More

    ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಕರೊನಾ ಸೋಂಕು

    ನವದೆಹಲಿ: ಈಗಾಗಲೇ ಹಲವು ಕೇಂದ್ರ ಸಚಿವರು ಕರೊನಾ ಸೋಂಕಿಗೆ ಒಳಗಾಗಿದ್ದಾರೆ. ಗೃಹ ಸಚಿವ ಅಮಿತ್​ ಷಾ ಅವರು ಸೋಂಕಿನಿಂದ ಮುಕ್ತರಾಗಿ, ನಿನ್ನೆ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ.  ಇದೀಗ ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ.

    ಪ್ರಣಬ್​ ಮುಖರ್ಜಿ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ನಾನು ಬೇರೆ ಕೆಲವು ಕಾರಣಕ್ಕಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಇಂದು ಕೊವಿಡ್​ ಟೆಸ್ಟ್​ಗೆ ಕೂಡ ಒಳಗಾಗಿದ್ದು, ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಕಳೆದ ಒಂದು ವಾರದಿಂದ ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ದಯವಿಟ್ಟು ಕರೊನಾ ಟೆಸ್ಟ್​ಗೆ ಒಳಗಾಗಿ. ಈಗಲೇ ಐಸೋಲೇಟ್​ ಆಗಿ ಎಂದು ಮನವಿ ಮಾಡಿದ್ದಾರೆ. (ಏಜೆನ್ಸೀಸ್​)

    ಅರ್ಚಕರ ಭೂಸಮಾಧಿ ಸ್ಥಳದಲ್ಲಿ ಸಿಕ್ಕಿದೆ ‘ಸಮಾಧಿ ನಿರ್ಣಯ’ ಪುಸ್ತಕ! ಉತ್ತರ ಸಿಗದ ಮರಣ ರಹಸ್ಯ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts