More

    ಬಾಂಬೆ ದಿನಗಳ ಬಗ್ಗೆ ವಿಶ್ವನಾಥ್​ ಬರೆಯಲಿರೋ ಪುಸ್ತಕದ ಹೆಸರೇನು? ಇದರ ಹಿಂದಿನ ಉದ್ದೇಶವೇನು?

    ಮೈಸೂರು: ಮಾಜಿ ಸಚಿವ ಎಚ್​.ವಿಶ್ವನಾಥ್​ ಅವರು ಮತ್ತೊಂದು ರಾಜಕೀಯ ಪುಸ್ತಕ ಬರೆಯಲು ಮುಂದಾಗಿರುವುದಾಗಿ ಸ್ವತಃ ಅವರೇ ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್​ ಹಾಗೂ ಜೆಡಿಎಸ್​ ನೇತೃತ್ವದ ಮೈತ್ರಿ ಸರ್ಕಾರ ಬೀಳಿಸಲು ರಾಜೀನಾಮೆ ನೀಡಿ, ಮುಂಬೈನಲ್ಲಿ ದಿನಗಳನ್ನು ಕಳೆದು ರಾಜಕೀಯ ದಂಗೆಗೆ ಕಾರಣವಾದ ವಿಷಯ ಕುರಿತು ಪುಸ್ತಕ ಬರೆಯುತ್ತಿರುವುದಾಗಿ ತಿಳಿಸಿದ್ದು, ಅದಕ್ಕೆ “ದಿ ಬಾಂಬೆ ಡೇಸ್” ಎಂದು ಹೆಸರಿಟ್ಟಿರುವುದಾಗಿ ಹೇಳಿದ್ದಾರೆ.

    ಇದನ್ನೂ ಓದಿ: ಸಿಎಂ ಬಿಎಸ್​ವೈಗೆ ಮಾಜಿ ಸಚಿವ ಎಚ್​. ವಿಶ್ವನಾಥ್​ ವಾರ್ನಿಂಗ್…​!

    ಸದ್ಯಕ್ಕೆ ಮುಂದಿನ ನನ್ನ ಹಾದಿ ಸುಗಮವಾಗಿದೆ. ಇದು 40 ವರ್ಷದಿಂದ ನಡೆದು ಬಂದ ಹಾದಿ. ನಾನು ಯಾವ ಪಕ್ಷದಲ್ಲೇ ಇದ್ರು ಪಕ್ಷವನ್ನ ಪ್ರೀತಿ ಮಾಡುತ್ತೇನೆ. ಪಕ್ಷದ ನಾಯಕತ್ವದ ನಡುವಳಿಕೆ ವಿರುದ್ಧ ದಂಗೆ ಎದ್ದವನು ನಾನು. ಬಂಗಾರಪ್ಪ ಹಾಗೂ ವೀರಪ್ಪ ಮೊಯ್ಲಿ ಕಾಲದಲ್ಲಿ ನಾವೇ ಕರೆ ತಂದ ಸಿದ್ದರಾಮಯ್ಯನ ವಿರುದ್ಧ ದಂಗೆ ಎದ್ದವನು ನಾನು. ಸಮಿಶ್ರ ಸರ್ಕಾರದ ಕುಮಾರಸ್ವಾಮಿ ವಿರುದ್ಧ ದಂಗೆ ಎದ್ದವನು ಎಂದು ಹೇಳಿದರು.

    ರಾಜಕೀಯ ಭಾವನೆ ಮತ್ತು ನಂಬಿಕೆಗಳು ಮೇಲೆ ನಿಂತಿದ್ದು, ಅದಕ್ಕೆ ಇವತ್ತು ನಾನು ಪುಸ್ತಕಕ್ಕೆ ಅಣಿಯಾಗುತ್ತಿದ್ದೇನೆ. 2006ರ ಕುಮಾರಸ್ವಾಮಿ-ಯಡಿಯೂರಪ್ಪ ಮಾಡಿದ್ದು ಕ್ಷಿಪ್ರ ಕ್ರಾಂತಿಯಂತೆ. ಆದರೆ, ನಾವು ಮಾಡಿದ್ದು ಪಕ್ಷಕ್ಕೆ ದ್ರೋಹವಂತೆ. ಇದ್ಯಾವ ನ್ಯಾಯವೆಂದು ಕುಮಾರಸ್ವಾಮಿ ವಿರುದ್ಧ ಹಳ್ಳಿಹಕ್ಕಿ ವಿಶ್ವನಾಥ್​ ವ್ಯಂಗ್ಯವಾಡಿದರು.

    ಇದನ್ನೂ ಓದಿ: ಹಸಿವಿಗಿಂತಲೂ ಕರೊನಾ ಉತ್ತಮ: ಕಾರ್ಮಿಕರಲ್ಲಿ ಶುರುವಾಯ್ತು ಮತ್ತೊಂದು ಭಯ…!

    ನಾನೊಬ್ಬ ಲೇಖಕನಾಗಿ ಇದು ನನ್ನ ಕರ್ತವ್ಯ. ಮೂರು ಭಾಷೆಯಲ್ಲಿ ಈ ಪುಸ್ತಕ ರಿಲೀಸ್ ಆಗಲಿದೆ. ಈ ಪುಸ್ತಕವನ್ನು ದೆಹಲಿಯಲ್ಲಿ ಬಿಡುಗಡೆ ಮಾಡುತ್ತೇನೆ. ಬಾಂಬೆಯಲ್ಲಿ ಏನಾಯ್ತು ಅದೆಲ್ಲ ಪುಸ್ತಕದಲ್ಲಿ ಬರೆಯುತ್ತಿದ್ದೇನೆ. ಒಂದು ಸರ್ಕಾರ ಹೋಗಿ ಮತ್ತೊಂದು ಸರ್ಕಾರ ಬರಲೇಬೇಕಿದೆ. ಜನತಂತ್ರ ವ್ಯವಸ್ಥೆಯಲ್ಲಿ ಭಾವನೆ, ನಂಬಿಕೆ ಮೇಲಿನ ತಲ್ಲಣವೇನು? ಇದೆಲ್ಲವನ್ನು ಅಕ್ಷರದ ಮೂಲಕ ಜನರಿಗೆ ತಿಳಿಸುತ್ತೇನೆಂದರು.

    ರವಿ ಬೆಳಗೆರೆ ಅವರು 2006ರಲ್ಲಿ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಬಗ್ಗೆ ಬರೆದಿದ್ದಾರೆ. ಇದು ಕ್ಷೀಪ್ರ ಕ್ರಾಂತಿ ಅಲ್ಲ, ಕಾಮರಾಜ ಮಾರ್ಗದಲ್ಲಿ ಬರೆದಿದ್ದಾರೆ. ಸುಮಾರು 70 ಪುಟಗಳಲ್ಲಿ ಯಾವ ಎಸ್ಟೇಟ್‌ಗೆ ಹೋಗಿದ್ರು ಎಲ್ಲವನ್ನು ಬರೆದಿದ್ದಾರೆ. ಈ ಬಗ್ಗೆ ಬರೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಬರೆಯೋದ್ರಿಂದ ಸರ್ಕಾರಕ್ಕೆ ಏನು ಆಗಲ್ಲ. ಸರ್ಕಾರ ಗಟ್ಟಿಯಾಗಿದೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: VIDEO| ಪೈಲಟ್​​ ಗಂಡನ ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಆತ್ಮಹತ್ಯೆ: ಬೆಚ್ಚಿಬೀಳಿಸುವಂತಿದೆ ಸಿಸಿಟಿವಿ ದೃಶ್ಯ

    ನಿಮ್ಮ ಕಣ್ಣಿಗೊಂದು ಸವಾಲ್:​ ಚಿತ್ರದಲ್ಲಿರೋ ಭಾರಿ ಗಾತ್ರದ ಹೆಬ್ಬಾವು ಪತ್ತೆ ಹಚ್ಚಿದ್ರೆ ನೀವೇ ಗ್ರೇಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts