More

    ಆರು ಪ್ರಧಾನಿಗಳ ಸಂಪುಟದಲ್ಲಿ ಕೇಂದ್ರ ಸಚಿವರಾಗಿದ್ದೂ ದಾಖಲೆ, ಗೆಲುವಿನ ಅಂತರದಲ್ಲೂ ಗಿನ್ನೆಸ್ ದಾಖಲೆ!

    ಪಟನಾ: ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಅಧಿಕಾರದಲ್ಲಿದ್ದಾಗ, ಅದೇ ರೀತಿ ಬಿಜೆಪಿ ನೇತೃತ್ವದ ಎನ್​ಡಿಎ ಅಧಿಕಾರದಲ್ಲಿದ್ದಾಗಲೂ ಸಚಿವರಾಗಿದ್ದವರು ರಾಮವಿಲಾಸ್ ಪಾಸ್ವಾನ್​. ಹೀಗೆ ಆರು ಪ್ರಧಾನಿಗಳ ಸಚಿವ ಸಂಪುಟದಲ್ಲಿ ಸಚಿವರಾಗಿ ದಾಖಲೆ ನಿರ್ಮಿಸಿದವರು ಪಾಸ್ವಾನ್​.

    ಗಿನ್ನೆಸ್ ದಾಖಲೆ

    ಹಾಜಿಪುರ ಲೋಕಸಭಾ ಕ್ಷೇತ್ರದಿಂದ 1977ರಲ್ಲಿ ಕಣಕ್ಕಿಳಿದಿದ್ದ ಪಾಸ್ವಾನ್ 4.24 ಲಕ್ಷ ಮತಗಳ ಅಂತದಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದ್ದರು.

    ಮೊಟ್ಟ ಮೊದಲ ಬಾರಿ 1989ರಲ್ಲಿ ಕೇಂದ್ರ ಸಚಿವರಾದರು. ಅಂದು ವಿಶ್ವನಾಥ ಪ್ರತಾಪ್ ಸಿಂಗ್ ಪ್ರಧಾನಮಂತ್ರಿಯಾಗಿದ್ದರು. ಪಾಸ್ವಾನ್ ಅವರು 1989ರ ಡಿಸೆಂಬರ್ 5ರಂದು ಕಾರ್ಮಿಕ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು, 1990ರ ನವೆಂಬರ್ 10ರ ತನಕ ಮುಂದುವರಿದಿದ್ದರು. ನಂತರ, 1996ರ ಜೂನ್​ 1 ರಂದು ರೈಲ್ವೆ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಆ ಸಂದರ್ಭದಲ್ಲಿ ಎಚ್​.ಡಿ.ದೇವೇಗೌಡ ಅವರು ಪ್ರಧಾನಿಯಾಗಿದ್ದರು. ನಂತರದಲ್ಲಿ ಇಂದ್ರ ಕುಮಾರ್ ಗುಜ್ರಾಲ್ ಅವರು ಪ್ರಧಾನಿಯಾದಾಗಲೂ ರೈಲ್ವೆ ಸಚಿವರಾಗಿ ಮುಂದುವರಿದರು. 1998ರ ಮಾರ್ಚ್ 19ರ ತನಕ ರೈಲ್ವೆ ಸಚಿವರಾಗಿದ್ದರು.

    ಇದನ್ನೂ ಓದಿ: ಏನಾಗಿತ್ತು ಕೇಂದ್ರ ಸಚಿವ ರಾಮ್ ವಿಲಾಸ್​ ಪಾಸ್ವಾನ್​ಗೆ? ಕೇಂದ್ರಕ್ಕಿದು ಎರಡನೇ ಆಘಾತ

    ಆ ನಂತರದಲ್ಲಿ 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸಚಿವ ಸಂಪುಟ ರಚನೆಯಾದಾಗ ಅಕ್ಟೋಬರ್ 13ರಂದು ಸಂವಹನ ಮತ್ತು ಇನ್​ಫಾರ್ಮೇಶನ್ ಟೆಕ್ನಾಲಜಿ ಸಚಿವರಾಗಿ ಅಧಿಕಾರ ಸ್ವೀಕರಿಸಿ 2001ರ ಸೆಪ್ಟೆಂಬರ್ 1ರ ತನಕ ಮುಂದುವರಿದರು. ಅದಾಗಿ, ಮೈನ್ಸ್ ಸಚಿವರಾಗಿ 2002ರ ಏಪ್ರಿಲ್ 29ರ ತನಕ ಕಾರ್ಯ ನಿರ್ವಹಿಸಿದ್ದರು.

    ಇದನ್ನೂ ಓದಿ: ಕೇಂದ್ರ ಸಚಿವ ರಾಮ್​ ವಿಲಾಸ್ ಪಾಸ್ವಾನ್ ನಿಧನ

    ಮುಂದೆ, ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ರಚನೆಯಾದಾಗ 2004ರ ಮೇ 23ರಿಂದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿ 2009ರ ಮೇ 22ರ ತನಕ ಮುಂದುವರಿದ್ರು. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ರಚನೆಯಾದಾಗ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವರಾಗಿ ಕೆಲಸ ನಿರ್ವಹಿಸಿದ್ದರು.

    ‘ಅಧಿಕಾರ ಸಿದ್ಧಾಂತ’ ಒಂದಕ್ಕೇ ಅಂಟಿಕೊಂಡ ಕಾರಣ ಮೈತ್ರಿಕೂಟಗಳ ಆಪ್ತಮಿತ್ರರಾಗಿದ್ದರು ಅವರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts