More

    ಸಿಪಿಐ-ಎಂ ಕಾರ್ಯಕರ್ತರ ಹತ್ಯೆ: ಕಾಂಗ್ರೆಸ್​​ನ ನಾಲ್ವರ ಬಂಧನ, ಪ್ರಮುಖ ಆರೋಪಿಗಳಿಗಾಗಿ ಹುಡುಕಾಟ

    ತಿರುವನಂತಪುರಂ: ಸಿಪಿಐ-ಎಂ ಯುವಮೋರ್ಚಾದ ಇಬ್ಬರು ಕಾರ್ಯಕರ್ತರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಂದು ನಾಲ್ವರು ಕಾಂಗ್ರೆಸ್​ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

    ಭಾನುವಾರ ಮಧ್ಯರಾತ್ರಿ ಸಿಪಿಐ-ಎಂ ಯುವಮೋರ್ಚಾ ಸದಸ್ಯರಾದ ಕಾರ್ಯಕರ್ತರಾದ ಹಕ್​ ಮೊಹಮ್ಮದ್​ (24) ಮತ್ತು ಮಿಥಿಲಾಜ್​ (32) ಎಂಬುವರನ್ನು ತಿರುವನಂತಪುರಂನಿಂದ 25 ಕಿಮೀ ದೂರದಲ್ಲಿರುವ ವೆಂಜಾರಾಮೂಡುವಿನಲ್ಲಿ, ಬೈಕ್​​ನಲ್ಲಿ ಬಂದ ಐವರು, ಲಾಂಗು, ಚೂರಿಗಳಿಂದ ಇರಿದು ಹತ್ಯೆ ಮಾಡಿದ್ದರು.

    ಆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶೇಜಿತ್​, ಅಜಿತ್​, ನಜೀಬ್​, ಸಾಥಿ ಎಂಬುವರನ್ನು ಬಂಧಿಸಿದ್ದೇವೆ. ಇವರೆಲ್ಲರೂ ಕಾಂಗ್ರೆಸ್​ ಕಾರ್ಯಕರ್ತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇವರನ್ನು ಹೊರತು ಪಡಿಸಿದ ಇನ್ನೂ ನಾಲ್ವರನ್ನು ವಿಚಾರಣೆಗೆ ವಶಕ್ಕೆ ಪಡೆದುಕೊಂಡಿದ್ದೇವೆ. ಪ್ರಮುಖ ಆರೋಪಿಗಳಾದ ಸಜೀವ್​, ಸನಲ್​ ಇಬ್ಬರನ್ನು ಇನ್ನೂ ಬಂಧಿಸಲಾಗಲಿಲ್ಲ ಎಂದು ಹೇಳಿದ್ದಾರೆ.
    ಹತ್ಯೆಯಾದ ಕಾರ್ಯಕರ್ತರ ಗುಂಪು ಮತ್ತು ಈಗ ಬಂಧಿಸಲ್ಪಟ್ಟ ಗ್ಯಾಂಗ್​ ನಡುವೆ ಮೊದಲಿನಿಂದಲೂ ಘರ್ಷಣೆ ಇದೆ. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಒಮ್ಮೆ ಗಲಾಟೆ ಮಾಡಿಕೊಂಡಿದ್ದರು ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪ್ರಧಾನಿಯೇ ಸ್ಫೂರ್ತಿ: ಬಿಜೆಪಿ ಶಾಸಕನಿಂದ ಹಳ್ಳಿಗಳ ದತ್ತು- ಪ್ಯಾಡ್‌, ಸೋಪ್‌ ವಿತರಣೆ

    ಸಿಪಿಐ-ಎಂ ಕಾರ್ಯಕರ್ತರ ಸಾವಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಸೇರಿ, ಪಕ್ಷದ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ತನಿಖೆಗೂ ಆಗ್ರಹಿಸಿದ್ದಾರೆ. ಈ ಮಧ್ಯೆ ಕಾಂಗ್ರೆಸ್​ ಕೂಡ ತಮಗೂ, ಘಟನೆಗೂ ಸಂಬಂಧವಿಲ್ಲ ಎಂದು ಹೇಳಿದೆ.

    ಇವರಿಬ್ಬರ ಸಾವಿನ ನಂತರ ಸಿಪಿಐ-ಎಂ ಕಾರ್ಯಕರ್ತರು ತಿರುವನಂತಪುರಂ ಮತ್ತು ಕೊಲ್ಲಂ ಜಿಲ್ಲೆಗಳ ಹಲವು ಕಡೆ ಕಾಂಗ್ರೆಸ್​ ಕಚೇರಿಗಳಿಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದಾರೆ. (ಏಜೆನ್ಸೀಸ್​)

    ಈ ಬಾರಿ ವಿದ್ಯಾರ್ಥಿಗಳಿಗೆ ಇರಲ್ಲ ರಿಯಾಯ್ತಿ ಬಸ್​ಪಾಸ್​; ಹಣ ಕೊಡಲ್ಲ ಎಂದು ಸರ್ಕಾರದ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts