More

    ನಾಲ್ಕು ದಶಕದ ಒಡನಾಡಿ ಇನ್ನು ನೆನಪು ಮಾತ್ರ

    ತೇರದಾಳ: ತಮ್ಮ ನಡೆ-ನುಡಿಯಿಂದ ಭಾವು ಸರ್ಕಾರ ಎಂದೇ ಖ್ಯಾತಿ ಹೊಂದಿದ್ದ ಅವಿಭಜಿತ ವಿಜಯಪುರ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಬಿ.ಎ. ದೇಸಾಯಿ ಅಂತಿಮ ಸಂಸ್ಕಾರ ಹಳಿಂಗಳಿ ಗ್ರಾಮದ ಅವರ ಜಮೀನಿನಲ್ಲಿ ಸಹಸ್ರಾರು ಸಂಖ್ಯೆಯ ಗ್ರಾಮಸ್ಥರು, ಅಭಿಮಾನಿಗಳ ಸಮ್ಮುಖದಲ್ಲಿ ಗುರುವಾರ ನಡೆಯಿತು.

    ಅಂತ್ಯಕ್ರಿಯೆಗೂ ಮುನ್ನ ಗ್ರಾಮದ ಅಹಿಂಸಾ ಪ್ರೌಢಶಾಲೆ ಆವರಣದಲ್ಲಿ ಪಾರ್ಥಿವ ಶರೀರವನ್ನು ಬುಧವಾರ ಸಂಜೆಯಿಂದ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಅಂತಿಮ ದರ್ಶನ ಪಡೆದು ಮಾಜಿ ಸಚಿವ ಎಸ್.ಆರ್. ಪಾಟೀಲ ಮಾತನಾಡಿ, ರಾಜ್ಯದಲ್ಲಿ ಪ್ರಥಮ ಬಾರಿಗೆ ಅಧಿಕಾರ ವಿಕೇಂದ್ರಿಕರಣಗೊಂಡ ಸಂದರ್ಭದಲ್ಲಿ ಅಖಂಡ ವಿಜಯಪುರ ಜಿಲ್ಲಾ ಪರಿಷತ್ ಅಧ್ಯಕ್ಷರಾಗಿ ನಾಡಿನ ಗಮನ ಸೆಳೆದಿದ್ದ ಧೀಮಂತ ನಾಯಕ ಬಿ.ಎ.ದೇಸಾಯಿ ಅವರನ್ನು ಕಳೆದುಕೊಂಡು ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆ ಅನಾಥವಾಗಿವೆ. ಜಿಲ್ಲಾ ಪರಿಷತ್‌ಗೆ ಐದು ವರ್ಷ ಅಧ್ಯಕ್ಷರಾಗಿದ್ದಾಗ ನಾನು ವಿಪಕ್ಷ ನಾಯಕನಾಗಿ ಅವರ ಜತೆ ಒಡನಾಟ ಹೊಂದಿದ್ದೆ. ಅವರ ಅವಧಿಯಲ್ಲಿ ಅಖಂಡ ವಿಜಯಪುರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯಾಗಿದೆ. ಅಗಲಿದ ಚೇತನಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.

    ಇದನ್ನೂ ಓದಿ: ಪಿಡಿಒಗಳಿಗೆ ಜನನ, ಮರಣ ನೋಂದಣಿ ಅಧಿಕಾರ ನೀಡಿ

    ಬಾಗಲಕೋಟೆ ಜಿಪಂ ಮಾಜಿ ಸದಸ್ಯ ಸುಶೀಲಕುಮಾರ ಬೆಳಗಲಿ ಮಾತನಾಡಿ, ಭಾವು ಸರ್ಕಾರ ನನ್ನ ರಾಜಕೀಯ ಗುರು ಆಗಿದ್ದರು. ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಅಧಿಕಾರ ವಿಕೇಂದ್ರಿಕರಣವಾಗಿ ಜಿಲ್ಲಾ ಪರಿಷತ್ ರಚನೆಯಾದಾಗ ವಿಜಯಪುರದ ಪ್ರಥಮ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದರು.

    ನಾಲ್ಕು ಬಾರಿ ಜಿಲ್ಲಾ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿರುವ ಎಸ್.ಆರ್. ಪಾಟೀಲರು ಭಾವು ಸರ್ಕಾರ ದೇಸಾಯಿ ಅವರನ್ನು ಧನ್ಯಾರ ಎಂದು ಕರೆಯುತ್ತಿದ್ದರು. ಜೈನ ಸೇರಿದಂತೆ ಉಳಿದೆಲ್ಲ ಸಮಾಜಗಳೊಂದಿಗೆ ಒಡನಾಟ ಹೊಂದಿದ್ದರು. ಅವರು ಅಲಂಕರಿಸಿದ ಹುದ್ದೆಗಳಿಗಿಂತ ಅವರ ಹೆಸರು ದೊಡ್ಡದಾಗಿತ್ತು. ಅಂತಹ ಮಹಾನ್ ಶಕ್ತಿ ಇಂದು ನಮ್ಮೊಂದಿಗಿಲ್ಲ ಎಂಬುದು ದುಃಖದ ವಿಷಯ ಎಂದರು.

    ಬಿ.ಎ.ದೇಸಾಯಿ ಅವರ ಒಡನಾಡಿ, ಹಿರಿಯ ಜೀವಿ ಆಲಬಾಳದ ತಿಮ್ಮಣ್ಣ ಬಿರಾದಾರ, ಮುಖಂಡ ಸಿದ್ದು ಕೊಣ್ಣೂರ, ಡಾ. ಪದ್ಮಜೀತ್ ನಾಡಗೌಡಪಾಟೀಲ, ಬಿ.ಬಿ. ವೆಂಕಟಾಪುರ ಅನೇಕರು ಮಾತನಾಡಿ ಕಂಬನಿ ಮಿಡಿದರು.

    ಮುಖಂಡರಾದ ಅರುಣಕುಮಾರ ಶಹಾ, ಜಿ.ಎಸ್. ನ್ಯಾಮಗೌಡ, ಅರುಣ ಯಲಗುದ್ರಿ, ವರ್ಧಮಾನ ನ್ಯಾಮಗೌಡ, ಸತೀಶ ಹಜಾರೆ, ಡಿವೈಎಸ್‌ಪಿ ಯಮನಪ್ಪ ಲೋಕಾಪೂರ, ನಿಲೇಶ ದೇಸಾಯಿ ಸೇರಿ ಅವಳಿ ಜಿಲ್ಲೆಯ ಮುಖಂಡರು, ಅಪಾರ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts