More

    ಮತ್ತೊಮ್ಮೆ ಸಾಬೀತಾದ ತಾಯಿ ಮಮತೆ, ಚೀತಾಗಳಿಂದ ಮರಿಯನ್ನು ರಕ್ಷಿಸಿದ ದಿಟ್ಟ ಜಿರಾಫೆ

    ಬೆಂಗಳೂರು: ಮನುಷ್ಯರಿರಲಿ, ಪ್ರಾಣಿಗಳಿರಲಿ.. ತಾಯಿ ತಾಯಿಯೇ. ಮಕ್ಕಳು-ಮರಿ ಎಂದು ಬಂದಾಗ ತಾಯಿ ಯಾರನ್ನೂ ಲೆಕ್ಕಿಸುವುದಿಲ್ಲ ಎಂಬುದನ್ನು ಇಲ್ಲೊಂದು ಜಿರಾಫೆ ಮತ್ತೊಮ್ಮೆ ಸಾಬೀತುಪಡಿಸಿದೆ.

    ತನ್ನ ಮರಿಯೊಂದಿಗಿದ್ದ ತಾಯಿ ಜಿರಾಫೆಯೊಂದು ಚೀತಾಗಳನ್ನೂ ಹಿಮ್ಮೆಟ್ಟಿಸಿ ಮರಿಯನ್ನು ರಕ್ಷಿಸಿಕೊಂಡಿದೆ. ಕಾಡಂಚಿನ ಬಯಲೊಂದರಲ್ಲಿ ಮರಿ ಮೇಲೆ ಎರಗಲು ಬಂದ ಚೀತಾಗಳನ್ನು ಅದು ದಿಟ್ಟವಾಗಿ ಎದುರಿಸಿದೆ.

    ಈ ಸನ್ನಿವೇಶ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಐಎಫ್​ಎಸ್​ ಅಧಿಕಾರಿ ಸುಸಾಂತ ನಂದ ಅವರು ಟ್ವಿಟರ್​ನಲ್ಲಿ ಆ ವಿಡಿಯೋ ಹಂಚಿಕೊಂಡಿದ್ದು, ವೈರಲ್​ ಆಗಿದೆ. “ತಾಯಿ ಇಂಥ ಧೈರ್ಯವನ್ನು ಅದೆಲ್ಲಿಂದ ತಂದುಕೊಳ್ಳುತ್ತಾಳೆ ಎಂಬುದೇ ನನಗೆ ಅಚ್ಚರಿ” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಹತ್ತು ಸಾವಿರಕ್ಕೂ ಅಧಿಕ ಮಂದಿ ಆ ವಿಡಿಯೋ ವೀಕ್ಷಿಸಿದ್ದು, ತಾಯಿ ಜಿರಾಫೆಯ ಧೈರ್ಯಕ್ಕೆ ಟ್ವೀಟಿಗರೂ ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts