More

    ಪ್ರತಿ ಎಕರೆಗೆ 30 ಸಾವಿರ ರೂ. ಪರಿಹಾರ ನೀಡಿ

    ಗಂಗಾವತಿ: ಮಳೆ ಮತ್ತು ಗಾಳಿಯಿಂದ ಹಾನಿಗೊಳಗಾದ ಭತ್ತದ ಗದ್ದೆಗಳನ್ನು ಪರಿಶೀಲಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷಿಸುತ್ತಿರುವುದನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಹೇಳಿದರು.

    ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ

    ತಾಲೂಕಿನ ಸಂಗಾಪುರ ವ್ಯಾಪ್ತಿಯಲ್ಲಿ ಮಳೆ ಮತ್ತು ಗಾಳಿಯಿಂದ ಹಾನಿಗೊಳಗಾದ ಭತ್ತದ ಗದ್ದೆಗಳನ್ನು ಶುಕ್ರವಾರ ಪರಿಶೀಲಿಸಿ ಮಾತನಾಡಿದರು. ಮಳೆ ಕೊರತೆಯಿಂದ ಜಲಾಶಯದಲ್ಲಿ ನೀರಿನಿಲ್ಲದಂತಾಗಿದೆ. ಎರಡನೇ ಬೆಳೆಗೆ ನೀರು ಸಿಗುವುದು ಅಸಾಧ್ಯವಾಗಿದೆ ಎಂದರು.

    ಇದನ್ನೂ ಓದಿ:KEA ಅಕ್ರಮ ಕಿಂಗ್‌ಪಿನ್ ಆರ್‌.ಡಿ.ಪಾಟೀಲ್ ಬಂಧನ

    ಮೊದಲ ಬೆಳೆ ಇಳುವರಿ ಪಡೆಯುವ ಮುನ್ನವೇ ಹವಾಮಾನ ವೈಪರಿತ್ಯದಿಂದ ಎದುರಾದ ಮಳೆ ಮತ್ತು ಗಾಳಿಯಿಂದ ಬಹುತೇಕ ಭತ್ತದ ಬೆಳೆ ನೆಲಕ್ಕೊರಗಿರುವುದರಿಂದ ನಿರೀಕ್ಷಿತ ಇಳುವರಿ ಸಿಗಲ್ಲ. ಅದರಂತೆ ಭತ್ತದ ಬೆಲೆಯೂ ಏಕಾಏಕಿ ಕುಸಿದಿದೆ. ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಬೇಕಿದ್ದ ಕೃಷಿ ಮತ್ತು ಕಂದಾಯ ಅಧಿಕಾರಿಗಳು ನಿರ್ಲಕ್ಷೃ ತೋರುತ್ತಿದ್ದಾರೆ. ಎರಡು ದಿನವಾದರೂ ಸರ್ವೇ ಕೈಗೊಂಡಿಲ್ಲ. ನಷ್ಟಕ್ಕೊಳಗಾಗಿರುವ ರೈತ ಕುಟುಂಬದ ನೆರವಿಗೆ ಸರ್ಕಾರ ಬರಬೇಕಿದೆ. ಪ್ರತಿ ಎಕರೆಗೆ 30 ಸಾವಿರ ರೂ. ಪರಿಹಾರ ನೀಡಬೇಕು. ಅಗತ್ಯಬಿದ್ದರೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

    ಪರಿಶೀಲನೆ: ತಾಲೂಕಿನ ಸಂಗಾಪುರ, ಕಡೇಬಾಗಿಲು, ಆನೆಗೊಂದಿ, ಚಿಕ್ಕರಾಂಪುರ, ಹನುಮನಹಳ್ಳಿ, ಸಣಾಪುರ, ತಿರುಮಲಾಪರ, ರಾಂಪುರ, ಚಿಕ್ಕಬೆಣಕಲ್, ಮುಕ್ಕಂಪಿ, ಹೇಮಗುಡ್ಡ, ಲಿಂಗದಳ್ಳಿ ವ್ಯಾಪ್ತಿಯ ಭತ್ತದ ಗದ್ದೆಗೆ ಭೇಟಿ ನೀಡಿ ಪರಿಶೀಲಿಸಿದರು. ರೈತರಿಗೆ ಸಾಂತ್ವನ ಹೇಳಿದರಲ್ಲದೇ, ರೈತರ ಪರ ಸರ್ಕಾರದ ಮೇಲೆ ಒತ್ತಡ ಹಾಕುವ ಭರವಸೆ ನೀಡಿದರು. ಮುಖಂಡರಾದ ರಾಜಶೇಖರ್ ಮುಷ್ಟೂರು, ಹನುಮಂತರಾಯ, ವೀರನಗೌಡ, ಸುರೇಶಗೌರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts