More

    ದತ್ತಾಂಶ ಸಂಗ್ರಹದಲ್ಲಿ ಸಮೀಕ್ಷೆಗಳ ಪಾತ್ರ ಪ್ರಮುಖ

    ರಾಯಚೂರು: ವೈಜ್ಞಾನಿಕವಾಗಿ ನೀತಿ ರೂಪಿಸಲು ದತ್ತಾಂಶಗಳ ಅವಶ್ಯ ಬಹಳ ಮುಖ್ಯವಾಗಿದೆ. ದತ್ತಾಂಶ ಸಂಗ್ರಹ ಕಾರ್ಯದಲ್ಲಿ ಸಮೀಕ್ಷೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಹೇಳಿದರು.

    ವಿವಿ ಸಭಾಂಗಣದಲ್ಲಿ ಔಪಚಾರಿಕ ಶಿಕ್ಷಣ ಹಾಗೂ ನಿಯಮಿತ ಉದ್ಯೋಗದಲ್ಲಿಲ್ಲದ ಯುವಕರ ಸಮೀಕ್ಷೆ ಕುರಿತು ಎನ್‌ಎಸ್‌ಎಸ್ ಅಧಿಕಾರಿಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಬುಧವಾರ ಮಾತನಾಡಿದರು. ಯುವಕರು ಶಿಕ್ಷಣದಿಂದ ಹೊರಗುಳಿವಿಕೆಗೆ ಕಾರಣಗಳೇನು ಮತ್ತು ಪರಿಣಾಮಗಳೇನು ಎಂಬುದರ ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.

    ಶಿಕ್ಷಣ ಇಲ್ಲದಿದ್ದರೆ ಕಡಿಮೆ ಆದಾಯ

    ಯುವಕರಿಗೆ ಶಿಕ್ಷಣ ಸರಿಯಾದ ರೀತಿಯಲ್ಲಿ ಸಿಗದಿದ್ದಾಗ ಅವರ ಮೇಲೆ ಯಾವ ರೀತಿಯ ಪರಿಣಾಮವಾಗಲಿದೆ ಎನ್ನುವುದನ್ನು ಸಮೀಕ್ಷೆಯಿಂದ ತಿಳಿಯಬಹುದಾಗಿದೆ. ಶಿಕ್ಷಣ ಇಲ್ಲದೆ ಕಡಿಮೆ ಆದಾಯ ಇರುವವರಿಗೆ ಮಾರ್ಗದರ್ಶನ ನೀಡಿ ಸುಧಾರಿಸಬೇಕಾಗಿದೆ ಎಂದು ಹರೀಶ ರಾಮಸ್ವಾಮಿ ತಿಳಿಸಿದರು.
    ಉಪ ಕುಲಸಚಿವ ಡಾ.ಜಿ.ಎಸ್.ಬಿರಾದರ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ಸುಧಾರಣೆಯೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುವುದು. ದತ್ತು ಪಡೆದ ಹಳ್ಳಿಗಳಲ್ಲಿ ಸಮೀಕ್ಷೆ ಕೈಗೊಳ್ಳಬೇಕು. ಸ್ವಯಂ ಸೇವಕರು ಸಮೀಕ್ಷೆ ಕಾರ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕೆಂದು ತಿಳಿಸಿದರು.

    ಇದನ್ನೂ ಓದಿ: ಲಂಚ ತೆಗೆದುಕೊಂಡಿದ್ದನ್ನು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ: ಸಿಎಂ ಸಿದ್ದರಾಮಯ್ಯ

    ಉಪನ್ಯಾಸಕರಾದ ಲಕ್ಷ್ಮಣ ಯಾದವ, ಡಾ.ಪದ್ಮಜಾ ದೇಸಾಯಿ, ಕೃಷ್ಣ, ಅನಿಲ್ ಅಪ್ರಾಳ, ವಿವಿಧ ಕಾಲೇಜುಗಳ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts