More

    ಬಿಪಿಎಲ್​ ಕಾರ್ಡ್​ಗೆ ಅರ್ಜಿ ಸಲ್ಲಿಸಿದವರಿಗೂ ಉಚಿತ ಪಡಿತರ: ರಾಜ್ಯ ಸರ್ಕಾರದ ಘೋಷಣೆ

    ಬೆಂಗಳೂರು: ರಾಜ್ಯ ಸರ್ಕಾರ ಈಗಾಗಲೇ ಬಿಪಿಎಲ್​ ಕಾರ್ಡ್​ ಹೊಂದಿರುವ ಕಡು ಬಡವರಿಗೆ ಉಚಿತವಾಗಿ ಎರಡು ತಿಂಗಳ ಪಡಿತರ ವಿತರಣೆ ಮಾಡುತ್ತಿದೆ. ಆದರೆ, ಈಗಾಗಲೇ ಬಿಪಿಎಲ್​ ಕಾರ್ಡ್​ಗೆ ಅರ್ಜಿ ಸಲ್ಲಿಸಿ ಕಾಯುತ್ತಿರುವವರು ಪಡಿತರದಿಂದ ವಂಚಿತರಾಗಿದ್ದರು.

    ಬಿಪಿಎಲ್​ ಕಾರ್ಡ್​ಗಳಿಗೆ ಅರ್ಹರಾಗಿದ್ದರೂ, ಸರ್ಕಾರ ಹಾಗೂ ಇಲಾಖೆ ವಿಳಂಬದಿಂದಾಗಿ ಇವರಿಗೆ ಇನ್ನೂ ಕಾರ್ಡ್​ ಸಿಕ್ಕಿಲ್ಲ. ಲಾಕ್​ಡೌನ್​ನಿಂದಾಗಿ ಅತ್ತ ಕೆಲಸವೂ ಇಲ್ಲದೆ, ಇತ್ತ ಪಡಿತರ ಪಡೆಯಲು ಕಾರ್ಡ್​ ಇಲ್ಲದೆ ರಾಜ್ಯಾದ್ಯಂತ ಲಕ್ಷಾಂತರ ಜನರು ಬವಣೆ ಪಡುತ್ತಿದ್ದಾರೆ. ಇದೀಗ ರಾಜ್ಯ ಸರ್ಕಾರ ಇವರ ನೆರವಿಗೆ ಧಾವಿಸಿದೆ.

    ಬಡವರು ಹಸಿವುನಿಂದ ಬಳಲುಬಾರದೆಂಬ ಉದ್ದೇಶದಿಂದ ಈಗಾಗಲೇ ಬಿಪಿಎಲ್​ ಕಾರ್ಡ್​ದಾರರಿಗೆ ಏಪ್ರಿಲ್ ಮತ್ತು ಮೇ ತಿಂಗಳಿನ ಉಚಿತ ರೇಷನ್ ನೀಡಲಾಗುತ್ತಿದೆ. ಕಾರ್ಡ್​ಗಾಗಿ ಅರ್ಜಿ ಸಲ್ಲಿಸಿ ವರ್ಷಗಟ್ಟಲೆ ಕಾಯುತ್ತಿದ್ದವರಿಗೂ ಉಚಿತ ರೇಷನ್ ನೀಡಲು ಮುಂದಾಗಿದೆ.

    ಪ್ರಸ್ತುತ ಬಿಪಿಎಲ್ ಕಾರ್ಡ್​ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ ಎರಡು ತಿಂಗಳ ಪಡಿತರವಾಗಿ 10 ಕೆಜಿ ಅಕ್ಕಿ, 2 ಕೆಜಿ ಗೋಧಿ ನೀಡಲಾಗುತ್ತಿದೆ. ಇನ್ನು ಅಂತ್ಯೋದಯ ಕಾರ್ಡ್​ ಹೊಂದಿರುವವರಿಗೆ ಒಂದೇ ಬಾರಿಗೆ 70 ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ.

    ಒಟ್ಟಾರೆ 1,88,152 ಬಿಪಿಎಲ್ ಅರ್ಜಿದಾರರಿಗೆ ಜೂನ್ ವರೆಗೆ ಪ್ರತಿ ತಿಂಗಳು 10 ಕೆ.ಜಿ.ಅಕ್ಕಿ ಹಾಗೂ 61,333 ಸಾವಿರ ಎಪಿಎಲ್ ಕಾರ್ಡ್ ಗೆ ಪ್ರತಿ‌ ಕೆ.ಜಿ.ಗೆ. 15 ರೂ.ನಂತೆ ಪ್ರತಿ ತಿಂಗಳು 10 ಕೆ.ಜಿ.ಅಕ್ಕಿ ನೀಡಲಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಕ್ಯಾನ್ಸರ್​ ಪೀಡಿತ ಪತ್ನಿಯನ್ನು ಕೂರಿಸಿಕೊಂಡು 140 ಕಿ.ಮೀ.ದೂರ ಬೈಸಿಕಲ್​ ತುಳಿದ ಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts