More

    ಹುಬ್ಬಳ್ಳಿಯಲ್ಲೇ ಖೋಟಾ ನೋಟು ಮುದ್ರಣ

    ಹುಬ್ಬಳ್ಳಿ: ಇಲ್ಲಿಯ ಕೇಶ್ವಾಪುರ ಠಾಣೆ ವ್ಯಾಪ್ತಿಯ ಸುಳ್ಳ ರಸ್ತೆಯಲ್ಲಿ ಗುರುವಾರ ಖೋಟಾ ನೋಟು ಚಲಾವಣೆ ಮಾಡಲು ಯತ್ನಿಸಿದ್ದ ತಂಡವನ್ನು ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದು, ನೋಟುಗಳನ್ನು ಹುಬ್ಬಳ್ಳಿಯಲ್ಲೇ ಮುದ್ರಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.

    100, 500 ಮುಖಬೆಲೆಯ ಖೋಟಾ ನೋಟುಗಳನ್ನು ಮೂರುಸಾವಿರ ಮಠದ ಬಳಿಯ ನಿವಾಸಿ ಗೋಪಿನಾಥ ಹಬೀಬ ಎಂಬಾತ ಕಲರ್ ಪ್ರಿಂಟಿಂಗ್ ಮಷಿನ್​ನಲ್ಲಿ ಪ್ರಿಂಟ್ ಮಾಡುತ್ತಿದ್ದ. ಈತ ಸ್ಟೇಶನರಿ ಅಂಗಡಿ ಮಾಲೀಕ ಎನ್ನಲಾಗಿದೆ. ಸಹಚರರಿಂದ 8 ಸಾವಿರ ರೂ. ಅಸಲಿ ನೋಟು ಪಡೆದು 10 ಸಾವಿರ ರೂ. ನಕಲಿ ನೋಟುಗಳನ್ನು ಕೊಟ್ಟು ಚಲಾವಣೆ ಮಾಡಿಸುತ್ತಿದ್ದುದಾಗಿ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಗೊತ್ತಾಗಿದೆ.

    ಹಳೇ ಹುಬ್ಬಳ್ಳಿಯ ಶ್ರೀನಿವಾಸ ತಟ್ಟಿ, ಸಲೀಂ ಮುಲ್ಲಾ ಹಾಗೂ ದೇವರಗುಡಿಹಾಳದ ಮೌಲಾಸಾಬ ಗುಡಿಹಾಳ ಇವರು ಗೋಪಿನಾಥನ ಕಡೆ ನಕಲಿ ನೋಟು ಪಡೆಯುತ್ತಿದ್ದರು.

    ಸದ್ಯ ನಾಲ್ವರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತನಿಖೆ ಮುಂದುವರಿದಿದೆ.

    ಗದ್ದಲ ಇರುವಲ್ಲಿ ಚಲಾವಣೆ?: ಗೋಪಿನಾಥ ಮುದ್ರಣದಲ್ಲಿ ಅಷ್ಟೊಂದು ನೈಪುಣ್ಯ ಸಾಧಿಸಿದವನಲ್ಲ. ಉತ್ತಮ ದರ್ಜೆಯ ಕಾಗದ ಬಳಸಿ ನೋಟು ಮುದ್ರಿಸುತ್ತಿದ್ದನು. ಪೊಲೀಸರು ವಶಪಡಿಸಿಕೊಂಡಿರುವ ಖೋಟಾ ನೋಟುಗಳು ಸಾರ್ವಜನಿಕರಿಗೆ ಸಲೀಸಾಗಿ ಸಂಶಯ ಮೂಡುವಂತಿವೆ. ಆರೋಪಿಗಳು ಹೆಚ್ಚು ಗದ್ದಲ, ನೂಕುನುಗ್ಗಲು ಇರುವ ಅಂಗಡಿಗಳಲ್ಲಿ ಗಮನ ಬೇರೆಡೆ ಸೆಳೆದು ಖೋಟಾನೋಟು ಚಲಾವಣೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts