More

  ಶೋಷಿತ ವರ್ಗದ ಧ್ವನಿ ದೇವರಾಜ ಅರಸು

  ಶೋಷಿತ ವರ್ಗದ ಧ್ವನಿ ದೇವರಾಜ ಅರಸು

  ಚಿಕ್ಕಮಗಳೂರು: ದಲಿತರು, ಹಿಂದುಳಿದ, ಶೋಷಿತ ವರ್ಗದವರ ಪರ ನಾಡಿನಲ್ಲಿ ಧ್ವನಿ ಎತ್ತಿ ಕಾರ್ಯಗತ ಮಾಡಿದ ವ್ಯಕ್ತಿ ಡಿ.ದೇವರಾಜ ಅರಸು ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಬಣ್ಣಿಸಿದರು.

  ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮ ದಿನಾಚರಣೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದರು.

  ಮುಖ್ಯಮಂತ್ರಿಗೂ ಮೊದಲೇ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ನಾಯಕ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 20 ಅಂಶಗಳ ಕಾರ್ಯಕ್ರಮವನ್ನು ಅನುಷ್ಠಾನ ಮಾಡಿದ ಮೊಟ್ಟಮೊದಲ ಮುಖ್ಯಮಂತ್ರಿ ಅರಸು ಎಂದರು.

  ರಾಜ್ಯದಲ್ಲಿ ಉಳುವವನೇ ಭೂಮಿ ಒಡೆಯ ಕಾಯ್ದೆಯಡಿ ಭೂರಹಿತರು ಭೂಮಿ ಪಡೆದು ಯಾರು ಆರ್ಥಿಕವಾಗಿ ಇಂದು ಸದೃಢವಾಗಿದ್ದಾರೋ ಅವರೆಲ್ಲರೂ ದೇವರಾಜು ಅರಸು ಅವರನ್ನು ಸ್ಮರಿಸಬೇಕು ಎಂದರು.

  ಬಡವರ ಏಳಿಗೆಗೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ಅರಸು. ಮೈಸೂರು ರಾಜ್ಯವನ್ನು ಕರ್ನಾಟಕವಾಗಿ ಮರು ನಾಮಕರಣ ಮಾಡಿದ ಕೀರ್ತಿ ಅವರಿಗೆ ಸಲ್ಲಬೇಕು. ಮಹಿಳೆಯರ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟು ಮಕ್ಕಳಿಗೆ ಶಿಕ್ಷಣ ದೊರೆತರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂಬುದನ್ನು ನಂಬಿದ್ದರು. ಎಲ್ಲೆಡೆ ವಸತಿ ಶಾಲೆಗಳನ್ನು ನಿರ್ವಿುಸಿ ದಲಿತ ವರ್ಗದವರು ಶಿಕ್ಷಣ ಪಡೆಯಲು ಸಹಕಾರಿಯಾಗಿದ್ದರು ಎಂದು ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಹೇಳಿದರು.

  ಜಿಪಂ ಉಪಾಧ್ಯಕ್ಷ ಬಿ.ಜೆ.ಸೋಮಶೇಖರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಂತಾ ಅನಿಲ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಖಾ ಅನಿಲ್, ಡಿಸಿ ಡಾ. ಬಗಾದಿ ಗೌತಮ್ ಎಸ್ಪಿ ಅಕ್ಷಯ್ ಹಕಾಯ್ ಮಚ್ಚೀಂದ್ರ, ಸಿಇಒ ಪೂವಿತಾ, ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್, ಬಿಎಸ್​ಪಿ ಜಿಲ್ಲಾ ಸಂಚಾಲಕ ಕೆ.ಟಿ.ರಾಧಾಕೃಷ್ಣ, ಅರಸು ಸಂಘದ ಜಿಲ್ಲಾಧ್ಯಕ್ಷ ಮಧುಕುಮಾರ್​ರಾಜ್ ಅರಸ್, ಜಗದೀಶ್, ನಾಗೇಶ್, ಸತ್ಯನಾರಾಯಣರಾಜ್ ಅರಸ್, ಯೋಗೀಶ್​ರಾಜ್ ಅರಸ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts