More

    ಹರಿಯಾಣ ಮಾಜಿ ಸಿಎಂಗೆ 4 ವರ್ಷ ಜೈಲು, 50 ಲಕ್ಷ ರೂ.ದಂಡ ವಿಧಿಸಿದ ವಿಶೇಷ ಕೋರ್ಟ್​

    ನವದೆಹಲಿ: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಹರಿಯಾಣ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್​​ ಚೌಟಾಲಾ ಅವರಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿ ವಿಶೇಷ ಸಿಬಿಐ ನ್ಯಾಯಾಲಯ ಆದೇಶಿಸಿದೆ.

    ಬರೋಬ್ಬರಿ 50 ಲಕ್ಷ ರೂ. ದಂಡ ವಿಧಿಸಿದ್ದು, ಚೌಟಾಲಾ ಅವರಿಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಕೋರ್ಟ್​ ಆದೇಶಿಸಿದೆ.

    ವಿಶೇಷ ನ್ಯಾಯಾಮೂರ್ತಿ ವಿಕಾಸ್​ ಧುಲ್​ ಶುಕ್ರವಾರ ಈ ಆದೇಶ ನೀಡಿದ್ದು, 4 ವರ್ಷ ಜೈಲು ಶಿಕ್ಷೆ, 50 ಲಕ್ಷ ರೂ. ದಂಡ ಹಾಗೂ ಎಲ್ಲಾ ಆಸ್ತಿಗಳನ್ನು ಜಪ್ತಿ ಮಾಡಲು ಆದೇಶಿಸಿದ್ದಾರೆ.

    ಮೇ 21 ರಂದು ಪ್ರಕರಣದ ವಿಚಾರಣೆ ಅಂತ್ಯಗೊಳಿಸಿದ್ದ ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣ ಇದಾಗಿದೆ.

    1996 ರಿಂದ 2006ರ ನಡುವೆ ಆಸ್ತಿ ಗಳಿಕೆ ದ್ವಿಗುಣವಾಗಿದ್ದು, ಸಾಕ್ಷ್ಯಾಸಮೇತ ಇದರ ಮೂಲವನ್ನು ತೋರಿಸುವಲ್ಲಿ ಚೌಟಾಲಾ ಪರ ವಕೀಲರು ವಿಫಲರಾಗಿದ್ದರು. ಈ ಸಂಬಂಧ 2005ರಲ್ಲಿ ಸಿಬಿಐ ಮೊದಲ ಪ್ರಕರಣ ದಾಖಲಿಸಿತ್ತು. 2010 ಮಾರ್ಚ್​ 26ರಂದು ಚಾರ್ಜ್​​ಶೀಟ್​ ಸಲ್ಲಿಸಿತ್ತು.(ಏಜೆನ್ಸೀಸ್​)

    ಗ್ರಾಮಕ್ಕೆ ನುಗ್ಗಿ ಬೇವಿನಮರ ಹತ್ತಿ ಕುಳಿತ ಕರಡಿ! ಅರಣ್ಯ ಸಿಬ್ಬಂದಿಯಿಂದ ರಕ್ಷಣೆ

    ವಿಶ್ವದ ಶ್ರೀಮಂತ ಹಳ್ಳಿಗಳಲ್ಲಿ ಭಾರತದ ಈ ಗ್ರಾಮಕ್ಕಿದೆ ಸ್ಥಾನ: ಪ್ರತಿಯೊಬ್ಬರ ಖಾತೆಯಲ್ಲಿದೆ 15 ಲಕ್ಷ ರೂ.ಹಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts