More

    ಟೀಮ್ ಇಂಡಿಯಾ ಮಾಜಿ ಆಟಗಾರ ವಿರೇದ್ರ ಸೆಹ್ವಾಗ್, ಎಡುಲ್ಜಿಗೆ ಐಸಿಸಿ ವಿಶೇಷ ಗೌರವ: ಶ್ರೀಲಂಕಾದ ಅರವಿಂದ್ ಡಿಸಿಲ್ವಗೂ ಸ್ಥಾನ

    ದುಬೈ: ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹಾಗೂ ಮಹಿಳಾ ತಂಡದ ಮಾಜಿ ನಾಯಕಿ ಡಯಾನಾ ಎಡುಲ್ಜಿ ಜತೆಗೆ ಶ್ರೀಲಂಕಾದ ಅರವಿಂದ್ ಡಿಸಿಲ್ವ ಅವರಿಗೆ ಐಸಿಸಿ ಹಾಲ್ ಆ್ ೇಮ್ ಗೌರವ ಲಭಿಸಿದೆ.
    ಡಯಾನಾ ಎಡುಲ್ಜಿ ಈ ಗೌರವಕ್ಕೆ ಭಾಜನರಾದ ಭಾರತದ ಮೊದಲ ಮಹಿಳಾ ಕ್ರಿಕೆಟರ್ ಎನಿಸಿದ್ದಾರೆ.
    ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಐಸಿಸಿ ಹಾಲ್ ಆ್ ೇಮ್‌ಗೆ ಸೇರ್ಪಡೆಯಾದ ಭಾರತದ 8ನೇ ಪುರುಷ ಕ್ರಿಕೆಟರ್ ಎನಿಸಿದ್ದಾರೆ. ದೆಹಲಿ ಮೂಲದ ಸೆಹ್ವಾಗ್ 1999ರಿಂದ 2013ರವರೆಗೆ ಟೀಮ್ ಇಂಡಿಯಾ ಪರ ಆಡಿ 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ವಿಜೇತರಾಗಿದ್ದರು. 2008ರಲ್ಲಿ ದಕ್ಷಿಣ ಆಫ್ರಿಕಾ ಎದುರು ಟೆಸ್ಟ್‌ನಲ್ಲಿ ವೈಯಕ್ತಿಕ ಶ್ರೇಷ್ಠ 319 ರನ್ ಗಳಿಸಿರುವ ಸೆಹ್ವಾಗ್, ಏಕದಿನ ಕ್ರಿಕೆಟ್‌ನಲ್ಲೂ ಸರ್ವಾಧಿಕ 209 ರನ್ ಬಾರಿಸಿದ್ದಾರೆ. ಭಾರತದ ಪರ ಟೆಸ್ಟ್‌ನಲ್ಲಿ ಅವಳಿ ತ್ರಿಶತಕ ಸಿಡಿಸಿರುವ ಏಕೈಕ ಬ್ಯಾಟರ್ ಎನಿಸಿದ್ದಾರೆ. 104 ಟೆಸ್ಟ್‌ನಲ್ಲಿ 8,586 ರನ್ ಪೇರಿಸಿದ್ದು, 40 ವಿಕೆಟ್ ಪಡೆದರೆ, ಏಕದಿನ ಕ್ರಿಕೆಟ್‌ನ 251 ಪಂದ್ಯಗಳಲ್ಲಿ 8,273 ರನ್ ಹಾಗೂ 96 ವಿಕೆಟ್ ಗಳಿಸಿದ್ದಾರೆ.
    ‘ನನ್ನ ಜೀವನದ ಬಹುಭಾಗವನ್ನು ನಾನು ಹೆಚ್ಚು ಇಷ್ಟಪಟ್ಟ ‘ಕ್ರಿಕೆಟ್ ಚೆಂಡನ್ನು ಹೊಡೆಯುತ್ತ’ ಕಳೆದಿದ್ದಕ್ಕಾಗಿ ನಾನು ತುಂಬ ಕೃತಜ್ಞನಾಗಿದ್ದೇನೆ’ ಎಂದು ಸೆಹ್ವಾಗ್, ಐಸಿಸಿಯ ಹಾಲ್ ಆ್ ೇಮ್ ಜ್ಯೂರಿಗಳಿಗೆ ಧನ್ಯವಾದ ಹೇಳಿದ್ದಾರೆ.
    1996ರ ವಿಶ್ವಕಪ್ ವಿಜೇತ ಶ್ರೀಲಂಕಾ ತಂಡದ ಪ್ರಮುಖ ಆಟಗಾರ ಅರವಿಂದ ಡಿಸಿಲ್ವ ಕೂಡ ಈ ಗೌರವಕ್ಕೆ ಪಾತ್ರರಾಗಿದ್ದು, 19 ವರ್ಷಗಳ ವೃತ್ತಿ ಜೀವನದಲ್ಲಿ ಡಿಸಿಲ್ವ 20 ಟೆಸ್ಟ್ ಶತಕ ಸಿಡಿಸಿದ್ದು, ಶ್ರೀಲಂಕಾ ಪರ ಈ ಸಾಧನೆ ಮಾಡಿದ ಮೂರನೇ ಆಟಗಾರ ಎನಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 11 ಶತಕ ಸಿಡಿಸಿದ್ದಾರೆ. 1996ರ ವಿಶ್ವಕಪ್ ೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಅಜೇಯ 107 ರನ್ ಸಿಡಿಸಿದ್ದರು.

    ಎಡುಲ್ಜಿಗೆ ವಿಶೇಷ ಗೌರವ
    ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ತೋರಿದ ವಿಶಿಷ್ಠ ಕಾರ್ಯಕ್ಕೆ ಎಡುಲ್ಜಿಗೆ ಈ ಗೌರವ ಸಂದಿದೆ. ಪಶ್ಚಿಮ ವಲಯ ರೈಲ್ವೇಸ್‌ನ ನಿರ್ವಾಹಕರಾಗಿ ಕಾರ್ಯನಿರ್ವಹಿಸಿದ್ದ ಎಡುಲ್ಜಿ ಭಾರತದಲ್ಲಿ ಪ್ರತಿಭಾವಂತ ಮಹಿಳಾ ಕ್ರಿಕೆಟಿಗರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಶ್ರಮಿಸಿದರು ಮತ್ತು ಪಶ್ಚಿಮ ಮತ್ತು ಭಾರತೀಯ ರೈಲ್ವೆಯ ಕ್ರೀಡಾ ನೀತಿಯನ್ನು ರೂಪಿಸಲು ಸಹಾಯ ಮಾಡಿದ್ದರು. ಪುರುಷ ಮತ್ತು ಮಹಿಳೆಯರ ಹಾಲ್ ಆ್ ೇಮ್‌ಗೆ ಸೇರ್ಪಡೆಗೊಂಡ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್ ಆಗಿರುವುದಕ್ಕೆ ನಿಜಕ್ಕೂ ಹೆಮ್ಮೆ ಎನಿಸಿದೆ ಎಂದು ಎಡುಲ್ಜಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts