More

    ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ಮುಂಬೈ ರಣಜಿ ತಂಡದ ಮಾಜಿ ಆಟಗಾರ ಬಂಧನ

    ಮುಂಬೈ: ಐಪಿಎಲ್ ಪಂದ್ಯಗಳಿಗೆ ಬೆಟ್ಟಿಂಗ್ ನಡೆಸುತ್ತಿದ್ದ ರಣಜಿ ಟ್ರೋಫಿಯಲ್ಲಿ ಮುಂಬೈ ಹಾಗೂ ಒಡಿಶಾ ತಂಡಗಳನ್ನು ಪ್ರತಿನಿಧಿಸಿದ್ದ ರಾಬಿನ್ ಮಾರಿಸ್ ಅವರನ್ನು ಮುಂಬೈನ ವೆರ್ಸೊವಾ ಪೊಲೀಸರು ಬಂಧಿಸಿದ್ದಾರೆ. ರಾಬಿನ್ ಜತೆಗೆ ಇತರ ಇಬ್ಬರನ್ನು ಬಂಧಿಸಿದ್ದಾರೆ. ಕೆನಡ ಮೂಲದ 44 ವರ್ಷದ ರಾಬಿನ್ ಮಾರಿಸ್, 42 ಪ್ರಥಮ ದರ್ಜೆ ಹಾಗೂ 51 ಲಿಸ್ಟ್ ಎ ಪಂದ್ಯಗಳನ್ನಾಡಿದ್ದಾರೆ. 1995 ರಿಂದ 2007 ರವರೆಗೂ ಮುಂಬೈ ಹಾಗೂ ಒಡಿಶಾ ತಂಡಗಳನ್ನು ಪ್ರತಿನಿಧಿಸಿದ್ದಾರೆ.

    ಮುಂಬೈನ ಪಶ್ಚಿಮ ಅಂಧೇರಿಯಲ್ಲಿರುವ ರಾರಿ ರಸ್ತೆಯ ರಾಬಿನ್ ಮಾರಿಸ್ ಫ್ಲಾಟ್‌ನಲ್ಲಿ ಬೆಟ್ಟಿಂಗ್ ನಡೆಸಲಾಗುತ್ತಿತ್ತು. ಈ ವಿಷಯದ ಖಚಿತತೆಯ ಮೇರೆಗೆ ಪೋಲಿಸರು ರಾಬಿನ್ ಫ್ಲಾಟ್ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ರಾಬಿನ್ ಹಾಗೂ ಇನ್ನಿಬ್ಬರು ಸ್ನೇಹಿತರು ಆರ್‌ಸಿಬಿ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ನಡುವಿನ ಎಲಿಮಿನೇಟರ್ ಹಣಾಹಣಿ ಪಂದ್ಯಕ್ಕೆ ಬೆಟ್ಟಿಂಗ್‌ಗಾಗಿ ಹಣ ಸಂಗ್ರಹಿಸುತ್ತಿದ್ದ ವೇಳೆ ದಾಳಿ ಮಾಡಲಾಗಿದೆ.

    ಈ ವೇಳೆ ಪೊಲೀಸರು ಹಲವು ಮೊಬೈಲ್, ಎರಡು ಟ್ಯಾಬ್, 9 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಐಪಿಎಲ್ ಗ್ಯಾಬ್ಲಿಂಗ್ ಕಾಯ್ದೆಯಡಿ ಕೇಸು ದಾಖಲಿಸಲಾಗಿದೆ. ಬಲಗೈ ಬ್ಯಾಟ್ಸ್‌ಮನ್-ಬೌಲರ್ ಆಗಿದ್ದ ರಾಬಿನ್ ಮಾರಿಸ್, 42 ಪ್ರಥಮ ದರ್ಜೆ ಪಂದ್ಯಗಳಿಂದ 9 ಅರ್ಧಶತಕ ಸೇರಿದಂತೆ 1358 ರನ್ ಬಾರಿಸಿ, 76 ವಿಕೆಟ್ ಕಬಳಿಸಿದ್ದರು. ಇಂಡಿಯನ್ ಕ್ರಿಕೆಟ್ ಲೀಗ್‌ನಲ್ಲಿ ಮುಂಬೈ ಚಾಂಪ್ಸ್ ತಂಡ ಪ್ರತಿನಿಧಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts