More

    ರಾಜ್ಯ ಸರ್ಕಾರ ತಾತ್ಸಾರ, ಜನರ ಬದುಕು ದುರ್ಬರ: ಮಾಜಿ ಸಿಎಂ ಬೊಮ್ಮಾಯಿ ಕಿಡಿ; ಎರಡನೇ ದಿನವೂ ಕಲಾಪ ಬಹಿಷ್ಕಾರ, ಧರಣಿ

    ಬೆಂಗಳೂರು: ಮಳೆ ಅಭಾವದಿಂದ ತಲೆದೋರಿದ ಬವಣೆ, ಕಾನೂನು ಮತ್ತು ಸುವ್ಯವಸ್ಥೆ ಕುಸಿತದ ಬಗ್ಗೆ ಕಾಂಗ್ರೆಸ್ ಸರ್ಕಾರದ ತಾತ್ಸಾರ ಧೋರಣೆ ತಳೆದಿದ್ದು, ಜನರ ಬದುಕು ಅಸ್ಥಿರವಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದರು. ರಾಜ್ಯ ಸರ್ಕಾರ, ವಿಧಾನಸಭೆ ಸ್ಪೀಕರ್ ನಡೆ ಖಂಡಿಸಿ ಎರಡನೇ ದಿನವಾದ ಶುಕ್ರವಾರವೂ ವಿಧಾನ ಮಂಡಲದ ಉಭಯ ಸದನಗಳ ಕಲಾಪ ಬಹಿಷ್ಕರಿಸಿ, ವಿಧಾನಸೌಧದ ಗಾಂಧಿ ಪ್ರತಿಮೆ ಧರಣಿ ನಿರತರನ್ನು ಉದ್ದೇಶಿಸಿ ಅವರು ಮಾತನಾಡಿದರು.

    ಮಳೆ ಹೊಯ್ದಾಟದಿಂದ ಎರಡು ಬಾರಿ ಬಿತ್ತನೆ ಮಾಡಿದ ಬೆಳೆ ಬಾರದೇ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಸಿದ್ದರಾಮಯ್ಯ ಮೊದಲ ಆಡಳಿತಾವಧಿ (2013 ರಿಂದ 2018)ಯಲ್ಲಿ ನಾಲ್ಕು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡ ದಾಖಲೆಯಿದೆ ಎಂದು ವಾಗ್ದಾಳಿ ನಡೆಸಿದರು. ಕುಡಿಯುವ ನೀರಿಲ್ಲದೆ ಸಾವಿರಾರು ಹಳ್ಳಿಗಳು ತತ್ತರಿಸಿವೆ. ತಕ್ಷಣ ಯುದ್ಧೋಪಾದಿಯಲ್ಲಿ ಟ್ಯಾಂಕರ್ ಮೂಲಕ ಸಾಗಣೆ ಸೇರಿ ತುರ್ತು ತಾತ್ಕಾಲಿಕ ಪರಿಹಾರ ಕ್ರಮಕೈಗೊಂಡಿಲ್ಲ. ಆದರೆ, ರಾಜಕೀಯ ಲಾಭ, ಅನುಕೂಲತೆಗಳ ಬಗ್ಗೆ ಹೆಚ್ಚಿನ ಆಸಕ್ತಿವಹಿಸಿದೆ ಎಂದು ಬೊಮ್ಮಾಯಿ ದೂಷಿಸಿದರು.

    ದಲಿತರಿಗೆ ದ್ರೋಹ: ನಮ್ಮ ಬಜೆಟ್​ನಲ್ಲಿ ಪದವಿವರೆಗೆ ಉಚಿತ ವಿದ್ಯಾಭ್ಯಾಸ, ಶಾಲಾ ಮಕ್ಕಳಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಹೇಳಿದ್ದನ್ನು ಸಿಎಂ ಸಿದ್ದರಾಮಯ್ಯ ಕೈಬಿಟ್ಟಿದ್ದಾರೆ. ಐದು ಗ್ಯಾರಂಟಿಗಳ ಜಾರಿಗೆ ಪರಿಶಿಷ್ಟ ಜಾತಿ, ಪಂಗಡಗಳ ಕಲ್ಯಾಣಕ್ಕೆ ಮೀಸಲಿಟ್ಟ 13 ಸಾವಿರ ಕೋಟಿ ರೂ. ವರ್ಗಾಯಿಸಿ, ದಲಿತರಿಗೆ ದ್ರೋಹ ಎಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ವಿದ್ಯಾರ್ಥಿಗಳು, ರೈತರು, ಸರ್ಕಾರಿ ನೌಕರರು, ದುಡಿಯುವ ಜನರು ಸಂಕಷ್ಟಕ್ಕೆ ಸಿಲುಕಿದ್ದರೆ, ಗ್ಯಾರಂಟಿಗಳಿಗೆ ಹಣ ಹೊಂದಿಸುವ ಧಾವಂತದಲ್ಲಿ ಜನ ವಿರೋಧಿ ಬಜೆಟ್ ಮಂಡಿಸಲಾಗಿದೆ ಎಂದು ಟೀಕಿಸಿದರು. ಕರೊನಾ ಸೋಂಕಿನ ಉಪಟಳವನ್ನು ಬಿಜೆಪಿ ಸರ್ಕಾರವು ಸಮರ್ಥವಾಗಿ ನಿಭಾಯಿಸಿ, ಪರಿಣಾಮಕಾರಿಯಾಗಿ ನಿಯಂತ್ರಿಸಿತು. ಈ ಕಾರಣಕ್ಕೆ 3.27 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲು ಸಿದ್ದರಾಮಯ್ಯ ಅವರಿಗೆ ಸಾಧ್ಯವಾಗಿದೆ ಎಂದು ಹೇಳಿದರು.

    ಭ್ರಷ್ಟಾಚಾರದಲ್ಲಿ ನಂಬರ್ ಒನ್: ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಎಂಬ ವರದಿ ಬಂದಿದೆ. ಗುಮಾಸ್ತನಿಂದ ಕಾರ್ಯದರ್ಶಿವರೆಗೆ ವರ್ಗಾವಣೆಗೆ ರೇಟ್ ಫಿಕ್ಸ್ ಆಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಗೆ ಐಎಫ್​ಎಸ್ ಅಧಿಕಾರಿ ನೇಮಕ ಮಾಡಬೇಕು. ಅದರ ಬದಲು ಸಂಬಂಧಿಕನೆಂದು ಗುತ್ತಿಗೆ ನೌಕರನನ್ನು ಕಾರ್ಯದರ್ಶಿಯಾಗಿ ನೇಮಿಸಲಾಗಿದೆ ಎಂದು ಬೊಮ್ಮಾಯಿ ಆರೋಪಿಸಿದರು. ಐಎಎಸ್ ಅಧಿಕಾರಿಗಳ ಸೇವಾ ನಿಯಮದ ಬಗ್ಗೆ ಈಗಾಗಲೆ ನಿವೃತ್ತ ಐಎಎಸ್ ಅಧಿಕಾರಿ ಮದನಗೋಪಾಲ ವಿವರವಾಗಿ ಪತ್ರದ ಮೂಲಕ ಹೇಳಿದ್ದಾರೆ.

    ತಿರುಗೇಟು: ಸಣ್ಣ ವಯಸ್ಸಿನ ಸ್ಪೀಕರ್ ಯು.ಟಿ. ಖಾದರ್ ಕಾಂಗ್ರೆಸ್​ನ ಭೋಜನ ಕೂಟಕ್ಕೆ ತೆರಳಿ ಅವರ ಬಾಗಿಲು ಕಾದರು. ಇದರಿಂದ ನಿಮಗಷ್ಟೇ ಅಲ್ಲ, ಇಡೀ ರಾಜ್ಯಕ್ಕೆ ಅವಮಾನವಾಗಿದೆ. ಸದನದಲ್ಲಿ ಪ್ರತಿಭಟನೆ ಮಾಡಿದರೆ ಕರೆದು ಚಹಾ ಕೊಡಬೇಕಿತ್ತಾ? ಎಂದು ಸ್ಪೀಕರ್ ಕೇಳಿದ್ದಾರೆ. ನಾವು ಸ್ಪೀಕರ್ ಚಹಾ ಕುಡಿಯಲು ಸದನಕ್ಕೆ ಬಂದಿಲ್ಲ. ಜನರ ಪರವಾಗಿ ಚರ್ಚೆಗೆ ಬಂದಿದ್ದು, ನಾವೇ ನಿಮಗೆ ಪ್ರತಿದಿನ ಚಹಾ ಕುಡಿಸುತ್ತೇವೆ ಎಂದು ಬೊಮ್ಮಾಯಿ ತಿರುಗೇಟು ನೀಡಿದರು.

    ರಾಜ್ಯವ್ಯಾಪಿ ಪ್ರತಿಭಟನೆ ಇಂದು: ಕಾಂಗ್ರೆಸ್ ಸರ್ಕಾರದ ವೈಫಲ್ಯ, ಕಾನೂನು ಮತ್ತು ಸುವ್ಯವಸ್ಥೆ ಕುಸಿತ, ಐಎಎಸ್ ಅಧಿಕಾರಿಗಳ ದುರ್ಬಳಕೆ ಮತ್ತು ವಿಧಾನಸಭೆ ಸ್ಪೀಕರ್ ನಡೆ ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಗುವುದು ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ತಿಳಿಸಿದ್ದಾರೆ.

    ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

    ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts