ಬೆಂಗಳೂರು: ಬಿಎಂಟಿಸಿ ಗುತ್ತಿಗೆ ಆಧಾರದಲ್ಲಿ ಪಡೆಯುತ್ತಿರುವ 90 ಮಿನಿ ಎಲೆಕ್ಟ್ರಿಕ್ ಬಸ್ಗಳು ಎರಡು ಹಂತದಲ್ಲಿ ಪೂರೈಕೆಯಾಗಲಿದ್ದು, 6 ತಿಂಗಳೊಳಗಾಗಿ ಎಲ್ಲ ಬಸ್ಗಳು ನಿಗಮಕ್ಕೆ ಸೇರ್ಪಡೆಗೊಳ್ಳಲಿವೆ. ಸ್ಮಾರ್ಟ್ಸಿಟಿ ಯೋಜನೆ ಅಡಿಯಲ್ಲಿ ಲಭ್ಯವಾಗುವ 50 ಕೋಟಿ ರೂ. ಅನುದಾನ ಬಳಸಿ ಬಿಎಂಟಿಸಿ 90 ಮಿನಿ ಎಲೆಕ್ಟ್ರಿಕ್ ಬಸ್ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯುತ್ತಿದೆ. ಎನ್ಟಿಪಿಸಿ ವಿದ್ಯುತ್ ವ್ಯಾಪಾರ್ ನಿಗಮ ಲಿಮಿಟೆಡ್ ಟೆಂಡರ್ ಪಡೆಯುವಲ್ಲಿ ಸಫಲವಾಗಿದ್ದು, ಸಂಸ್ಥೆಗೆ ಬಿಎಂಟಿಸಿ ಪ್ರತಿ ಕಿ.ಮೀ. ಸೇವೆಗೆ 44 ರೂ. ನೀಡಲಿದೆ.
ಒಂಭತ್ತು ಮೀಟರ್ ಉದ್ದದ 31 ಆಸನ ಸಾಮರ್ಥ್ಯದ ಬಸ್ಗಳನ್ನು ಎನ್ಟಿಪಿಸಿ ಪೂರೈಸಲಿದೆ. ಎರಡು ಹಂತದಲ್ಲಿ ಬಸ್ ಪೂರೈಕೆ ಮಾಡುವಂತೆ ಬಿಎಂಟಿಸಿ ಸೂಚಿಸಲಿದೆ. ಕಾರ್ಯಾದೇಶ ನೀಡಿದ ಆರು ತಿಂಗಳ ಒಳಗಾಗಿ ಬಸ್ ಪೂರೈಸಬೇಕಿದ್ದು, ಮೊದಲ ಮತ್ತು ಎರಡನೇ ಹಂತದಲ್ಲಿ ತಲಾ 45 ಬಸ್ಗಳನ್ನು ನೀಡುವಂತೆ ಷರತ್ತು ವಿಧಿಸಲಾಗುತ್ತಿದೆ.
ಇದನ್ನೂ ಓದಿ: 7 ವರ್ಷದ ಮಗನಿಗೆ ನಿದ್ರೆ ಮಾತ್ರೆ ತಿನ್ನಿಸಿ ಸಾಯಿಸಿದ್ಲು; ಗಂಡ-ಅಪ್ಪ-ಅವಳೂ ಡಾಕ್ಟರ್; ಆದ್ರೂ ಮಾಡಿದ್ದು ಜೀವ ತೆಗೆಯೋ ಕೆಲಸ!
ಸಂಸ್ಥೆಯಿಂದ ನಿರ್ವಹಣೆ: ಒಪ್ಪಂದದ ಷರತ್ತಿನ ಅನ್ವಯ ಕಾರ್ಯಾದೇಶ ಪಡೆದ ಸಂಸ್ಥೆಯೇ ಬಸ್ ಹಾಗೂ ಅದಕ್ಕೆ ಅಗತ್ಯವಿರುವ ಚಾಲಕರನ್ನು ಒದಗಿಸುವುದರ ಜತೆಗೆ ಬಸ್ಗಳ ನಿರ್ವಹಣೆ ಮಾಡಲಿದೆ. ಬಸ್ಗಳನ್ನು ಚಾರ್ಜ್ ಮಾಡಲು ಚಾರ್ಜಿಂಗ್ ಘಟಕ ಸ್ಥಾಪನೆಯ ಹೊಣೆಯೂ ಸಂಸ್ಥೆಯದ್ದಾಗಿದ್ದು, ಅದಕ್ಕೆ ಅಗತ್ಯವಿರುವ ಸ್ಥಳವನ್ನು ಬಿಎಂಟಿಸಿ ಆಯ್ದ ಡಿಪೋಗಳಲ್ಲಿ ನೀಡಲಿದೆ. ಈ ಎಲೆಕ್ಟ್ರಿಕ್ ಬಸ್ಗಳನ್ನು ಮೆಟ್ರೋ ಫೀಡರ್ ಸೇವೆಗೆ ನಿಯೋಜಿಸಲು ಬಿಎಂಟಿಸಿ ತೀರ್ಮಾನಿಸಿದೆ.
ಎಲ್ಲರಿಗೂ ಸಿಗಲ್ಲ ಇಂಥ ಚಾನ್ಸ್! ಇಬ್ಬರು ಪ್ರಿಯತಮೆಯರನ್ನು ಒಂದೇ ಮಂಟಪದಲ್ಲಿ ಮದುವೆಯಾದ ಭೂಪ!
ಡ್ಯೂಟಿ ಮುಗಿಸಿ ರಾತ್ರಿ ಬಂದವ ಮಗಳ ಬಾಯಿಗೆ ಬಟ್ಟೆ ತುರುಕುತ್ತಿದ್ದ.. ಕೈಕಾಲು ಕಟ್ಟಿ ಹೊಡೆಯುತ್ತಿದ್ದ…