More

  ಮಾಜಿ ಬ್ಲೂಫಿಲಂ ಸ್ಟಾರ್​ ಮಿಯಾ ಖಲೀಫ್​ ಭಾರತೀಯ ಮುಸ್ಲಿಂ ಎಂದು ಭಾವಿಸಿ ಟ್ವೀಟ್​ ಮಾಡಿ ಪೇಚಿಗೆ ಸಿಲುಕಿದ ಪಾಕ್​ ಮಾಜಿ ಸಚಿವ

  ಇಸ್ಲಮಾಬಾದ್​: ಮಾಜಿ ಬ್ಲೂಫಿಲಂ ಸ್ಟಾರ್​ ಮಿಯಾ ಖಲೀಫ್​ ಭಾರತೀಯ ಮುಸ್ಲಿಂ ಎಂದು ಭಾವಿಸಿ ಟ್ವೀಟ್​ ಮಾಡುವ ಮೂಲಕ ಪಾಕಿಸ್ತಾನ ಮಾಜಿ ಸಚಿವರೊಬ್ಬರು ಭಾರಿ ಟ್ರೋಲ್​ಗೆ ಗುರಿಯಾಗಿದ್ದಾರೆ.

  ಸೋಮವಾರ ಟ್ವಿಟರ್​ ಬಳಕೆದಾರರೊಬ್ಬರು ಮಿಯಾ ಖಲೀಫ್​ ಫೋಟೋ ಪೋಸ್ಟ್​ ಮಾಡಿ, ಇವರು ಭಾರತದ ಪ್ರಾದೇಶಿಕ ಸಿನಿಮಾ ಕ್ಷೇತ್ರದ ಪ್ರಭಾವಿ ನಟಿಯಾಗಿದ್ದಾರೆ. ಹಿಜಬ್​ ಧರಿಸಿ, ಸಿಎಎ ವಿರೋಧಿಸುವ ಮೂಲಕ ಭಾರತೀಯ ಮುಸ್ಲಿಂರೊಂದಿಗೆ ಐಕ್ಯತೆ ಮೂಡಿಸಿದ್ದಾರೆ. ಅವರಿಗೆ ನಮಸ್ಕರಿಸಿ, ಮೋದಿ ಅವರು ಶೀಘ್ರವೇ ರಾಜೀನಾಮೆ ನೀಡಲಿದ್ದಾರೆ ಎಂದು ರೆಹಮಾನ್​ ಮಲಿಕ್​ಗೆ ಟ್ವೀಟ್​ ಮಾಡಿದ್ದರು.

  ಆದರೆ, ಜವಾಬ್ದಾರಿಯು ಸ್ಥಾನದಲ್ಲಿರುವ ಮಲಿಕ್​ ಟ್ವೀಟ್​ ಬಗ್ಗೆ ತಿಳಿದುಕೊಳ್ಳುವ ಗೋಜಿಗೆ ಹೋಗದೇ ಮಿಯಾ ಖಲೀಫ್​ರನ್ನು ಭಾರತೀಯ ಮುಸ್ಲಿಂ ಎಂದು ಭಾವಿಸಿ ಅವಳಿಗೆ ದೇವರು ಆಶೀರ್ವಾದ ಮಾಡಲಿ ಎಂದು ಟ್ವೀಟ್​ ಮಾಡುವ ಮೂಲಕ ಪೇಚಿಗೆ ಸಿಲುಕಿದ್ದಾರೆ. ರೆಹಮಾನ್​ ಟ್ವೀಟ್​ ಟ್ರೋಲ್​ಗೆ ಗುರಿಯಾಗುತ್ತಿದ್ದಂತೆ ಡಿಲೀಟ್​ ಮಾಡಿದ್ದಾರೆ.

  ಅಂದಹಾಗೆ ಮಿಯಾ ಖಲೀಫ್​ ಬ್ಲೂಫಿಲಂ ಸ್ಟಾರ್​ ಆಗಿದ್ದು, ಅಮೆರಿಕ ಮೂಲದವರು. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts