More

    ಒಂದೇ ಕುಟುಂಬದ ನಾಲ್ವರು ಅಸ್ವಸ್ಥ: ಚಿಕಿತ್ಸೆ ಫಲಿಸದೆ ಬಾಲಕ ಸಾವು, ಮೂವರ ಸ್ಥಿತಿ ಗಂಭೀರ; ನಾನಾ ಅನುಮಾನ!

    ಚಿಂತಾಮಣಿ: ತಾಲೂಕಿನ ನಾರಾಯಣಹಳ್ಳಿಯ ಮನೆಯೊಂದರಲ್ಲಿ ಅಸ್ವಸ್ಥ ಸ್ಥಿತಿಯಲ್ಲಿದ್ದ ಒಂದೇ ಕುಟುಂಬದ ನಾಲ್ವರ ಪೈಕಿ ಬಾಲಕ ಮೃತಪಟ್ಟಿದ್ದು ಮೂವರ ಸ್ಥಿತಿ ಗಂಭೀರವಾಗಿದೆ. ಎಲ್ಲರೊಂದಿಗೆ ಅನ್ಯೋನ್ಯವಾಗಿದ್ದ ಕುಟುಂಬ ಸದಸ್ಯರು ಅಸ್ವಸ್ಥಗೊಂಡಿರುವುದು ಅನುಮಾನಗಳಿಗೆ ಕಾರಣವಾಗಿದೆ.

    ಗ್ರಾಮದ ಮಂಜುನಾಥ್ (40), ಪತ್ನಿ ಹನುಮಕ್ಕ (37) ಮತ್ತು ಮುನಿರಾಜು (18) ಅಸ್ವಸ್ಥಗೊಂಡಿದ್ದು ಕಿರಿಯ ಮಗ ಮುರಳಿ (13) ಮೃತಪಟ್ಟಿದ್ದಾನೆ. ಆತ್ಮಹತ್ಯೆ ಯತ್ನವೋ ಇಲ್ಲವೇ ಕಲುಷಿತ ಆಹಾರ ಸೇವನೆ ಕಾರಣವೋ ಎಂಬುದು ತಿಳಿದು ಬಂದಿಲ್ಲ.

    ಮೂವರ ಪರಿಸ್ಥಿತಿ ಗಂಭೀರವಾಗಿರುವುದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳ ಪರಿಶೀಲಿಸಿದ್ದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: ಯಾವ ಪದನಾಮಗಳೂ ಶಾಶ್ವತವಲ್ಲ, ಬಸವರಾಜ ಬೊಮ್ಮಾಯಿ ಅನ್ನೋದಷ್ಟೇ ಶಾಶ್ವತ!

    ಘಟನೆ ಹಿನ್ನೆಲೆ: ಮಂಜುನಾಥ್ ಮನೆ ಎದುರು ರಾತ್ರಿಯಿಂದ ಬೈಕ್ ಚಾಲನೆಯಲ್ಲಿತ್ತು. ಜತೆಗೆ ಬೆಳಗ್ಗೆಯಾದರೂ ಕುಟುಂಬದವರು ಹೊರಗೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸ್ಥಳೀಯರು, ಕಿಟಕಿಯಿಂದ ಒಳಗೆ ನೋಡಿದ್ದಾರೆ. ಆಗ ನಾಲ್ವರು ಹಾಸಿಗೆಯ ಮೇಲೆ ಒದ್ದಾಡುತ್ತಿದ್ದುದನ್ನು ಕಂಡು ತಕ್ಷಣವೇ ಬಾಗಿಲು ಒಡೆದು ಅಸ್ವಸ್ಥರನ್ನು ಆಂಬುಲೆನ್ಸ್​ನಲ್ಲಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮುರಳಿ ಮೃತಪಟ್ಟಿದ್ದಾನೆ.

    ಇದನ್ನೂ ಓದಿ: ಲೋಕಾಯುಕ್ತ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ದೂರುದಾರ!; ಸೈಟ್​ ಕಬಳಿಕೆ ಬಗ್ಗೆ ದೂರು ಕೊಡಲು ಬಂದಿದ್ದ ಯುವಕ..

    ಅನುಮಾನ ಮೂಡಿಸಿದ ಪ್ರಕರಣ: ಜುಗುಪ್ಸೆಯಿಂದ ಕುಟುಂಬ ಸದಸ್ಯರು ಆತ್ಮಹತ್ಯೆಗೆ ಯತ್ನಿಸಿದರೋ ಇಲ್ಲವೇ ಕಲುಷಿತ ಆಹಾರ ಸೇವನೆಯು ಅಸ್ವಸ್ಥತೆಗೆ ಕಾರಣವೋ? ಎಂಬುದು ನಿಖರವಾಗಿ ತಿಳಿದು ಬಂದಿಲ್ಲ. ಮಂಜುನಾಥ್ ಕುಟುಂಬದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಎಲ್ಲರೂ ಚೆನ್ನಾಗಿಯೇ ಇದ್ದರು, ಯಾರೊಂದಿಗೆ ಜಗಳ ಮಾಡಿಕೊಂಡವರಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಪ್ರಕರಣ ಹಲವು ಅನುಮಾನಗಳನ್ನು ಮೂಡಿಸಿದೆ.

    ಫ್ಲೈಟಲ್ಲಿ ಬಂದು ಕಳವು ಮಾಡಿ ಫ್ಲೈಟಲ್ಲೇ ಮರಳಿದ; 5 ವರ್ಷಗಳ ಹಿಂದೆ ಕದ್ದು ಸಿಕ್ಕಿಬಿದ್ದಿದ್ದ ಆ ದ್ವೇಷವನ್ನು ಮತ್ತೆ ಕದ್ದೇ ತೀರಿಸಿಕೊಂಡ!

    ಮತಾಂತರ ಆಗಿಲ್ಲ ಎಂದಿದ್ದ ತಹಶೀಲ್ದಾರ್​ಗೂ ಶಾಕ್​, ಆಗಿದೆ ಎನ್ನುತ್ತಿರುವ ಶಾಸಕರಿಗೂ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts