More

    ಜಿರಾಫೆ ಅಂದ್ರೇನೇ ಎತ್ತರ- ಅದ್ರಲ್ಲೂ ಗಿನ್ನೆಸ್ ದಾಖಲೆ ಅಂದ್ರೆ ಇನ್ನೆಷ್ಟು ಎತ್ತರ ಇರಬಹುದು ಅದು…!

    ಸಿಡ್ನಿ: ಪ್ರಾಣಿ ಪ್ರಪಂಚದಲ್ಲಿ ಜಿರಾಫೆ ಎಂದರೇನೇ ಅದರ ಎತ್ತರ ರೂಪ ಕಣ್ಣಮುಂದೆ ಬಂದು ನಿಲ್ಲುತ್ತದೆ. ಅಂಥದ್ರದಲ್ಲೂ ಗಿನ್ನೆಸ್ ದಾಖಲೆ ಎಂದರೆ ಆ ಜಿರಾಫೆ ಎಷ್ಟು ಎತ್ತರ ಇರಬಹುದು! ಆಸ್ಟ್ರೇಲಿಯಾದ ಕ್ವೀನ್ಸ್​ಲ್ಯಾಂಡ್​ನ ಮೃಗಾಲಯದಲ್ಲಿ ಇರುವ ಜಿರಾಫೆಯೊಂದು ಅದರ ಎತ್ತರದ ಕಾರಣಕ್ಕೇ ಗಿನ್ನೆಸ್ ದಾಖಲೆಗೆ ಭಾಜನವಾಗಿದೆ.

    ಗಿನ್ನೆಸ್ ದಾಖಲೆ ನಿರ್ಮಿಸಿದ ಜಿರಾಫೆಯ ವಯಸ್ಸು 12. ಹೆಸರು ಫಾರೆಸ್ಟ್​! ನ್ಯೂಜಿಲೆಂಡ್​ನ ಆಕ್ಲಂಡ್​ ಮೃಗಾಲಯದಲ್ಲಿ 2007ರಲ್ಲಿ ಜನಿಸಿದ ಫಾರೆಸ್ಟ್​ ಎರಡು ವರ್ಷ ವಯಸ್ಸಿದ್ದಾಗ ಆಸ್ಟ್ರೇಲಿಯಾದ ಮೃಗಾಲಯಕ್ಕೆ ರವಾನೆಯಾಗಿದೆ. ಅದೀಗ 12 ಮರಿಗಳ ಅಪ್ಪ!

    ಇದನ್ನೂ ಓದಿ: ಈ ಗ್ರಾಮದಲ್ಲಿ ಆನ್​ಲೈನ್ ಕ್ಲಾಸ್​ ಫೇಲಾಯಿತು- ಶಾಲೆಯೇ ಮೊಬೈಲ್ ಆಯಿತು ನೋಡಿ!

    ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿರುವ ಈ ಜಿರಾಫೆಯ ಎತ್ತರ 18 ಅಡಿ 8 ಇಂಚು. ಇದುವರೆಗೆ ಅಳತೆ ಮಾಡಲಾದ ಜಿರಾಫೆಗಳ ಪೈಕಿ ಇದುವೇ ಅತಿ ಎತ್ತರದ್ದು ಎಂಬ ಕೀರ್ತಿಗೆ ಫಾರೆಸ್ಟ್ ಭಾಜನವಾಗಿದೆ. ಹೀಗಾಗಿ ಫಾರೆಸ್ಟ್ ಹೆಸರಿನಲ್ಲಿ ಗಿನ್ನೆಸ್ ದಾಖಲೆಯ ಪ್ರಮಾಣಪತ್ರವೂ ಮುದ್ರಿತವಾಗಿದೆ. ಅದನ್ನು ಮೃಗಾಲಯಕ್ಕೆ ಹಸ್ತಾಂತರಿಸಿದೆ ಗಿನ್ನೆಸ್ ಸಂಸ್ಥೆ. (ಏಜೆನ್ಸೀಸ್)

    ಫಾರಿನ್ ಕಲರ್ ಟಿವಿ ಆಸೆ ಬಿಟ್ಟುಬಿಡಿ: ಇನ್ನೇನಿದ್ರೂ ಮೇಡ್ ಇನ್ ಇಂಡಿಯಾ ಜಮಾನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts