More

    ರಾಜ್ಯಸಭಾ ಸದಸ್ಯರಾಗಿ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಪ್ರಧಾನಿ ದೇವೇಗೌಡ

    ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ರಾಜ್ಯಸಭೆ ಸದಸ್ಯರಾಗಿ ಇಂದು ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದರು.

    ಜೂನ್ 12 ರಂದು ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಎಚ್​ಡಿಡಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಜು.22ರಂದು ರಾಜ್ಯಸಭೆ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಾಗಿತ್ತು. ಆದರೆ, ಅನಾರೋಗ್ಯ ಮತ್ತು ಕರೊನಾ ಸಾಂಕ್ರಾಮಿಕದ ಕಾರಣ ದೇವೇಗೌಡರು ನವದೆಹಲಿಗೆ ಪ್ರಯಾಣಿಸಲು ಆಗಿರಲಿಲ್ಲ.

    ಇದನ್ನೂ ಓದಿ: ಇಂಜಿನಿಯರ್​ ವಿದ್ಯಾರ್ಥಿಗಳಿಂದ ಕಡಿಮೆ ವೆಚ್ಚದ ಇ-ಬೈಕ್​ ಸಂಶೋಧನೆ: ಗಂಟೆಗೆ ಎಷ್ಟು ಕಿ.ಮೀ ಚಲಿಸಬಲ್ಲದು?

    ಸಂಸತ್​ ಅಧಿವೇಶನ ಆರಂಭವಾಗಿರುವ ಹಿನ್ನೆಲೆಯಲ್ಲಿ ರಾಜ್ಯಸಭಾ ಸದಸ್ಯರಾಗಿ ಎಚ್​ಡಿಡಿ ಪ್ರಮಾಣ ವಚನ ಸ್ವೀಕರಿಸಿದರು. ಕರೊನಾ ಪ್ರಕರಣಗಳ ಏರಿಕೆಯಿಂದಾಗಿ ಸಂಸತ್​ ಅಧಿವೇಶನ ಮೊಟಕುಗೊಳ್ಳುವ ಸಾಧ್ಯತೆ ಇದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts