More

  ವಿಜಯೇಂದ್ರ ಕಿರಿಯರಿರಬಹುದು, ಅವರ ತಂದೆ ಸಿಎಂ ಆಗಿದ್ದರು ನಿಜ, ಆದರೆ..: ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಶ್ರೀರಾಮುಲು ಪ್ರತಿಕ್ರಿಯೆ

  ಬಾಗಲಕೋಟೆ: ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರ ಪದಗ್ರಹಣದ ಬೆನ್ನಿಗೇ ಅವರ ವಿರುದ್ಧ ಅಲ್ಲೊಂದು ಇಲ್ಲೊಂದು ಅಪಸ್ವರ ಕೇಳಿ ಬರುತ್ತಿದ್ದು, ಅದಕ್ಕೀಗ ಮಾಜಿ ಸಚಿವ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ.

  ಬಾಗಲಕೋಟೆಯಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡುತ್ತ ವಿಜಯೇಂದ್ರ ಅಧ್ಯಕ್ಷಗಿರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ಶ್ರೀರಾಮುಲು, ವಿಜಯೇಂದ್ರ ಆಯ್ಕೆ ಬಗ್ಗೆ ಅಸಮಾಧಾನ ಹೊಂದಿರುವ ಕೆಲವು ನಾಯಕರನ್ನುದ್ದೇಶಿಸಿ ಪ್ರತಿಕ್ರಿಯೆ ನೀಡಿದರು.

  ವಿಜಯೇಂದ್ರ ಬಗ್ಗೆ ನಕಾರಾತ್ಮಕ ಎಂದರೆ ಅವರ ತಂದೆ ಮುಖ್ಯಮಂತ್ರಿ ಆಗಿದ್ದರು ಅನ್ನೋದಷ್ಟೇ ಅಲ್ಲವೇ? ಎಂದ ಶ್ರೀರಾಮುಲು, ಪಕ್ಷ ಒಮ್ಮೆ ತೀರ್ಮಾನ ತೆಗೆದುಕೊಂಡು ರಾಜ್ಯಾಧ್ಯಕ್ಷರನ್ನ ಘೋಷಣೆ ಮಾಡಿದ ನಂತರ ನಾವೆಲ್ಲ ಹಿರಿಯರು ಏನಿದ್ದೇವೆ ಅದನ್ನು ಸ್ವೀಕರಿಸಬೇಕು ಎಂದರು.

  ಇದನ್ನೂ ಓದಿ: ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?

  ವಿಜಯೇಂದ್ರ ಕಿರಿಯರು ಇರಬಹುದು, ಆದರೆ ಅವರ ತಂದೆಯವರ ಜೊತೆ ಕಷ್ಟಪಟ್ಟುಕೊಂಡು ಬಂದಿದ್ದಾರೆ. ಹಂತ ಹಂತವಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಇವತ್ತು ಪಕ್ಷ ಅವರನ್ನ ಗುರುತಿಸಿ ಅವಕಾಶ ಮಾಡಿಕೊಟ್ಟಿದೆ. ಪಕ್ಷಕ್ಕಾಗಿ ನಾವೆಲ್ಲರೂ ಅದನ್ನ ಸ್ವೀಕಾರ ಮಾಡಬೇಕು. ಸಣ್ಣಪುಟ್ಟ ವ್ಯತ್ಯಾಸಗಳು ಇದ್ದರೆ ಅದನ್ನು ಸರಿ ಮಾಡಿಕೊಂಡು ಮುಂದಿನ‌ ಲೋಕಸಭೆ ಚುನಾವಣೆ ವಿಜಯೇಂದ್ರ ನೇತೃತ್ವದಲ್ಲಿ ಎದುರಿಸಬೇಕು ಎಂದು ಶ್ರೀರಾಮುಲು ಹೇಳಿದರು.

  ಇದನ್ನೂ ಓದಿ: ಪ್ರೀತಿ ಇದ್ದರೂ ಪತ್ನಿ ಯಾಕೆ ಪತಿಯಿಂದ ವಿಮುಖಳಾಗುತ್ತಾಳೆ?; ಇದು ವಿವಾಹಿತರಿಗೊಂದು ಕಿವಿಮಾತು, ಎಚ್ಚರಿಕೆ ಕೂಡ!

  ಯತ್ನಾಳ್ ಈ ಭಾಗದ ಹಿರಿಯ ನಾಯಕರು, ತಿಳುವಳಿಕೆ-ಅನುಭವ ಇರುವವರು. ಹಿರಿಯ ನಾಯಕರಾದ ಯತ್ನಾಳ್, ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಚರಂತಿಮಠ ಮುಂತಾದ ಈ ಭಾಗದ ಎಲ್ಲರೂ ಒಂದಾಗಿ ವಿಜಯೇಂದ್ರ ಅವರನ್ನು ಮುಂದೆ ಬಿಟ್ಟು ಪಕ್ಷ ಸಂಘಟನೆ ಮಾಡುವ ಕೆಲಸ ಮಾಡುತ್ತೇವೆ ಎಂದರು.

  ವಿಜಯೇಂದ್ರ ಆಯ್ಕೆ ಬಗ್ಗೆ ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಯತ್ನಾಳ್ ಸಹ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಿದ್ದಕ್ಕೆ ನನ್ನ ವಿರೋಧ ಇದೆ ಎಂದು ಹೇಳಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಾಗಿ ಕರೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದ್ದಾರೆ. ಯತ್ನಾಳ್ ಮಾರ್ಗದರ್ಶನದಲ್ಲಿ ವಿಜಯೇಂದ್ರ ಮುಂದಕ್ಕೆ ಹೋಗುವ ಕೆಲಸ ಮಾಡ್ತಾರೆ ಎಂದು ಶ್ರೀರಾಮುಲು ಅಭಿಪ್ರಾಯ ವ್ಯಕ್ತಪಡಿಸಿದರು.

  ವಿಶ್ವಕಪ್ ಕ್ರಿಕೆಟ್ ಫೈನಲ್​ನ ಲಾಭ ಪಡೆಯಲು ಮುಂದಾದ ಪಾಲಿಕೆ; ಕೈಗೊಂಡ ಕ್ರಮ ಏನು?

  ಶಮಿಗೆ ಏಳು ವಿಕೆಟ್: ಏನಿದು ಅಚ್ಚರಿ.. ಆತನೊಬ್ಬ ನಿನ್ನೆ ಕಂಡ ಕನಸು ಇಂದು ನಿಜವಾಯ್ತು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts