More

    ಪೊಲೀಸರಿಗೂ ಕುತ್ತು ತಂದ ನಾಡಬಂದೂಕು ಪ್ರಕರಣ..!

    ಯಾದಗಿರಿ: ಕೇಂದ್ರ ಸಚಿವ ಭಗವಂತ ಖೂಬಾ ಜನಾಶೀರ್ವಾದ ಯಾತ್ರೆಯ ವೇಳೆ ನಾಡಬಂದೂಕು ಸಿಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಮೂವರು ಪೊಲೀಸ್​ ಕಾನ್ಸ್​ಟೆಬಲ್​ಗಳನ್ನು ಅಮಾನತು ಮಾಡಿ ಪೊಲೀಸ್​ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಆದೇಶಿಸಿದ್ದಾರೆ.

    ಪೊಲೀಸ್ ಕಾನ್ಸಟೇಬಲ್​ಗಳಾದ ವಿರೇಶ್, ಸಂತೋಷ ಹಾಗೂ ಮೈಬೂಬ್ ಅವರನ್ನು ಅಮಾನತು ಮಾಡಲಾಗಿದೆ. ನಿನ್ನೆ ಕೇಂದ್ರ ಸಚಿವ ಭಗವಂತ ಖೂಬಾ ಯರಗೋಳ ಗ್ರಾಮಕ್ಕೆ ಆಗಮಿಸಿದಾಗ, ನಾಡಬಂದೂಕು ಸಿಡಿಸಿ ಸ್ವಾಗತ ಮಾಡಿ ಕೋವಿಡ್ ನಿಯಮ ಉಲ್ಲಂಘನೆ ಮಾಡಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿತ್ತು.

    ಈ ಬಗ್ಗೆ ಮಾತನಾಡಿರುವ ಪೊಲೀಸ್​ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಜನಾಶೀರ್ವಾದ ಯಾತ್ರೆಯ ವೇಳೆ ಕೇಂದ್ರ ಸಚಿವ ಭಗವಂತ್​ ಖೂಬಾ ಅವರನ್ನು ಸ್ವಾಗತಿಸಲು ಬಂದೂಕುಗಳನ್ನು ಉಪಯೋಗಿಸಿ ಗಾಳಿಯಲ್ಲಿ ಶಬ್ದ ಮಾಡಿದ್ದರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗಾಗಲೇ ನಾಲ್ವರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದೇವೆ. ಇದರೊಂದಿಗೆ ಅವರ ಬಳಿಯಿದ್ದ ಪರವಾನಗಿ ಸಹಿತ ಬಂದೂಕುಗಳನ್ನು ಸಹ ವಶಕ್ಕೆ ಪಡೆದಿದ್ದೇವೆ. ಬಂದೂಕು ಪರವಾನಗಿ ರದ್ದು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುತ್ತಿದ್ದೇವೆ ಎಂದರು.

    ಇನ್ನು ಬಂದೋಬಸ್ತ್​ ವೇಳೆ ಬಂದೂಕಿನಿಂದ ಗುಂಡು ಹಾರಿಸಿದವರನ್ನು ತಡೆಯದೇ ಅಥವಾ ವಿರೋಧಿಸದೇ ಕರ್ತವ್ಯ ನಿರ್ವಹಿಸಲು ವಿಫಲವಾಗಿದ್ದಕ್ಕೆ ಮೂರು ಮಂದಿ ಕಾನ್ಸ್​ಟೇಬಲ್​ ವಿರುದ್ಧ ಶಿಸ್ತು ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)

    ‘ರಕ್ಷಾ ಬಂಧನ’: ಯುಪಿ ಮಹಿಳೆಯರಿಗೆ ಬಂಪರ್ ಗಿಫ್ಟ್ ನೀಡಿದ ಸಿಎಂ ಯೋಗಿ

    VIDEO: ಮಹಿಳಾ ರಾಜಕಾರಣಿ. ಪ್ರಜಾಪ್ರಭುತ್ವ ಶಬ್ದ ಕೇಳುತ್ತಲೇ ಗಹಗಹಿಸಿ ನಕ್ಕ ತಾಲಿಬಾನಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts