More

    ಭಾರತದ ಉದ್ಯಮಿ ಕೊಕೇನ್ ನೀಡಿ ಫಿಕ್ಸಿಂಗ್ ಆಮಿಷ ಒಡ್ಡಿದ್ದ, ಜಿಂಬಾಬ್ವೆ ಕ್ರಿಕೆಟಿಗ ಆರೋಪ!

    ನವದೆಹಲಿ: ಭಾರತದ ಉದ್ಯಮಿಯೊಬ್ಬ ತಮಗೆ ಮಾದಕದ್ರವ್ಯ ಕೊಕೇನ್ ಸೇವಿಸುವಂತೆ ಮಾಡಿ ಬಳಿಕ ಸ್ಪಾಟ್ ಫಿಕ್ಸಿಂಗ್‌ಗೆ ಸೆಳೆಯಲು ಬ್ಲ್ಯಾಕ್‌ಮೇಲ್ ಮಾಡಿದ್ದ ಎಂದು ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಬ್ರೆಂಡನ್ ಟೇಲರ್ ಆರೋಪಿಸಿದ್ದಾರೆ. ಅಲ್ಲದೆ ಈ ಆಮಿಷದ ಬಗ್ಗೆ ಐಸಿಸಿಗೆ ತಡವಾಗಿ ಮಾಹಿತಿ ನೀಡಿದ್ದರಿಂದ ತಮಗೆ ಬಹುವರ್ಷಗಳ ನಿಷೇಧ ಶಿಕ್ಷೆಯೂ ಎದುರಾಗಬಹುದು ಎಂಬ ಭೀತಿ ವ್ಯಕ್ತಪಡಿಸಿದ್ದಾರೆ.

    2019ರಲ್ಲಿ ಉದ್ಯಮಿಯೊಬ್ಬ ಪ್ರಾಯೋಜಕತ್ವದ ಬಗ್ಗೆ ಚರ್ಚಿಸಲು ಭಾರತಕ್ಕೆ ಆಹ್ವಾನಿಸಿದ್ದ. ಅದರಂತೆ ಹೋದಾಗ ಡ್ರಿಂಕ್ಸ್ ನಡುವೆ ನಾನು ಕೊಕೇನ್ ಸೇವಿಸುವಂತೆ ಮಾಡಿದ್ದ. ಮರುದಿನ ನನ್ನ ಹೋಟೆಲ್ ರೂಮ್‌ಗೆ ಬಂದು ಅದರ ವಿಡಿಯೋ ತೋರಿಸಿದ್ದ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡದಿದ್ದರೆ ಅದನ್ನು ಬಹಿರಂಗಪಡಿಸುವ ಬೆದರಿಕೆ ಒಡ್ಡಿದ್ದ. ಜತೆಗೆ 5-6 ಮಂದಿ ಇದ್ದರು. ಹೀಗಾಗಿ ಆಗ ನಾನು ಅದಕ್ಕೆ ಒಪ್ಪಿ 11 ಲಕ್ಷ ರೂ. ಮುಂಗಡ ಪಡೆದಿದ್ದೆ. ಬಳಿಕ ಮತ್ತೆ 15 ಲಕ್ಷ ರೂ. ನೀಡುವುದಾಗಿ ಹೇಳಿದ್ದ. ಆಗ ನನ್ನ ಮತ್ತು ಕುಟುಂಬದ ಸುರಕ್ಷತೆಯೇ ನನ್ನ ಆದ್ಯತೆಯಾಗಿತ್ತು. ಅದಾಗಿ 4 ತಿಂಗಳ ಬಳಿಕವಷ್ಟೇ ನಾನು ಆಮಿಷದ ಬಗ್ಗೆ ಐಸಿಸಿಗೆ ಮಾಹಿತಿ ನೀಡಿದ್ದೆ ಎಂದು 35 ವರ್ಷದ ಟೇಲರ್ ಹೇಳಿದ್ದಾರೆ. ಜಿಂಬಾಬ್ವೆ ಪರ 205 ಏಕದಿನ, 34 ಟೆಸ್ಟ್ ಮತ್ತು 45 ಟಿ20 ಪಂದ್ಯ ಆಡಿರುವ ಅವರು ಕಳೆದ ವರ್ಷವಷ್ಟೇ ನಿವೃತ್ತಿ ಪ್ರಕಟಿಸಿದ್ದರು.

    ಆ ಆಮಿಷದ ಹೊರತಾಗಿಯೂ ತಾನೆಂದೂ ಮ್ಯಾಚ್ ಅಥವಾ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿಲ್ಲ. ನಾನು ಮೋಸಗಾರನಲ್ಲ. ಕ್ರಿಕೆಟ್ ಆಡವನ್ನು ಪ್ರೀತಿಸುತ್ತೇನೆ. ಆದರೂ ತಡವಾಗಿ ಮಾಹಿತಿ ನೀಡಿದ್ದಕ್ಕೆ ಐಸಿಸಿ ನನಗೆ ಶಿಕ್ಷೆ ನೀಡಿದರೂ, ಅದನ್ನು ಸ್ವೀಕರಿಸುವೆ. ಇದರಿಂದ ಇತರ ಕ್ರಿಕೆಟಿಗರಾದರೂ ಇಂಥ ತಪ್ಪು ಮಾಡದಿರಲಿ ಎಂದು ಟೇಲರ್ ಹೇಳಿದ್ದಾರೆ. ತಾವು ಆರೋಪಿಸಿರುವ ಉದ್ಯಮಿಯ ಹೆಸರನ್ನು ಅವರು ಉಲ್ಲೇಖಿಲ್ಲ.

    PHOTO: ಟೀಮ್ ಇಂಡಿಯಾ ಸ್ಪಿನ್ನರ್ ಅಕ್ಷರ್ ಪಟೇಲ್ ನಿಶ್ಚಿತಾರ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts