಪ ಸೂಚಿಸಿದ್ದಾರೆ. “ಆಲಿವಿಯರ್ ಡಸಾಲ್ಟ್​ ಫ್ರಾನ್ಸ್​ಅನ್ನು ಪ್ರೀತಿಸುತ್ತಿದ್ದರು. ಕೈಗಾರಿಕೆಯ ನಾಯಕರೂ, ಶಾಸಕರೂ, ಸ್ಥಳೀಯ ಚುನಾಯಿತ ಅಧಿಕಾರಿ ಮತ್ತು ವಾಯುಪಡೆಯಲ್ಲಿ ರಿಸರ್ವ್​ ಕಮ್ಯಾಂಡರ್ ಆಗಿದ್ದರು. ಅವರ ಜೀವಿತಾವಧಿಯಲ್ಲಿ ಸದಾ ದೇಶದ ಸೇವೆಯಲ್ಲಿ ನಿರತರಾಗಿದ್ದ ಡಸಾಲ್ಟ್​ರ ದಿಢೀರ್​ ಸಾವು ತುಂಬಲಾರದ ನಷ್ಟ” ಎಂದು ಮೆಕ್ರಾನ್ ಟ್ವೀಟ್ ಮಾಡಿದ್ದಾರೆ.

    “ಬಿಸಿನೆಸ್​ಮನ್​, ಖ್ಯಾತ ಛಾಯಾಗ್ರಾಹಕರು ಮತ್ತು ರಾಜಕಾರಣದಲ್ಲಿ ಆಸಕ್ತಿ ಹೊಂದಿದ್ದ ಡಸಾಲ್ಟ್​ ಅವರು ಉತ್ತರ ಫ್ರ್ಯಾನ್ಸ್​ನ ಆಯಿಸ್​ ಪ್ರಾಂತ್ಯದ ಅಭಿವೃದ್ಧಿಗಾಗಿ ದುಡಿಯುತ್ತಿದ್ದರು” ಎಂದು ಪ್ಯಾರಿಸ್ ಅಧ್ಯಕ್ಷರಾದ ವಲೆರಿ ಪೆಕ್ರೆಸ್ಸೆ ಸಂತಾಪ ಸೂಚಿಸಿದ್ದಾರೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಸಿನಿಮಾ ಕ್ಷೇತ್ರಕ್ಕೂ ವಿಆರ್​ಎಲ್​ ಸಂಸ್ಥೆ ಎಂಟ್ರಿ!

    ಹೆಣ್ಮಕ್ಳೇ ಸ್ಟ್ರಾಂಗು ಗುರು | ಹೆಣ್ಣಾಗಿ ಹುಟ್ಟಿದ್ದೇ ಹೆಮ್ಮೆ: ಅದಿತಿ ಪ್ರಭುದೇವ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts