More

    ಒತ್ತಡದ ಮಧ್ಯೆ ಆರೋಗ್ಯದತ್ತ ಗಮನಹರಿಸಿ

    ಆಳಂದ: ಪ್ರತಿಯೊಬ್ಬರೂ ಒತ್ತಡದಲ್ಲಿ ಬದುಕು ಸಾಗಿಸುತ್ತಿದ್ದು, ಹೀಗಾಗಿ ಸಾಕಷ್ಟು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ರೋಗಗಳಿಂದ ದೂರವಿರಲು ಎಲ್ಲರೂ ಆರೋಗ್ಯದ ಕಡೆಗೆ ಗಮನಹರಿಸಬೇಕು ಎಂದು ಮಾದನಹಿಪ್ಪರಗಾ ಶಿವಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ ನುಡಿದರು.

    ಲಿಂಗಾಯತ ಭವನದಲ್ಲಿ ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ, ಕ್ಯಾಡಮ್ಯಾಕ್ಸ್ ಸಲ್ಯೂಷನ್ಸ್, ಅಭಿನವ ಶ್ರೀ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯಿಂದ ಶನಿವಾರ ಆಯೋಜಿಸಿದ್ದ ಎರಡು ದಿನಗಳ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಸಾವಿರಾರೂ ಖರ್ಚು ಮಾಡಿ ಮಾಡಿದರೂ ಒಂದೇ ಸುರಿನಡಿ ಎಲ್ಲ ರೀತಿಯ ಆರೋಗ್ಯ ಸೇವೆ ಸಿಗಲ್ಲ. ಆದರೆ ಉಚಿತ ಆರೋಗ್ಯ ಶಿಬಿರಗಳಲ್ಲಿ ನಿಮಗೆ ಪಕ್ಕಾ ಟ್ರಿಟ್‌ಮೆಂಟ್ ಹಾಗೂ ಔಷಧ ಸಿಗಲಿದೆ ಎಂದರು.

    ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್, ಬಿಜೆಪಿ ಮಂಡಲ ಅಧ್ಯಕ್ಷ ಆನಂದರಾವ ಪಾಟೀಲ್, ಪ್ರಮುಖರಾದ ಮಲ್ಲಿಕಾರ್ಜುನ ಕಂದಗೂಳೆ, ಅರುಣಕುಮಾರ ಪಾಟೀಲ್, ಸಂಜಯ ಮಿಸ್ಕಿನ್, ವೀರಣ್ಣ ಮಂಗಾಣೆ, ಚಂದ್ರಕಾಂತ ಭೂಸನೂರ, ಮಲ್ಲಿಕಾರ್ಜುನ ತಡಕಲ್, ಪ್ರಫುಲ್ ಬಾಬಳಸೂರೆ ಇತರರಿದ್ದರು.

    ನುರಿತ ವೈದ್ಯರ ತಂಡ ಬಿಪಿ, ಶುಗರ್, ಕಿವಿ, ಮೂಗು, ಕಣ್ಣು, ಸಕ್ಕರೆ ಕಾಯಿಲೆ, ಕಾನ್ಸರ್, ರಕ್ತದೊತ್ತಡ ಸೇರಿ ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ತಪಾಸಣೆ ಮಾಡಿತು. ಬಳಿಕ ಸೂಕ್ತ ಸಲಹೆ ನೀಡಿ, ಔಷಧಿಗಳನ್ನು ವಿತರಿಸಲಾಯಿತು.

    ಬದುಕಿಗೆ ಹಣ, ಆಹಾರ ಎಷ್ಟು ಮುಖ್ಯವೋ, ಅದರಷ್ಟೆ ಪ್ರಾಮುಖ್ಯತೆ ಆರೋಗ್ಯಕ್ಕಿದೆ. ಇಂದಿನ ಕಲುಷಿತ ಆಹಾರದಿಂದಾಗಿ ಹುಟ್ಟಿದ ಮಗು ಸಹ ಅನಾರೋಗ್ಯದಿಂದ ಬಳಲುತ್ತಿದೆ. ಹೀಗಾಗಿ ಜನರು ಪೌಷ್ಟಿಕ ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಗರ್ಭಿಣಿಯರು ಉತ್ತಮ ಆಹಾರ ಸೇವಿಸಬೇಕು. ಯೋಗ, ಧ್ಯಾನಕ್ಕೂ ಸಮಯ ಕೊಡಿ.
    | ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ, ಮಾದನಹಿಪ್ಪರಗಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts