More

    ಧಾರವಾಡದಲ್ಲಿ ರೈತ ಸಮಾವೇಶ

    ವಿಜಯವಾಣಿ ಸುದ್ದಿಜಾಲ ಗದಗ
    ಧಾರವಾಡದ ಹಳಿಯಾಳ ರಸ್ತೆಯಲ್ಲಿ ಇರುವ ಎಂ. ಜಿ. ಹಿರೇಮಠ (ರಪಾಟಿ) ಕಲ್ಯಾಣ ಮಂಟಪದಲ್ಲಿ ಜು.21 ರಂದು ಬೆಳಗ್ಗೆ 10.30ಕ್ಕೆ ರಾಜ್ಯ ರೈತ ಸಂಘದಿಂದ 43ನೇ ರೈತ ಹುತ್ಮಾತ ದಿನಾಚರಣೆ ಮತ್ತು ರೈತ ಚಳುವಳಿಯ ಮುಂದಿನ ಹೋರಾಟದ ಘೋಷಣಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಮುತ್ತನಗೌಡ ಚೌಡರಡ್ಡಿ ಹೇಳಿದರು.
    ನಗರದ ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಹಿರಿಯ ರೈತ ಹೋರಾಟಗಾರ ಸೋಮನಾದೀಶ್ವರ ರಾವ್​ ಉದ್ಘಾಟನೆ ಮಾಡುವರು. ಬಡಗಲಪುರ ನಾಗೇಂದ್ರ ಅಧ್ಯಕ್ಷತೆ ವಹಿಸುವರು. ಶಾಸಕ ದರ್ಶನ ಪುಟ್ಟಣ್ಣಯ್ಯ, ಚಾಮರಸ ಮಾಲೀ ಪಾಟೀಲ, ಎಸ್​.ಆರ್​.ಹಿರೇಮಠ ಬಾಗವಹಿಸುವರು ಎಂದರು.
    ಡಾ. ಸ್ವಾಮಿನಾಥನ್​ ವರದಿ ಶಿಫಾರಸ್ಸಿನಂತೆ, ಉತ್ಪಾದನಾ ವೆಚ್ಚದ ಜತೆಗೆ ಶೇ.50 ರಷ್ಟು ಲಾಭಾಂಶ ಸೇರಿಸಿ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಮಾಡಬೇಕು. ಮಹದಾಯಿ ಕಳಸಾ ಬಂಡೂರಿ ಯೋಜನೆಯನ್ನು ಶ್ರೀವಾಗಿ ಕಾರ್ಯಗತಗೊಳಿಸಬೇಕು ಎಂದು ಆಗ್ರಹಿಸಿದರು.

    ಬರಗಾಲ ಎಂದು ಘೋಷಿಸಿ:
    ಬಜೆಟ್​ನಲ್ಲಿ ರೈತರಿಗೆ ಯಾವುದೇ ವಿಶೇಷ ಘೋಷಣೆ ಮಾಡಿಲ್ಲ. ಉಚಿತ ಗ್ಯಾರಂಟಿ ಯೋಜನೆಗಳಿಂದಾಗಿ ರೈತರಿಗೆ ಅಗತ್ಯ ಯೋಜನೆಗಳನ್ನು ಕೈಬಿಟ್ಟಿದ್ದಾರೆ. ಗದಗ ಜಿಲ್ಲೆಯಲ್ಲಿ ಬರ ಆವರಿಸಿದ್ದು, ಅಗತ್ಯಕ್ಕೆ ತಕ್ಕಷ್ಟು ಮಳೆ ಇಲ್ಲದೇ ರೈತರು ತತ್ತರಿಸಿದ್ದಾರೆ. ಹಾಗಾಗಿ, ಸರ್ಕಾರ ಈ ಕೂಡಲೇ ಬರಗಾಲ ಎಂದು ಘೋಷಿಸಿ ವಿಶೇಷ ಪ್ಯಾಕೇಜ್​ ನೀಡಬೇಕು ಎಂದು ಆಗ್ರಹಿಸಿದರು.
    ರೈತ ಸಂಘಟನೆಗೆ ಒತ್ತು:
    ಜಿಲ್ಲೆಯಲ್ಲಿ ರೈತ ಸಂಟನೆ ಇನ್ನೂ ಗಟ್ಟಿ ಗೊಳಿಸುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ. ಅದರಲ್ಲೂ ಮುಂಡರಗಿ, ಶಿರಹಟ್ಟಿ ಭಾಗದಲ್ಲಿ ರೈತ ಸಂಟನೆ ಬೆಳೆಸಲಾಗುತ್ತದೆ. ಜತೆಗೆ ರೈತ ಸಂಟನೆ ಬಲಿಷ್ಠಗೊಳಿಸಲು ಇನ್ನೂ ಹಲವಾರು ಯೋಜನೆ ಹಮ್ಮಿಕೊಳ್ಳಲಾಗುತ್ತದೆ ಎಂದರು.
    ಮಹಾದೇವಗೌಡ ಪಾಟೀಲ, ಮಲ್ಲಿಕಾರ್ಜುನ ಸಂಕನಗೌಡ್ರ, ವಿಠ್ಠಲ ಗಣಾಚಾರಿ, ಮೋಹನ ಸೇರಿದಂತೆ ಇತರರು ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts