More

    ಯೋಗಿ ಆದಿತ್ಯನಾಥ್ ವಿರುದ್ಧ ಸ್ಪರ್ಧೆಗೆ ಮುಂದಾದ ಮಾಜಿ ಪೊಲೀಸ್ ಅಧಿಕಾರಿ!

    ಲಖನೌ: ಸೇವಾ ಅವಧಿ ಮುಗಿಯುವ ಮುನ್ನ ಕಡ್ಡಾಯ ನಿವೃತ್ತಿ ತೆಗೆದುಕೊಳ್ಳಲು ಆದೇಶಿಸಲ್ಪಟ್ಟ ಉತ್ತರ ಪ್ರದೇಶದ ಮಾಜಿ ಐಪಿಎಸ್​ ಅಧಿಕಾರಿ ಅಮಿತಾಭ್​ ಠಾಕೂರ್​ ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ವಿರುದ್ಧ ಸ್ಪರ್ಧೆಗಿಳಿಯಲು ಮುಂದಾಗಿದ್ದಾರೆ.

    ಅಮಿತಾಭ್ ಠಾಕೂರ್​ ಅವರ ಪತ್ನಿ ನೂತನ್​ ಠಾಕೂರ್​ ಇಂದು ಲಖನೌನಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದು, “ಆದಿತ್ಯನಾಥ್​ ಅವರು ಮುಖ್ಯಮಂತ್ರಿಯಾಗಿ ಹಲವು ತಪ್ಪು ಮತ್ತು ಭೇದಭಾವದ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಆದ್ದರಿಂದ ಅವರು ನಿಲ್ಲುವ ಕ್ಷೇತ್ರದಲ್ಲೇ ಅಮಿತಾಭ್​ ಚುನಾವಣೆ ಎದುರಿಸಲಿದ್ದಾರೆ” ಎಂದಿದ್ದಾರೆ. “ಅಮಿತಾಭ್​​ಗೆ ಇದು ಸಿದ್ಧಾಂತಗಳ ಹೋರಾಟವಾಗಲಿದೆ” ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಮೂರು ಪಾಲಿಕೆ ‘ಕೈ’ವಶ ಮಾಡಿಕೊಳ್ಳುವ ಸಿದ್ಧತೆ ಶುರು

    ಕಳೆದ ಮಾರ್ಚ್​​ 23 ರಂದು ಕೇಂದ್ರ ಗೃಹ ಸಚಿವಾಲಯದ ನಿರ್ಧಾರದ ಮೇರೆಗೆ “ಸಾರ್ವಜನಿಕ ಹಿತಾಸಕ್ತಿಯಿಂದ” ಅಮಿತಾಭ್​ ಠಾಕೂರ್​ಗೆ ಕಡ್ಡಾಯ ನಿವೃತ್ತಿ ನೀಡಲಾಗಿತ್ತು. 2028 ರವರೆಗೆ ಸೇವಾ ಅವಧಿ ಹೊಂದಿದ್ದ ಅವರು “ಉಳಿದ ಸೇವಾ ಅವಧಿಯಲ್ಲಿ ಮುಂದುವರಿಸಲು ಯೋಗ್ಯರಾಗಿಲ್ಲ” ಎಂದು ಆದೇಶದಲ್ಲಿ ಹೇಳಲಾಗಿತ್ತು ಎನ್ನಲಾಗಿದೆ.

    2015 ರಲ್ಲಿ ಸಮಾಜವಾದಿ ಪಾರ್ಟಿಯ ಮುಲಾಯಂ ಸಿಂಗ್​ ಯಾದವ್​ ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ ಕೆಲವೇ ದಿನಗಳಲ್ಲಿ ಅಮಿತಾಭ್​ ಠಾಕೂರ್​​ರನ್ನು ಸಸ್ಪೆಂಡ್​ ಮಾಡಲಾಗಿತ್ತು. ಅವರ ವಿರುದ್ಧ ವಿಜಿಲೆನ್ಸ್​ ತನಿಖೆ ಕೂಡ ಆದೇಶಿಸಲಾಗಿತ್ತು. ಆದರೆ 2016 ರ ಏಪ್ರಿಲ್​​ನಲ್ಲಿ ಅವರ ಅಮಾನತು ಆದೇಶಕ್ಕೆ ಸಿಎಟಿ ತಡೆ ನೀಡಿದ್ದು, ಸೇವೆಯನ್ನು ಮುಂದುವರಿಸಲಾಗಿತ್ತು. 2017 ರಲ್ಲಿ ಅಮಿತಾಭ್ ಠಾಕೂರ್​ ಉತ್ತರಪ್ರದೇಶದಿಂದ ಹೊರಕ್ಕೆ ವರ್ಗಾವಣೆ ಕೇಳಿದ್ದರು. ಇದೀಗ ಮಾರ್ಚ್​ನಲ್ಲಿ ಅವರಿಗೆ ಅವಧಿಗೆ ಮುಂಚಿತವಾಗಿ ಕಡ್ಡಾಯ ನಿವೃತ್ತಿ ನೀಡಲಾಗಿತ್ತು ಎಂದು ವರದಿಗಳು ತಿಳಿಸಿವೆ. (ಏಜೆನ್ಸೀಸ್)

    ಧ್ವಜಾರೋಹಣಕ್ಕೆ ವಿರೋಧ! ನಿವಾಸಿಗಳಿಗೆ ಖಡಕ್​ ಎಚ್ಚರಿಕೆ ನೀಡಿದ ಸಿಎಂ

    ರಾಹುಲ್​ ಗಾಂಧಿ ಇನ್​ಸ್ಟಾಗ್ರಾಂ ವಿಡಿಯೋ: ಫೇಸ್​​ಬುಕ್​ ಅಧಿಕಾರಿಗಳಿಗೆ ಮಕ್ಕಳ ಆಯೋಗದ ಬುಲಾವ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts