More

    ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಬಿಜೆಪಿಗೆ ಸೇರ್ಪಡೆ!

    ಬೆಂಗಳೂರು: ಕರ್ನಾಟಕ ಕೇಡರ್‌ನ ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ ದೆಹಲಿಯಲ್ಲಿಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡರು.

    ದೆಹಲಿಯ ಕೇಂದ್ರ ಬಿಜೆಪಿ ಕಚೇರಿಯಲ್ಲಿ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್ ಮತ್ತು ವಕ್ತಾರ ಸಂಬಿತ್ ಪಾತ್ರಾ ಸಮ್ಮುಖದಲ್ಲಿ ಸೇರ್ಪಡೆಗೊಂಡರು.

    ಇಂದು ಬೆಳಗ್ಗೆಯಷ್ಟೇ ಸಚಿವ ಕೆ. ಸುಧಾಕರ್​ ಅವರು ಟ್ವೀಟ್​ ಮೂಲಕ ಮಾಹಿತಿ ಖಚಿತಪಡಿಸಿದ್ದರು. ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ದಕ್ಷತೆಯಿಂದ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದು ಬಿಜೆಪಿ ಸೇರುತ್ತಿದ್ದಾರೆ. ಅವರು ಬಿಜೆಪಿ ಸೇರುತ್ತಿರುವುದು ನನಗೆ ಅತೀವ ಸಂತೋಷ ತಂದಿದೆ.ಅವರಿಗೆ ಹೃದಯಪೂರ್ವಕ ಸ್ವಾಗತ ಎಂದಿದ್ದರು.

    ಪೊಲೀಸ್​ ಇಲಾಖೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿ, ದಕ್ಷ ಅಧಿಕಾರಿ ಎಂದು ಕರೆಸಿಕೊಂಡಿದ್ದ ಅಣ್ಣಾಮಲೈ ಅವರು ಐಪಿಎಸ್​ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ರಾಜಕೀಯ ಸೇರುತ್ತಾರೆ ಎಂದು ಚರ್ಚೆಯಾಗಿತ್ತು. ಅದರಂತೆಯೇ ಇಂದು ಬಿಜೆಪಿಗೆ ಸೇರಿದ್ದು, ಇಷ್ಟು ದಿನ ಅವರ ಸೇವೆಯನ್ನು ಮಿಸ್​​ ಮಾಡಿಕೊಂಡಿದ್ದ ಜನರು ಮುಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ಅವರ ಸೇವೆಯನ್ನು ನೋಡಬಹುದಾಗಿದೆ.

    2011ನೇ ಬ್ಯಾಚ್ ಅಧಿಕಾರಿ
    1984 ಜೂ.4ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಅಣ್ಣಾಮಲೈ ಜನಿಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್​ನಲ್ಲಿ ಬಿಇ ವ್ಯಾಸಂಗ ಮಾಡಿ, ಎಂಬಿಎ ಪದವಿ ಪಡೆದಿದ್ದಾರೆ. 2011ನೇ ಬ್ಯಾಚ್​ನ ಐಪಿಎಸ್ ಅಧಿಕಾರಿ ಆಗಿದ್ದಾರೆ. ಕಾರ್ಕಳ ಉಪ ವಿಭಾಗದ ಎಎಸ್​ಪಿಯಾಗಿ ವೃತ್ತಿ ಆರಂಭ. 2013ರಲ್ಲಿ ಉಡುಪಿ ಎಸ್​ಪಿ, ನಂತರ ಚಿಕ್ಕಮಗಳೂರು ಎಸ್​ಪಿ ಆಗಿ ಸೇವೆ. 2018ರ ಅ.17ರಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ಅಧಿಕಾರ ಸ್ವೀಕಾರ.

    VIDEO| ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈಗೆ ದಕ್ಷತೆ ಪಟ್ಟ ತಂದುಕೊಟ್ಟ ರೋಚಕ ಘಟನೆಗಳಿವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts