More

    ಸಾಂಕ್ರಾಮಿಕ ರೋಗ ನಿರ್ವಹಣಾ ತಂಡ ರಚನೆ

    ಹುಣಸೂರು: ತಾಲೂಕಿನ ಗಾವಡಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬಿಳಿಗೆರೆ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಭಾರತಿ ನೇತೃತ್ವದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮತ್ತು ನಿರ್ವಹಣಾ ತಂಡವನ್ನು ರಚಿಸಲಾಯಿತು.

    ತಂಡದ ಸದಸ್ಯ ಕಾರ್ಯದರ್ಶಿಯಾಗಿ ಪಿಡಿಒ ಶೀಲಾ, ಸದಸ್ಯರಾದ ಗ್ರಾ.ಪಂ. ಸದಸ್ಯರು, ವಾಟರ್‌ಮನ್‌ಗಳು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಹನುಮಂತು, ಆಶಾ ಕಾರ್ಯಕರ್ತರು ನೇಮಕಗೊಂಡರು.

    ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಪಂ ಅಧ್ಯಕ್ಷೆ ಭಾರತಿ, ಬಿಳಿಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ಈವರೆಗೆ ವಾಂತಿ, ಭೇದಿ ಸೇರಿದಂತೆ ಯಾವುದೇ ಸಾಂಕ್ರಾಮಿಕ ರೋಗ ಕಂಡುಬಂದಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ತಂಡವನ್ನು ರಚಿಸಲಾಗಿದೆ. ತಂಡದ ಪ್ರತಿಯೊಬ್ಬ ಸದಸ್ಯರು ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ನೀರಿನ ಸಮರ್ಪಕ ನಿರ್ವಹಣೆ, ಪೂರೈಕೆ ಕುರಿತು ಗಮನಹರಿಸಬೇಕು. ಗ್ರಾಮಸ್ಥರು ರೋಗದಿಂದ ಬಳಲಿದಲ್ಲಿ ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸುವ ಕಾರ್ ಮಾಡುವ ಮೂಲಕ ಗ್ರಾಮೀಣರಲ್ಲಿ ಅರಿವು ಮೂಡಿಸಬೇಕು ಎಂದರು.

    ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಹನುಮಂತು ಮಾತನಾಡಿ, ವಾಟರ್‌ಮನ್‌ಗಳು ನೀರು ಸರಬರಾಜು ವೇಳೆ ಪೈಪ್‌ಗಳು, ವಾಲ್ವ್‌ಗಳು ಒಡೆದು ಕಶ್ಮಲ ನೀರು ಸೇರದಂತೆ ಕ್ರಮ ವಹಿಸಬೇಕು. ನೀರು ಪೂರೈಕೆಗೂ ಮುನ್ನ ನೀರಿನ ಕ್ಲೋರಿನೇಶನ್ ಕಡ್ಡಾಯವಾಗಿ ಮಾಡುವುದು ಅಗತ್ಯ. ಸಾರ್ವಜನಿಕರು ನಲ್ಲಿಯಲ್ಲಿ ನೀರು ಹಿಡಿಯುವ ಜಾಗದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕುದಿಸಿ ಆರಿಸಿದ ನೀರಿನ ಸೇವನೆ ಅತ್ಯಗತ್ಯ ಎಂದರು. ಸಭೆಯಲ್ಲಿ ಆರೋಗ್ಯ ಸಿಬ್ಬಂದಿ ಶ್ರೀನಿವಾಸ್‌ರಾವ್ ಸಿಂಧೆ, ಇಂದಿರಾ, ಮಾದೇವಿ, ಆಶಾ ಕಾರ್ಯಾಕರ್ತೆಯರು, ವಾಟರ್‌ಮನ್‌ಗಳು ಹಾಜರಿದ್ದರು.

    23ಊಓ3: ಹುಣಸೂರು ತಾಲೂಕು ಬಿಳಿಗೆರೆ ಗ್ರಾಮ ಪಂಚಾಯಿತಿಯಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣ ಮತ್ತು ನಿರ್ವಹಣಾ ತಂಡದ ಸದಸ್ಯರನ್ನು ನೇಮಿಸಲಾಯಿತು. ಅಧ್ಯಕ್ಷೆ ಭಾರತಿ, ಪಿಡಿಒ ಶೀಲಾ, ಹನುಮಂತು, ಇಂದಿರಾ, ಶ್ರೀನಿವಾಸರಾವ್ ಸಿಂಧೆ ಇತರರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts