More

  ಬಂಜಾರರ ಸಾಧನೆಗೆ ಸಮಾಜ ಪ್ರೇರಣೆ ನೀಡಲಿ

  ಗಂಗಾವತಿ: ನಗರದ ವಿರುಪಾಪುರ ತಾಂಡಾದಲ್ಲಿ ಬಂಜಾರ ಸಮಾಜದಿಂದ ಸದ್ಗುರು ಶ್ರೀ ಸೇವಾಲಾಲ್ ಮಹಾರಾಜರ ತಾಲೂಕು ಮಟ್ಟದ ಜಯಂತ್ಯುತ್ಸವ ಸೋಮವಾರ ಹಮ್ಮಿಕೊಳ್ಳಲಾಗಿತ್ತು.

  ನಗರದ ಶ್ರೀ ದುರ್ಗಾದೇವಿ ದೇವಾಲಯದಿಂದ ವಿರುಪಾಪುರತಾಂಡಾವರೆಗೆ ಅದ್ದೂರಿ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಕುಂಭ, ಕಳಶ ಮತ್ತು ಸಾಂಪ್ರದಾಯಿಕ ತೀಜ್ ವಾದ್ಯ ಮೇಳ ಭಾಗವಹಿಸಿದ್ದವು. ಲಂಬಾಣಿ ನೃತ್ಯ ಗಮನಸೆಳೆದಿದ್ದು, ಮಕ್ಕಳು ಸಾಂಪ್ರದಾಯಿಕ ಉಡುಗೆತೊಡುಗೆಯೊಂದಿಗೆ ಭಾಗವಹಿಸಿದ್ದರು.

  ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಮಾತನಾಡಿ, ಶ್ರಮಜೀವಿಗಳಾದ ಲಂಬಾಣಿ ಸಮುದಾಯ ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಮುಂದುವರಿಯಬೇಕಿದ್ದು, ಉನ್ನತ ಸಾಧನೆಗೆ ಸಮಾಜ ಪ್ರೇರಣೆ ನೀಡುವಂತೆ ಸಲಹೆ ನೀಡಿದರು.

  ನಗರಸಭೆ ಮಾಜಿ ಸದಸ್ಯ ರಾಮನಾಯ್ಕ, ಎಪಿಎಂಸಿ ಮಾಜಿ ಸದಸ್ಯ ತಿಪ್ಪಣ್ಣನಾಯ್ಕ, ವಡ್ಡರಹಟ್ಟಿ ಗ್ರಾಪಂ ಸದಸ್ಯ ಶಂಕರನಾಯ್ಕ, ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಪಿ. ಲಕ್ಷ್ಮಣನಾಯ್ಕ, ಗೋರ್ ಸೇನಾ ರಾಜ್ಯ ಉಪಾಧ್ಯಕ್ಷ ಶಿವಪ್ಪ ಜಾಗೋಗೋರ್, ಶ್ರೀ ಸೇವಾಲಾಲ್ ಮಹಾರಾಜ್ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಪಾಂಡುನಾಯ್ಕ, ಪದಾಧಿಕಾರಿಗಳಾದ ಹನುಮಂತಪ್ಪ, ಕೃಷ್ಣನಾಯ್ಕ, ಮುಖಂಡರಾದ ಕೆ.ಆರ್. ಕ್ಕೀರಪ್ಪ, ಪ್ರಕಾಶ ರಾಠೋಡ, ತುಳಜಾರಾಂ ನಾಯ್ಕ, ಮಂಜುನಾಥ್, ವೆಂಕಟೇಶ್ ಜಾದವ್, ರವಿಚಂದ್ರ, ಕೃಷ್ಣ ನಾಯ್ಕ, ಅಂಬರೀಷ್, ಮಂಜುನಾಥ್, ಭೋಜನಾಯ್ಕ, ಶಶಿಕುಮಾರ್ ತಾಂಡಾ ನಿಗಮ ಮಂಡಳಿ ಪ್ರತಿನಿಧಿ ರವಿ ನಾಯ್ಕ ಇತರರಿದ್ದರು.

  ಜಯಂತ್ಯುತ್ಸವ ನಿಮಿತ್ತ ತಾಲೂಕು ಮಟ್ಟದ ಕ್ರಿಕೆಟ್ ಪಂದಾವಳಿ ಮತ್ತು ಅಂಜನಾದ್ರಿ ರಕ್ತ ಭಂಡಾರ ಕೇಂದ್ರದಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts