More

    ಶಾಸಕ ಯತ್ನಾಳ ವಿರುದ್ಧ ಆಕ್ರೋಶ

    ವಿಜಯಪುರ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ವೇದಿಕೆ ಕಾರ್ಯಕರ್ತರು ಶುಕ್ರವಾರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
    ಪ್ರಗತಿಪರ ಸಂಘಟನೆಗಳ ವೇದಿಕೆ ಅಧ್ಯಕ್ಷ ಭೀಮಸಿ ಕಲಾದಗಿ ಮಾತನಾಡಿ, ಭಾರತ ಪ್ರಜಾಪ್ರಭುತ್ವ ದೇಶವಾಗಿದ್ದು, ಎಲ್ಲರಿಗೂ ವಾಕ್ ಸ್ವಾತಂತ್ರ್ಯ ಇದೆ. ಆದರೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದು ಸರಿಯಲ್ಲ. ದೊರೆಸ್ವಾಮಿ ಅವರು ಇವತ್ತಿನವರೆಗೂ ತಾವು ನಂಬಿದ ವಿಚಾರ ಮತ್ತು ಆದರ್ಶಗಳಿಗೆ ಅನುಗುಣವಾಗಿ ಜೀವನ ನಡೆಸುತ್ತ ಬಂದಿದ್ದಾರೆ. ಇಂದಿಗೂ ಜನತೆಯ ಮೂಲ ಸಮಸ್ಯೆಗಳ ಕುರಿತು ಬಹಿರಂಗವಾಗಿ ಧ್ವನಿ ಎತ್ತುತ್ತಾ ಬಂದಿದ್ದಾರೆ. ಅಧಿಕಾರದಲ್ಲಿರುವ ಯಾವುದೇ ಪಕ್ಷ ಜನರಿಗೆ ನೆರವಾಗದಿದ್ದಲ್ಲಿ ಅಂತಹ ಪಕ್ಷಗಳನ್ನು ಟೀಕಿಸುತ್ತಾ ಜನಪರ ಹೋರಾಟ ಮಾಡುತ್ತಾ ಬಂದಿದ್ದಾರೆ. ಅಂತಹವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ನಾಡಿನ ಜನತೆಗೆ ತೀವ್ರ ಬೇಸರವನ್ನುಉಂಟು ಮಾಡಿದೆ. ಕೂಡಲೇ ಬಸನಗೌಡ ಪಾಟಿಲ ಯತ್ನಾಳ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

    ವೇದಿಕೆ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ, ಮುಖಂಡರಾದ ಅಕ್ರಮ ಮಾಶಾಳಕರ, ಸದಾನಂದ ಮೋದಿ, ಯಾಜ್ ಕಲಾದಗಿ, ಎಚ್.ಟಿ.ಭರತಕುಮಾರ, ಸುನೀಲ ಸಿದ್ರಾಮಶೆಟ್ಟಿ, ನಿರ್ಮಲಾ ಹೊಸಮನಿ, ದೀಪಾ ವಡ್ಡರ, ಜಕೀಯಾ ಬೇಗಂಪಲ್ಲಿ ಡಾ.ಎಸ್.ಜಿ.ಪಾಟೀಲ, ದಸ್ತಗೀರ ಸಾಲೋಟಗಿ ಮುಂತಾದವರು ಭಾಗವಹಿಸಿದ್ದರು.

    ಯತ್ನಾಳ ಗಡಿಪಾರಿಗೆ ಆಗ್ರಹ

    ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಶಾಸಕ ಸ್ಥಾನ ರದ್ದು ಪಡಿಸಿ, ಅವರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ)ವತಿಯಿಂದ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
    ಸಂಘಟನೆ ರಾಜ್ಯ ಸಂಚಾಲಕ ಜಿತೇಂದ್ರ ಕಾಂಬಳೆ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರನ್ನು ಪಾಕಿಸ್ತಾನದ ಏಜೆಂಟ್, ನಕಲಿ ಸ್ವಾತಂತ್ರ್ಯ ಹೋರಾಟಗಾರರೆಂದು ಮಾತನಾಡಿದ್ದು, ರಾಜ್ಯದಲ್ಲಿ ಕೋಮು-ಗಲಭೆ, ಪ್ರಚೋದನೆಗೆ ಕುಮ್ಮಕ್ಕು ನೀಡಿದಂತಾಗಿದೆ. ಶಾಸಕರ ಹೇಳಿಕೆ ಖಂಡನಾರ್ಹ. ಶಾಸಕ ಯತ್ನಾಳ ಅವರ ಸ್ಥಾನವನ್ನು ರದ್ದುಗೊಳಿಸಿ, ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.

    ಜಿಲ್ಲಾ ಪ್ರಧಾನ ಸಂಚಾಲಕ ಸಂಜು ಕಂಭಾಗಿ, ಶಂಕರ ಚಲವಾದಿ, ಶಿವು ಮೇಲಿನಮನಿ, ಚಂದ್ರು ದ್ಯಾಬೇರಿ, ಚಂದ್ರು ಮೇಲಿನಕೇರಿ, ಸುಖದೇವ ಮೇಲಿನಕೇರಿ, ಬಸವರಾಜ ದೊಡಮನಿ, ಶಶಿ ನಾಯ್ಕೋಡಿ, ಸೋಮು ರಣದೇವಿ, ಭಾಸ್ಕರ ಬೋರಗಿ, ಇನ್ನಿತರರು ಭಾಗವಹಿಸಿದ್ದರು.

    ಶಾಸಕ ಯತ್ನಾಳ ವಿರುದ್ಧ ಆಕ್ರೋಶ
    ಶಾಸಕ ಯತ್ನಾಳ ವಿರುದ್ಧ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts