More

    ಪಾರಂಪರಿಕ ವಸ್ತು ಸಂಗ್ರಹಾಲಯ ಸಾಂಸ್ಕೃತಿಕ ಶ್ರೀಮಂತಿಕೆ ಬಿಂಬಿಸುವ ಕೇಂದ್ರ

    ಧಾರವಾಡ: ಎನ್.ಪಿ. ಭಟ್ಟರು ೨೦೦೮ರಲ್ಲಿ ಇಲ್ಲಿನ ಕಾರ್ಪೋರೇಶನ್ ಆವರಣದಲ್ಲಿ ಇಂಟ್ಯಾಕ್ ಮತ್ತು ಹು-ಧಾ ಮಹಾನಗರ ಪಾಲಿಕೆಯ ಸಾಂಸ್ಕೃತಿಕ ಪರಂಪರೆಯ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿದರು. ಇದು ಧಾರವಾಡದ ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯನ್ನು ಬಿಂಬಿಸುವ ಕೇಂದ್ರವಾಗಿದೆ ಎಂದು ಡಾ. ಯಶೋದಮ್ಮ ಭಟ್ಟ ಹೇಳಿದರು.
    ನಗರದ ಹು- ಧಾ ಮಹಾನಗರ ಪಾಲಿಕೆ ಆವರಣದಲ್ಲಿರುವ ಪಾರಂಪರಿಕ ವಸ್ತು ಸಂಗ್ರಹಾಲಯದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರÀÄ.
    ಎನ್.ಪಿ. ಭಟ್ಟರು ಅವನಿ ರಸಿಕರ ರಂಗದ ಮೂಲಕ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ವಾತಾವರಣವನ್ನು ನಿಜ ಅರ್ಥದಲ್ಲಿ ಶ್ರೀಮಂತಗೊಳಿಸಿದರು ಎಂದರು.
    ಬ್ರಿಗೇಡಿಯರ್ ಎಸ್.ಜಿ. ಭಾಗವತ್ ಮಾತನಾಡಿ, ಜೀವನದಲ್ಲಿ ಆದರ್ಶ ಬದುಕಿನ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದ ಭಟ್ಟರು, ನಿವೃತ್ತಿ ಜೀವನವನ್ನು ಇತರರಿಗೆ ಮಾದರಿಯಾಗುವಂತೆ ಬದುಕಿ ತೋರಿಸಿದರು ಎಂದರು.
    ಸಾಹಿತಿ ಶ್ಯಾಮಸುಂದರ ಬಿದರಕುಂದಿ, ಬಿ.ಆರ್. ಸಾರಥಿ, ಲಯನ್ಸ್ ಅಧ್ಯಕ್ಷೆ ಶೈಲಾ ಕರಗುದರಿ, ಅರುಂಧತಿ ಸವದತ್ತಿ, ಅರವಿಂದ ಯಾಳಗಿ ಮಾತನಾಡಿದರು.
    ಪ್ರೊ. ಸುರೇಶ ಗುದಗನವರ, ಡಾ. ರಾಜಶ್ರೀ ಗುದಗನವರ, ಗೀತಾ ಸಾರಥಿ, ಮೌಸಿನ್ ಖಾನ್, ಅನುಪಮಾ ಶೆಟ್ಟಿ, ಮೀರಾ ಶೆಟ್ಟಿ, ಇತರರಿದ್ದರು. ಶ್ರುತಿ ಪ್ರಾರ್ಥಿಸಿದರು. ಸುಮಂಗಲಾ ಭಟ್ಟ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts