More

    ಮಾಜಿ ಸಿಎಂ ಸಂಬಂಧಿಕರ ಕೊಲೆ ಪ್ರಕರಣ : ಇಬ್ಬರ ಬಂಧನ

    ನವದೆಹಲಿ: ಮಧ್ಯಪ್ರದೇಶದ ಮಾಜಿ ಸಿಎಂ ಕಮಲನಾಥ್ ಅವರ ಸಂಬಂಧಿಕರಾದ ವೃದ್ಧ ದಂಪತಿಯ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ನಾಯ್ಡಾ ಪೊಲೀಸರು ಬಂಧಿಸಿದ್ದಾರೆ. ಗ್ರೇಟರ್ ನಾಯ್ಡಾದ ಆಲ್ಫಾ-2 ಪ್ರದೇಶದಲ್ಲಿ ಬಂಗಲೆಯಲ್ಲಿ ವಾಸವಾಗಿದ್ದ 70 ವರ್ಷದ ನರೇಂದ್ರನಾಥ್ ಮತ್ತು ಅವರ ಹೆಂಡತಿ ಸುಮನ್ (65 ವರ್ಷ) ಅವರ ಕೊಲೆ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳು ಪೊಲೀಸರ ಕೈತಪ್ಪಿಸಿಕೊಂಡಿದ್ದಾರೆ.

    ಮಾಜಿ ಸಿಎಂ ಕಮಲ್​ನಾಥ್ ಅವರ ಕಸಿನ್ ಆದ ನರೇಂದ್ರ ಅವರು ದೆಹಲಿಯಲ್ಲಿ ಸ್ಪೇರ್ ಪಾರ್ಟ್ಸ್ ಬಿಸಿನೆಸ್ ನಡೆಸುತ್ತಿದ್ದರು. ಈ ಮುನ್ನ ಸಣ್ಣ ಕಳ್ಳತನಗಳನ್ನು ಮಾಡಿದ್ದ ರೋಹಿತ್ ಎಂಬುವ ನರೇಂದ್ರ ಅವರ ಪರಿಚಯ ಬೆಳೆಸಿಕೊಂಡು ಹಣ ಸಾಲ ಪಡೆದಿದ್ದ. ಆಗಾಗ ದಂಪತಿಯ ಮನೆಗೆ ಬಂದು ಹೋಗುತ್ತಿದ್ದ. ಫೆಬ್ರವರಿ 4 ರ ರಾತ್ರಿ ನರೇಂದ್ರ ಅವರ ಮನೆಯಲ್ಲಿ ಪಾರ್ಟಿಯೊಂದು ನಡೆದಿದ್ದು, ಅತಿಥಿಗಳೆಲ್ಲಾ ಹೋದ ಮೇಲೆ ರೋಹಿತ್ ತನ್ನ ಮೂವರು ಸಹಚರರೊಂದಿಗೆ ದರೋಡೆಯ ಉದ್ದೇಶದಿಂದ ಬಂದಿದ್ದಾನೆ. ಬೆಲ್ಟ್ ಮತ್ತು ಮಫ್ಲರ್ ಬಳಸಿ ನರೇಂದ್ರ ಅವರ ಕತ್ತು ಹಿಸುಕಿ ಸಾಯಿಸಿದ್ದು, ಮೇಲ್ಮಹಡಿಯಲ್ಲಿದ್ದ ಸುಮನ್ ಅವರಿಗೆ ಗುಂಡಿಕ್ಕಿ ಕೊಂದಿದ್ದಾರೆ ಎನ್ನಲಾಗಿದೆ. ದಂಪತಿಯ ಶವಗಳು ಮಾರನೆಯ ದಿನ ಪತ್ತೆಯಾಗಿದ್ದವು.

    ಇದನ್ನೂ ಓದಿ: ಪಾಕ್‌ಗೆ ತೆರಳಿದ ಕಾಶ್ಮೀರಿ ಯುವಕರು ಕಣ್ಮರೆ- ವಾಪಸ್‌ ಬಂದವರೂ ನಾಪತ್ತೆ! ಆತಂಕದ ವರದಿ ಬಿಚ್ಚಿಟ್ಟ ಭದ್ರತಾ ಪಡೆ

    ಮೃತ ನರೇಂದ್ರರ ಫೋನಿನಿಂದ ಪೊಲೀಸರಿಗೆ ಮುಖ್ಯ ಆರೋಪಿ ರೋಹಿತ್ ಮತ್ತು ದೇವ್ ಶರ್ಮಾರ ದೂರವಾಣಿ ಸಂಖ್ಯೆಗಳು ಸಿಕ್ಕಿದ್ದು, ಸ್ಥಳೀಯರನ್ನು ಮತ್ತು ಆರೋಪಿಗಳ ಸಂಬಂಧಿಕರನ್ನು ವಿಚಾರಣೆ ಮಾಡಿದರು ಎನ್ನಲಾಗಿದೆ. ದೇವ್ ಶರ್ಮಾ ತನ್ನ ಹಳ್ಳಿ ಮಧ್ಯಪ್ರದೇಶದ ಸೈಲುಲಿಯಲ್ಲಿ ಸಿಕ್ಕಿಬಿದ್ದರೆ, ರೋಹಿತ್ , ವಿಶನ್ ಮತ್ತು ಸುಭಾಷ್ ಎಂಬ ಆರೋಪಿಗಳು ಕ್ಯಾಬ್ ಬುಕ್ ಮಾಡಲು ಮೊಬೈಲ್ ಬಳಸಿದಾಗ ಅವರಿರುವ ಜಾಗ ಪತ್ತೆಯಾಗಿದೆ. ಭಾನುವಾರ ಸಂಜೆ ಗ್ರೇಟರ್ ನಾಯ್ಡಾದ ಎಟಿಎಸ್ ಕ್ರಾಸಿಂಗ್​ನಲ್ಲಿ ಅವರನ್ನು ಬಂಧಿಸಲು ಪ್ರಯತ್ನಿಸಿದಾಗ, ವಿಶನ್ ಮಾತ್ರ ಸಿಕ್ಕಿದ್ದು, ಇನ್ನಿಬ್ಬರು ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)

    ಕೆಂಪುಕೋಟೆ ಹಿಂಸಾಚಾರ ಆರೋಪಿ ಸುಖದೇವ್ ಸಿಂಗ್ ಪೊಲೀಸ್ ವಶಕ್ಕೆ

    ತಮಿಳುನಾಡಿಗೆ ಚಿನ್ನಮ್ಮ ಹೋಗುತ್ತಿದ್ದ ವೇಳೆ ಅವಘಡ, ಹೊತ್ತಿ ಉರಿದ 2 ಕಾರುಗಳು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts