More

    ಕಟ್ಟಡ ಕಾರ್ಮಿಕರು, ಕೃಷಿಕರು ಬಿಜಿ

    ಗಂಗೊಳ್ಳಿ: ಕರೊನಾ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್‌ಡೌನ್ ಜಾರಿಗೊಳಿಸಿದ್ದು, ಈ ಅವಧಿಯಲ್ಲಿ ಕೃಷಿ ಚಟುವಟಿಕೆಗಳಿಗೆ ಮತ್ತು ಕಟ್ಟಡ ಕಾಮಗಾರಿಗಳಿಗೆ ರಿಯಾಯಿತಿ ನೀಡಿದ್ದರಿಂದ ಗಂಗೊಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರೈತರು ಹಾಗೂ ಕಟ್ಟಡ ಕಾರ್ಮಿಕರು ತಮ್ಮ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.

    ರೈತರು ಗದ್ದೆಗಳಿಗೆ ಗೊಬ್ಬರಗಳನ್ನು ಹಾಕುವುದು, ಸುಡುಮಣ್ಣು ತಯಾರಿಸುವುದು, ತರೆಗೆಲೆ ಸಂಗ್ರಹದಲ್ಲಿ ನಿರತರಾಗಿದ್ದಾರೆ. ಮುಂಗಾರು ಬೆಳೆಗೆ ಹೊಲಗದ್ದೆಗಳನ್ನು ಸಜ್ಜುಗೊಳಿಸುತ್ತಿದ್ದಾರೆ. ನಿರ್ಮಾಣ ಹಂತದ ಕಾಮಗಾರಿಯಲ್ಲಿ ತೊಡಗಿಕೊಂಡ ಕಾರ್ಮಿಕರು ಹೊಸ ಮನೆ, ಕಟ್ಟಡ ನಿರ್ಮಾಣದ ಕಾರ್ಯದಲ್ಲಿ ನಿರತರಾಗಿದ್ದಾರೆ. ಅತ್ಯಂತ ದೊಡ್ಡ ಸಂಖ್ಯೆಯಲ್ಲಿ ಕಾರ್ಮಿಕರನ್ನು ಹೊಂದಿರುವ ಈ ಎರಡು ಕ್ಷೇತ್ರದಲ್ಲಿ ಈ ಬಾರಿ ಜನತಾ ಕರ್ಫ್ಯೂ ಅವಧಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದರಿಂದ ಆರ್ಥಿಕತೆಗೆ ಪುನಶ್ಚೇತನ ನೀಡಿದಂತೆ ಆಗಿದ್ದು ಕೃಷಿಕರು ಹಾಗೂ ಕಾರ್ಮಿಕರು ತಮ್ಮ ಜೀವನೋಪಾಯಕ್ಕೆ ದಾರಿ ಕಂಡುಕೊಳ್ಳಲು ಸಹಕಾರಿಯಾಗಿದೆ.

    ಲಾಕ್‌ಡೌನ್ ಅವಧಿಯಲ್ಲಿ ಕಟ್ಟಡ ನಿರ್ಮಾಣದ ಕೆಲಸದಲ್ಲಿ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದ್ದು ತುಂಬಾನೇ ಸಹಕಾರಿ ಆಗಿದೆ. ಕಟ್ಟಡ ಕಾರ್ಮಿಕರು ನಿರ್ಭೀತಿಯಿಂದ ಕೆಲಸ ಮಾಡಬಹುದಾಗಿದೆ. ಕಾರ್ಮಿಕರ ಹಿತವನ್ನು ಗಮನದಲ್ಲಿಟ್ಟುಕೊಂಡ ರಾಜ್ಯ ಸರ್ಕಾರ ಉತ್ತಮ ನಿರ್ಧಾರ ತೆಗೆದುಕೊಂಡಿದೆ.
    ಶ್ರೀನಿವಾಸ ಎಂ. ಗಂಗೊಳ್ಳಿ
    ಕಟ್ಟಡ ನಿರ್ಮಾಣದ ಗುತ್ತಿಗೆದಾರ

    ಕೃಷಿ ಚಟುವಟಿಕೆಗಳಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿರುವುದು ಕೃಷಿಕರಿಗೆ ತುಂಬಾ ಉಪಯೋಗವಾಗಿದೆ. ಬೆಳೆದ ತರಕಾರಿಗಳನ್ನು, ಒಣ ಹುಲ್ಲು ಸಾಗಾಟ ಸಾಗಾಟ ಮಾಡಬಹುದಾಗಿದೆ. ವಿನಾಯಿತಿ ಕೃಷಿಕರಿಗೆ ವರದಾನವಾಗಿದೆ.
    ವಿಜಯ್ ಪೂಜಾರಿ ಗಂಗೊಳ್ಳಿ, ಯುವ ಕೃಷಿಕ

    ಲಾಕ್ ಡೌನ್ ಅವಧಿಯಲ್ಲಿ ಕೃಷಿ ಮತ್ತು ಕಟ್ಟಡ ಕಾರ್ಮಿಕರಿಗೆ ಒಂದಿಷ್ಟು ವಿನಾಯಿತಿ ನೀಡಿದ್ದರಿಂದ ಆರ್ಥಿಕತೆಯ ಬೆಳವಣಿಗೆಗೆ ಇದು ಸಹಕಾರಿ ಆಗಿದೆ. ಸಾಂಕ್ರಾಮಿಕ ರೋಗವನ್ನು ಹತೋಟಿ ಮಾಡುವ ಜತೆಗೆ ಆರ್ಥಿಕತೆಯ ಬೆಳವಣಿಗೆಯನ್ನು ಕಾಯ್ದು ಕೊಳ್ಳುವುದು ಅತಿ ಮುಖ್ಯ. ಜನರು ಕೋವಿಡನ್ನು ಲಗುವಾಗಿ ಪರಿಗಣಿಸದೆ ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.
    ಡಾ.ಮೋಹನದಾಸ ಪೈ, ಚೇತನಾ ಕ್ಲಿನಿಕ್, ಗಂಗೊಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts